Home Mangalorean News Kannada News ಉಡುಪಿ: ನಿವೃತ್ತ ಪೋಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ನೂತನ ಕಛೇರಿ ಉದ್ಘಾಟನೆ

ಉಡುಪಿ: ನಿವೃತ್ತ ಪೋಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ನೂತನ ಕಛೇರಿ ಉದ್ಘಾಟನೆ

Spread the love

ಉಡುಪಿ:  ಜಿಲ್ಲಾ ನಿವೃತ್ತ ಪೋಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಇದರ ನೂತನ ಕಛೇರಿಯ ಕಟ್ಟಡವನ್ನು ಬುಧವಾರ ಮಣಿಪಾಲದಲ್ಲಿ ಉದ್ಘಾಟಿಸಲಾಯಿತು.

ಮಣಿಪಾಲ ಪೋಲೀಸ್ ಠಾಣೆಯ ಆವರಣದಲ್ಲಿ ನಿರ್ಮಾಣಗೊಂಡ ನೂತನ ಕಛೇರಿಯ ಕಟ್ಟಡವನ್ನು ಜಿಲ್ಲಾ ಪೋಲೀಸ್ಅಧೀಕ್ಷಕ ಕೆ.ಅಣ್ಣಾಮಲೈ ಉದ್ಘಾಟಿಸಿದರು.

Police (1)

ಬಳಿಕ ಅವರು ಮಾತನಾಡಿ ದೇಶದ ಇತರ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯದ ಪೆÇಲೀಸರೆಂದರೆ ಉತ್ತಮ ಗೌರವವಿದೆ. ಈ ಗೌರವ ನಮ್ಮ ಪೋಲೀಸ್ ಇಲಾಖೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ನಿವೃತ್ತ ಪೋಲೀಸ್ಅಧಿಕಾರಿಗಳಿಗೆ ಸಲ್ಲಬೇಕು. ನಮ್ಮ ರಾಜ್ಯಕ್ಕೆ, ಪೋಲೀಸ್ಇಲಾಖೆಗೆ  ಇಂತಹ ಗೌರವವನ್ನು ತಂದಂತಹ ನಿವೃತ್ತ ಅಧಿಕಾರಿಗಳ ಸಮಸ್ಯೆಗಳಿಗೆ ಪೋಲೀಸ್ ಇಲಾಖೆ ಸದಾ ಸ್ಪಂದಿಸುತ್ತದೆ. ಮಣಿಪಾಲ ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಮಣಿಪಾಲ ಪೋಲೀಸ್ ಠಾಣೆಯನ್ನು ದೇಶದಲ್ಲಿಯೇ ಮಾದರಿ ಪೆÇಲೀಸ್ ಠಾಣೆಯಾಗಿ ಶೀಘ್ರದಲ್ಲಿ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ನಿವೃತ್ತ ಪೆÇಲೀಸ್ ಅಧಿಕಾರಿಗಳ ಕುಟುಂಬ ವರ್ಗದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಮಣಿಪಾಲ ವಿವಿಯ ಸಹಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಈ ಸಂದರ್ಭದಲ್ಲಿ ನಿವೃತ್ತ ಪೆÇಲೀಸ್ ಅಧಿಕಾರಿಗಳ ವಿಳಾಸ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಮಣಿಪಾಲ ವಿಶ್ವವಿದ್ಯಾನಿಲಯ ಹಾಗು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ವತಿಯಿಂದ ನಿವೃತ್ತ ಪೆÇಲೀಸ್ ಅಧಿಕಾರಿಗಳ ಕುಟುಂಬಕ್ಕೆ ನೀಡಲಾದ ಆರೋಗ್ಯ ಕಾರ್ಡ್‍ನ್ನು ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸದಾನಂದ ಬಳ್ಕೂರು ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪೆÇಲೀಸ್ ಉಪ ನಿರೀಕ್ಷಕರಾದ ಸುಂದರ್ ಶೆಟ್ಟಿ ಹಾಘು ನಿವೃತ್ತ ಸಹಾಯಕ ಪೆÇಲೀಸ್ ಉಪನಿರೀಕ್ಷಕ ಜನಾರ್ಧನ ಅವರನ್ನು ಸನ್ಮಾನಿಸಲಾಯಿತು.  ಹಾಗು ಕರ್ತವ್ಯದಲ್ಲಿರುವ ಪೆÇಲೀಸ್ ಸಿಬ್ಬಂದಿ ವರ್ಗದವರಲ್ಲಿ ಎಸ್.ಎಸ್.ಎಲ್.ಸಿ ಹಾಗು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ನಿವೃತ್ತ ಪೆÇಲೀಸ್ ಉಪಾಧೀಕ್ಷಕ, ಉಡುಪಿ ಜಿಲ್ಲಾ ನಿವೃತ್ತ ಪೆÇಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಪ್ರಭುದೇವ ಮಾನೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವೆಂಕಪ್ಪ ನಾಯ್ಕ್ ವಂದಿಸಿದರು. ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version