Home Mangalorean News Kannada News ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ 350ಕ್ಕೂ ಅಧಿಕ ಬೈಕ್ ಗಳನ್ನು ಜಪ್ತಿ ಮಾಡಿದ...

ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ 350ಕ್ಕೂ ಅಧಿಕ ಬೈಕ್ ಗಳನ್ನು ಜಪ್ತಿ ಮಾಡಿದ ಪೊಲೀಸರು

Spread the love

ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ 350ಕ್ಕೂ ಅಧಿಕ ಬೈಕ್ ಗಳನ್ನು ಜಪ್ತಿ ಮಾಡಿದ ಪೊಲೀಸರು

ಉಡುಪಿ: ಮಹಾಮಾರಿ ಕೊರೋನಾ ಇಡಿ ಜಗತ್ತನ್ನೆ ನಡುಗಿಸಿದೆ. ರಾಜ್ಯದಲ್ಲಿ ಅನೇಕ ಕಟ್ಟು ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗುತ್ತಿದೆ. ಆದರೂ ಜನ ಬೈಕ್ ಏರಿಕೊಂಡು ರೌಂಡ್ ಹೊಡೆಯುತ್ತಿದ್ದಾರೆ. ಗುರುವಾರ ಅನಾವಶ್ಯಕವಾಗಿ ತಿರುಗಾಡುವವರ ವಾಹನಗಳನ್ನು ಕಾಪು ಮತ್ತು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 11 ರ ವರೆಗೆ ಸಮಯ ನಿಗದಿಪಡಿಸಿದ್ದು ಅದರ ಬಳಿಕ ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುವವರ ವಿರುದ್ದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಅದರಂತೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣಾಧಿಕಾರಿ ತಿಮ್ಮೇಶ್ ಅವರ ನೇತೃತ್ವದಲ್ಲಿ ಕಾರಣವಿಲ್ಲದೆ ತಿರುಗಾಡುತ್ತಿದ್ದ 15 ಬೈಕ್ ಗಳನ್ನು ಜಪ್ತಿ ಮಾಡಿದರೆ ಕಾಪು ಕ್ರೈ ಪಿಎಸ್ ಐ ಯೂನುಸ್ ಗಡ್ಡೇಕರ್ ಅವರ ನೇತೃತ್ವದಲ್ಲಿ ಉದ್ಯಾವರ ಪಿತ್ರೋಡಿ ಬಳಿ ಸುಮಾರು 11 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ಕುಂದಾಪುರ, ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಹಲವಾರು ಬೈಕ್ ಗಳನ್ನು ಪಿಎಸ್ ಐ ಹರೀಶ್ ನಾಯ್ಕ್ ಮತ್ತು ಶ್ರೀಧರ್ ನಾಯ್ಕ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಕಳೆದ ಮಾರ್ಚ 26 ರಿಂದ ಬೈಕ್ ಗಳನ್ನು ಸೀಜ್ ಮಾಡುತ್ತಿದ್ದಾರೆ. ಎಪ್ರಿಲ್ 9ರ ತನಕ ಜಿಲ್ಲೆಯಲ್ಲಿ ಒಟ್ಟು 350ಕ್ಕೂ ಅಧಿಕ ಬೈಕ್ ಗಳನ್ನು ಸೀಜ್ ಮಾಡಲಾಗಿದೆ. ಬೈಕ್ ಗಳ ವಶಕ್ಕೆ ತೆಗೆದುಕೊಳ್ಳುವ ಕಾರ್ಯ ಈಗ ನಿರಂತರವಾಗಿ ನಡೆಯುತ್ತಿದೆ.


Spread the love

Exit mobile version