ಉಡುಪಿ: ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರ `ಪಿಕ್ಟೋರಿಯಲ್ ಜರ್ನಿ ಟು ಉಡುಪಿ ಮಣಿಪಾಲ ಚಿತ್ರ ಸಂಪುಟ’ ಬಿಡುಗಡೆ ಕಾರ್ಯಕ್ರಮ ಗುರುವಾರ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ನಡೆಯಿತು.
ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಚಿತ್ರ ಸಂಪುಟವನ್ನು ಲೋಕಾರ್ಪಣೆಗೊಳಿಸಿ, ಒಂದು ಚಿತ್ರ ಅದರ ಸಂಪೂರ್ಣ ವಿವರನ್ನು ಹೇಳುವಂತಾಗಬೇಕು. ಆಗ ಚಿತ್ರದ ಮಹತ್ವ ಹೆಚ್ಚುತ್ತದೆ. ಸಂಸ್ಕøತಿ ಸಂಪ್ರದಾಯಗಳು ನಶಿಸಿಹೋಗುತ್ತಿರುವ ಇಂದಿನ ಸಂಧರ್ಭದಲ್ಲಿ ಚಿತ್ರಗಳು ಮೂಲಕವಾದರೂ ಅದನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಕೃತಿ ಪರಿಚಯ ಮಾಡಿದ ಖ್ಯಾತ ವಿಮರ್ಶಕ ಎ. ಈಶ್ವರಯ್ಯ ಮಾತನಾಡಿ, ಪಿಕ್ಟೋರಿಯಲ್ ಜರ್ನಿ ಟು ಉಡುಪಿ ಮಣಿಪಾಲ ಚಿತ್ರ ಸಂಪುಟದಲ್ಲಿರುವ ಚಿತ್ರಗಳು ಮನಸ್ಸನ್ನು ತಟ್ಟುವಷ್ಟು ಸುಂದರವಾಗಿದೆ. ಎಲ್ಲಾ ಕಾಲಕ್ಕೂ ನಮ್ಮನ್ನು ಸಂಪೆÇೀಷ ಪಡಿಸುವ ಶಕ್ತಿ ಚಿತ್ರಕ್ಕಿದೆ. ಪ್ರತಿ ಚಿತ್ರಕ್ಕೂ ಒಂದು ಸುವರ್ಣ ಕ್ಷಣ ಇದೆ. ಆ ಕ್ಷಣದಲ್ಲಿ ತೆಗೆದಾಗ ಮಾತ್ರ ಆ ಚಿತ್ರಕ್ಕೆ ಅದ್ಭುತವಾದ ಶಕ್ತಿ ಬರುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಯುವರಾಜ್ ಪಿ., ಮಣಿಪಾಲ ಗ್ರೂಪ್ ಎಂಡಿ ಟಿ. ಗೌತಮ್ ಪೈ, ದೊಡ್ಡಣಗುಡ್ಡೆ ಎ.ವಿ.ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್, ಅಂತಾರಾಷ್ಟ್ರೀಯ ರಂಗ ಅಧ್ಯಯನ ಸಂಶೋಧಕಿ ಸಿಲ್ವೇರಿಯೋ ಬರ್ನಾಡೋ ಉಪಸ್ಥಿತರಿದ್ದರು.
ಆಸ್ಟ್ರೋ ಮೋಹನ್ ಸ್ವಾಗತಿಸಿ, ಭೂತ ರಾಜ ಪ್ರಕಾಶನದ ಪ್ರವೀಣಾ ಮೋಹನ್ ವಂದಿಸಿದರು. ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.