Home Mangalorean News Kannada News ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿ – ಜಿಲ್ಲಾಧಿಕಾರಿ ಜಗದೀಶ್

ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿ – ಜಿಲ್ಲಾಧಿಕಾರಿ ಜಗದೀಶ್

Spread the love

ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿ – ಜಿಲ್ಲಾಧಿಕಾರಿ ಜಗದೀಶ್

ಉಡುಪಿ: ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಲಾಕ್ ಡೌನ್ ಆದೇಶವನ್ನು ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ವೀಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು ಸೋಮವಾರ ಮಧ್ಯರಾತ್ರಿಯಿಂದಲೇ ಸರಕಾರದ ಆದೇಶದಂತೆ ಲಾಕ್ ಡೌನ್ ಮಾಡಲಾಗುವುದು ಆದ್ದರಿಂದ ಮಂಗಳವಾರ ಬೆಳಿಗ್ಗೆ ಯಾರೂ ಕೂಡ ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಯಾರಾದರೂ ಹೊರಗಡೆ ಬಂದಲ್ಲಿ ಅಂತಹವರ ವಿರುದ್ದ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಲಿದೆ. ಯಾಕೆಂದರೆ ರಾಜ್ಯ ಸರಕಾರ ಈಗಾಗಲೇ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದು ಅದನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಮಾಡಲಿದ್ದೇವೆ.

ನಮ್ಮ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸೇಕ್ಷನ್ 144 ಜಾರಿಗೆ ಮಾಡಲಾಗಿದೆ ಇನ್ನು ಮುಂದೆ ಕರ್ಫ್ಯೂ ಕೂಡ ಜಾರಿಗೆ ಬರಲಿದ್ದು ಯಾರೂ ಕೂಡ ಅನಾವಶ್ಯಕವಾಗಿ ಹೊರಗಡೆ ಬರಬಾರದು. ತುರ್ತು ಸಂದರ್ಭದಲ್ಲಿ ಕೆಲವೊಂದು ಸೇವೆಗಳು ನಾಗರಿಕರಿಗೆ ಲಭ್ಯವಿದೆ. ಅವಶ್ಯಕ ಸೇವೆಗಳಾದ ಆಹಾರ, ಪಡಿತರ, ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣು ಖರೀದಿಸಲು ಸರಕಾರ ಅವಕಾಶ ನೀಡಿದೆ. ಯಾರಿಗೆ ತುರ್ತು ಸೇವೆಗಳು ಅಗತ್ಯವಿದೆಯೋ ಅಂತಹವರು ಮಾತ್ರ ಹೊರಗಡೆ ಬರಬೇಕು ಅಲ್ಲದೆ ವಾಹನ ಸಂಚಾರ ಕೂಡ ನಿಷೇಧಿಸಲಾಗಿದೆ.

ಮುಂದಿನ ಹತ್ತು ದಿನಗಳ ಕಾಲ ಉಡುಪಿ ಜಿಲ್ಲೆಯ ಜನರು ಮನೆಯಲ್ಲೇ ಇದ್ದು ಕೊರೋನಾ ವೈರಸ್ ಹೋಗಲಾಡಿಸಲು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಜಗದೀಶ್ ಮನವಿ ಮಾಡಿದ್ದಾರೆ.


Spread the love

Exit mobile version