ಉಡುಪಿ ಟೈಗರ್ಸ್ನ್ನು ಮಣಿಸಿದ ಯುನೈಟೆಡ್ ಉಲ್ಲಾಳ

Spread the love

ಉಡುಪಿ ಟೈಗರ್ಸ್ನ್ನು ಮಣಿಸಿದ ಯುನೈಟೆಡ್ ಉಲ್ಲಾಳ

ಮಂಗಳೂರು: ನವಮಂಗಳೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಅಲ್ಮಝೈನ್ ವೈಟ್ ಸ್ಟೋನ್ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಮೊದಲ ಪಂದ್ಯದಲ್ಲಿ ಯುನೈಟೆಡ್ ಉಲ್ಲಾಳ ತಂಡವು ಉಡುಪಿ ಟೈಗರ್ಸ್ ತಂಡದ ವಿರುದ್ಧ 6 ವಿಕೇಟುಗಳ ಅಂತgದ ವೀರೋಚಿತ ಜಯವನ್ನು ಸಾಧಿಸಿತು. ಟಾಸ್‍ಗೆದ್ದು ಬ್ಯಾಟಿಂಗಿಗಿಳಿದ ಉಡುಪಿ ತಂಡವು ಅಸಿಫ್ 39, ನಾಗ 28 ಇವರ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರುಗಳಲ್ಲಿ 9 ವಿಕೇಟುಗಳ ನಷ್ಟಕ್ಕೆ 139 ರನ್‍ಗಳನ್ನು ಕಲೆ ಹಾಕಿತು. ಉಲ್ಲಾಳ ತಂಡದ ಮಿತ್ರಕಾಂತ್ ಯಾಧವ್ ಅತ್ಯತ್ತಮ ಬೌಲಿಂಗ್ ನಡೆಸಿ 21 ರನ್‍ಗಳಿಗೆ ನಾಲ್ಕು ವಿಕೇಟುಗಳನ್ನು ಕಿತ್ತುಕೊಂಡರು.

mpl-first-day

ಉತ್ತರವಾಗಿ ಉಲ್ಲಾಳ ತಂಡವು ನಾಯಕ ನಿತಿನ್ ಮೂಲ್ಕಿಯವರ ಅಜೇಯ 78, ಮಿತ್ರಕಾಂತ್ ಯಾದವ್‍ರವರ ಅಜೇಯ 53 ರನ್‍ಗಳ ನೆರವಿನಿಂದ 18.1. ಓವರುಗಳಲ್ಲಿ ವಿಜಯವನ್ನು ದಾಖಲಿಸಿತು. ಸಾಧಿಕ್ ಕೀರ್ಮಾನಿ ಆರಂಭಿಕನಾಗಿ ಬಿರುಸಿನ 18 ರನ್ ಗಳಿಸಿ ಔಟಾದರು. ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ನಿತಿನ್ ಮೂಲ್ಕಿ ಮತ್ತು ಮಿತ್ರಕಾಂತ್ ಯಾದವ್‍ರವರು ಜಂಟಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರು.

ಪ್ರೆಸಿಡೆಂಟ್ ಕುಂದಾಪುರ ತಂಡಕ್ಕೆ ಜಯ

ಇನ್ನೊಂದು ಪಂದ್ಯದಲ್ಲಿ ಪ್ರೆಸಿಡೆಂಟ್ ಸಿಕ್ಸರ್ಸ್ ತಂಡವು ಸ್ಪಾಕ್ ್ ಎವೆಂಜರ್ಸ್ ಬೋಳಾರ ತಂಡದ ವಿರುದ್ಧದ ಹೋರಾಟಕಾರಿ ಪಂದ್ಯದಲ್ಲಿ 3 ವಿಕೇಟುಗಳ ಅಂತರದ ಜಯವನ್ನು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಸ್ಪಾರ್ಕ್ ತಂಡವು ಕೆ.ಸಿ. ಕಾರ್ಯಪ್ಪ, ಬಿ. ಅಖಿಲ್‍ರವರ ಬಿಗು ಬೌಲಿಂಗ್ ಧಾಳಿಯನ್ನು ಸಮರ್ಥವಾಗಿ ಎದುರಿಸಿ 20 ಓವರುಗಳಲ್ಲಿ 8 ವಿಕೇಟುಗಳನ್ನು ಕಳೆದುಕೊಂಡು 150 ರನ್‍ಗಳ ಹೋರಾಟಕಾರಿ ಮೊತ್ತವನ್ನು ದಾಖಲಿಸಿತು. ಇಫ್ರಾನ್ 28, ಸಚಿನ್ 33, ಹರ್ಷಿತ್ 23, ಇಬ್ರಾಹಿಂ 13 ಓಟಗಳನ್ನು ಗಳಿಸಿದರೆ ಕಾರ್ಯಪ್ಪ 22ಕ್ಕೆ 4, ಅಖಿಲ್ 18ಕ್ಕೆ 2 ವಿಕೇಟುಗಳನ್ನು ಪಡೆದರು.

ಮಾಶುಖ್ – ನೆಹಾಲ್‍ರವರ ಭರ್ಜರಿ ಆಟದ ಮೂಲಕ ವಿಜಯದ ಗುರಿಯತ್ತ ದಾಪುಗಾಲಿಕ್ಕಿ ಮುನ್ನಡೆದ ಕುಂದಾಪುರ ತಂಡವು ವಿಜಯದ ಸನಿಹಕ್ಕೆ ಬಂದಾಗ ಕೆಲವೊಂದು ವಿಕೇಟುಗಳನ್ನು ಕಳೆದುಕೊಂಡು ಆತಂಕವನ್ನು ಎದುರಿಸಿತಾದರೂ 18ನೆಯ ಓವರಿನಲ್ಲಿ 3 ವಿಕೇಟುಗಳ ಅಂತರದ ವಿಜಯವನ್ನು ದಾಖಲಿಸಿತು. ಝಾಹಿರ್ 21,ಅಖಿಲ್ 22 ರನ್‍ಗಳನ್ನು ಗಳಿಸಿದರು. ಸ್ಪಾರ್ಕ್‍ನ ಪವನ್ 15ಕ್ಕೆ 2 ವಿಕೇಟುಗಳನ್ನು ಪಡೆದರೆ, ಸ್ಟಾಲಿನ್, ದಿಕಾಂಶು ಮತ್ತು ಕಾರ್ತಿಕ್‍ರವರು ತಲಾ ಒಂದೊಂದು ವಿಕೇಟುಗಳನ್ನು ಪಡೆದರು. ಮಾಶುಕ್ ಪಂದ್ಯ ಶ್ರೇಷ್ಠ ಗೌರವವನ್ನು ಪಡೆದರು,.


Spread the love