Home Mangalorean News Kannada News ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀಯರ ಸಂಘಟನೆ ನೂತನ ಅಧ್ಯಕ್ಷರಾಗಿ ಜೆನೆಟ್ ಬಾರ್ಬೋಜಾ ಆಯ್ಕೆ

ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀಯರ ಸಂಘಟನೆ ನೂತನ ಅಧ್ಯಕ್ಷರಾಗಿ ಜೆನೆಟ್ ಬಾರ್ಬೋಜಾ ಆಯ್ಕೆ

Spread the love

ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀಯರ ಸಂಘಟನೆ ನೂತನ ಅಧ್ಯಕ್ಷರಾಗಿ ಜೆನೆಟ್ ಬಾರ್ಬೋಜಾ ಆಯ್ಕೆ

ಉಡುಪಿ : ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀಯರ ಸಂಘಟನೆ ಇದರ 2018-19 ರ ಸಾಲಿನ ನೂತನ ಅಧ್ಯಕ್ಷರಾಗಿ ಮುದರಂಗಡಿ ಚರ್ಚಿನ ಜೆನೆಟ್ ಬಾರ್ಬೊಜಾ ಅವರು ಆಯ್ಕೆಯಾಗಿದ್ದಾರೆ. ಜಾನೆಟ್ ಬಾರ್ಬೋಜಾ ಅವರು ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಒರ್ವ ಸಮಾಜ ಸೇವಕಿಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ವಿಲ್ಮಾ ಪಿಂಟೊ ಸಾಸ್ತಾನ, ಕಾರ್ಯದರ್ಶಿ ಕ್ಲೋಟಿಲ್ಡಾ ಡಿ’ಸೋಜಾ ಕಾರ್ಕಳ ಟೌನ್, ಸಹಕಾರ್ಯದರ್ಶಿ ಸಿಂತಿಯಾ ಪಿರೇರಾ ಮಿಯಾರ್, ಕೋಶಾಧಿಕಾರಿ  ಕ್ಲಾರಾ ರೇಗೊ ಕಲ್ಯಾಣಪುರ, ಮೊತಿಯಾಂ ಪತ್ರಿಕೆ ಸಂಪಾದಕಿ ಲವೀನಾ ಸಿಕ್ವೇರಾ ಪಾಂಬೂರು, ಸಹ ಸಂಪಾದಕಿ ಜೊಸ್ಪಿನ್ ರೊಡ್ರಿಗಸ್ ಕುಂದಾಪುರ.

ಪದಾಧಿಕಾರಿಗಳ ಆಯ್ಕೆಯನ್ನು ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀಯರ ಸಂಘಟನೆ ಇದರ ಸಚೇತಕಿ ಸಿಸ್ಟರ್ ಜಾನೇಟ್ ಫೆರ್ನಾಂಡಿಸ್ ನೇರವೇರಿಸಿದರು. ಈ ವೇಳೆ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾದ ವಂ. ರೆಜಿನಾಲ್ಡ್ ಪಿಂಟೊ ಉಪಸ್ಥಿತರಿದ್ದರು.


Spread the love

Exit mobile version