ಉಡುಪಿ : ಜಿಲ್ಲೆಯ ಹಿರಿಯ ಆರೋಗ್ಯ ಅಧಿಕಾರಿಗೆ ಕೊರೋನಾ ಪಾಸಿಟಿವ್ ದೃಢ
ಉಡುಪಿ: ಉಡುಪಿ ಜಿಲ್ಲೆಯ ಹಿರಿಯ ಆರೋಗ್ಯ ಅಧಿಕಾರಿ ಅವರಿಗೆ ಕೂಡ ಕೋರೊನಾ ಪಾಸಿಟಿವ್ ದೃಢಗೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಕೋರೊನಾ ನಿರ್ವಹಣೆಯಲ್ಲಿ ಫ್ರಂಟ್ ಲೈನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಆರೋಗ್ಯ ಅಧಿಕಾರಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದ್ದು ಆರೋಗ್ಯ ಇಲಾಖಾ ಕಚೇರಿಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖಾ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಕಚೇರಿಯನ್ನು ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.