ಉಡುಪಿ ನಗರಸಭೆಯ ಒಳಚರಂಡಿ ಬಳಕೆಯ ಸೇವಾ ಶುಲ್ಕ ಪಾವತಿಯ ಹೊಸ ತೆರಿಗೆಗೆ ಕಾಂಗ್ರೆಸ್ ವಿರೋಧ
ಉಡುಪಿ: ಉಡುಪಿ ನಗರಸಭೆಯ ಒಳಚರಂಡಿ ಬಳಕೆಯ ಸೇವಾ ಶುಲ್ಕ ಪಾವತಿಯ ಹೊಸ ತೆರಿಗೆಗೆ ಉಡುಪಿ ಬ್ಲಾಖ್ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ
ಉಡುಪಿ ನಗರಸಭೆಯು 2020-21 ರ ಮನೆ ತೆರಿಗೆಯನ್ನು ಈಗಾಗಲೇ 15% ಹೆಚ್ಚಿಸಿದೆ. ನಿನ್ನೆ ಒಳ ಚರಂಡಿ ಸೇವಾ ಶುಲ್ಕ ಪಾವತಿಗೆ ಸೂಚನೆಯನ್ನು ಪತ್ರಿಕೆಯಲ್ಲಿ ಪ್ರಕಟಣೆ ನೀಡಿದೆ. ಈಗಾಗಲೇ ಮನೆ ತೆರಿಗೆ ಹೆಚ್ಚಿಸಿದೆ ಪುನಃ ಹೊಸದಾದ ತೆರಿಗೆ ಒಳ ಚರಂಡಿ ಸಂಪರ್ಕ ಬಳಕೆದಾರರಿಂದ 2020-21 ವಾಸ್ತವ್ಯಕ್ಕಾಗಿ ಪ್ರತಿ ಸಂಪರ್ಕಕ್ಕೆ ವಾರ್ಷಿಕ ರೂ.900 ವಾಣಿಜ್ಯಕ್ಕಾಗಿ ಪ್ರತಿ ಸಂಪರ್ಕಕ್ಕೆ ವಾರ್ಷಿಕ 1500 ರೂಪಾಯಿ ಎಂದು ಪೌರಾಯುಕ್ತರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕೋವಿಡ್-19 ನಿಮಿತ್ತ ಸರಕಾರದ ಲಾಕ್ ಡೌನ್ನಿಂದ ಕೆಲಸ ಹಾಗೂ ವ್ಯವಹಾರ ಇಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ಉಡುಪಿ ನಗರಸಭೆ ಈ ಹೊಸ ತೆರಿಗೆಯನ್ನು ಪ್ರಾರಂಭಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡಿಸಿದೆ. ಈ ಬಗ್ಗೆ ಜನಪ್ರತಿನಿಧಿಗಳು ಎಚ್ಚೆತ್ತು ಈ ಹೊಸ ತೆರಿಗೆಯನ್ನು ಕೂಡಲೇ ವಾಪಾಸು ಪಡೆದುಕೊಳ್ಳಲು ಸರಕಾರವನ್ನು ಒತ್ತಾಯಿಸಬೇಕಾಗಿ ಆಗ್ರಹಿಸುತ್ತೇವೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಅಮೃತಾ ಕೃಷ್ಣಮೂರ್ತಿ ಹಾಗೂ ಸೆಲಿನ್ ಕರ್ಕಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ