Home Mangalorean News Kannada News ಉಡುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಎರಡು ವಾರಗಳಲ್ಲಿ ರೂ. 73.39 ಲಕ್ಷ ಮೌಲ್ಯದ ಮಾದಕ ವಸ್ತು...

ಉಡುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಎರಡು ವಾರಗಳಲ್ಲಿ ರೂ. 73.39 ಲಕ್ಷ ಮೌಲ್ಯದ ಮಾದಕ ವಸ್ತು ವಶ

Spread the love

ಉಡುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ ಎರಡು ವಾರಗಳಲ್ಲಿ ರೂ. 73.39 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಉಡುಪಿ : ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ನಿರ್ಬಂಧಿತ ಮಾದಕ ವಸ್ತುಗಳ ಸಾಗಾಟ ಮತ್ತು ಸೇವನೆಯನ್ನು ಹತೋಟಿಗೆ ತರಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸಲು ವಿಶೇಷ ಕಾರ್ಯಾಚರಣೆ ನಡೆಸಿದ್ದು ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಸೆರೆಹಿಡಿಯಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ್ ಅವರು ಹೇಳಿದರು.

ಈ ಕುರಿತು ಶನಿವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ಪ್ರಮುಖ 3 ಪ್ರಕರಣಗಳಲ್ಲಿ ಅತೀ ಹೇಚ್ಚು ಮೊತ್ತವಾದ ರೂ 73, 39, 500 ರೂ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ನ್ನು ವಶಪಡಿಸಿಕೊಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಾದಕ ವಸ್ತುಗಳ ಸಾಗಾಟ ಹಾಗೂ ಸೇವೆನೆ ಕುರಿತು ಕಾರ್ಯಾಚರಣೆಗಾಗಿ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಅವರ ಉಸ್ತುವಾರಿಯಲ್ಲಿ 3 ತಂಡಗಳನ್ನು ರಚಿಸಲಾಗಿದ್ದು ತಾಂತ್ರಿಕ ತಂಡದಲ್ಲಿ ಹರಿರಾಂ ಶಂಕರ್, ಸಹಾಯಕ ಪೊಲೀಸ್ ಅಧೀಕ್ಷಕರು, ಕುಂದಾಪುರ ಉಪವಿಭಾಗ , ಭರತ್ ಎಸ್, ರೆಡ್ಡಿ, ಪೊಲೀಸ್ ಅಧೀಕ್ಷಕರು, ಕಾರ್ಕಳ ಉಪವಿಭಾಗ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯವರ ಶಿವಾನಂದ, ನಿತಿನ್ ಮತ್ತು ದಿನೇಶ್ ಆಗಿರುತ್ತಾರೆ.

ಕಾರ್ಯಾಚರಣೆಗಾಗಿ ಮಂಜುನಾಥ ಎಂ., ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ, ರಾಜಶೇಖರ್ ವಂದಲಿ, ಪೊಲೀಸ್ ಉಪನಿರೀಕ್ಷಕರು ಮಣಿಪಾಲ ಠಾಣೆ, ಮಣಿಪಾಲ ರಾಣೆಯ ಶೈಲೇಶ್, ಪ್ರಸನ್ನ, ರೋಮನ್, ಅಬ್ದುಲ್ ರಜಾಕ್, ಆದರ್ಶ, ಸಲ್ಮಾನ್ ಖಾನ್ ಮತ್ತು ಕುಂದಾಪುರ ಠಾಣೆ ವಿಜಯ ಕುಮಾರ್, ರಾಜು, ಸತೀಶ್ ಭಾಗವಹಿಸಿರುತ್ತಾರೆ.

ಅಲ್ಲದೆ ತನಿಖಾ ತಂಡದಲ್ಲಿ ಟಿ.ಆರ್. ಜೈಶಂಕರ್, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗ, ಅನಂತ ಪದ್ಮನಾಭ, ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ ವೃತ್ತ, ಮಹೇಶ್ ಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ, ಮಂಜುನಾಥ, ಪೊಲೀಸ್ ವೃತ್ತ ನಿರೀಕ್ಷಕರು, ಉಡುಪಿ ವೃತ್ತ. ಮಂಜಪ್ಪ ಡಿ. ಆರ್. ಪೊಲೀಸ್ ನಿರೀಕ್ಷಕರು, ಡಿಸಿಐಬಿ, ಉಡುಪಿ ಮತ್ತು ರಾಘವೇಂದ್ರ, ಪೊಲೀಸ್ ಉಪ ನಿರೀಕ್ಷಕರು, ಬ್ರಹ್ಮಾವರ ಠಾಣೆ ಭಾಗವಹಿಸಿದ್ದರು ಎಂದರು.

ಈ ಕಾರ್ಯಾಚರಣೆಯು ಜಿಲ್ಲಾ ವಿಶೇಷ ತಾಂತ್ರಿಕ ತಂಡದ ಸಂಯೋಜನೆಯೊಂದಿಗೆ ಈ ಕೆಳಗಿನ 3 ಪ್ರಮುಖ ಪ್ರಕರಣಗಳನ್ನು ಬೇಧಿಸಿದ, ಆರೋಪಿಗಳನ್ನು ಪತ್ತೆ ಹಚ್ಚಿ, Synthetic Drugs ನ್ನು ವಶಪಡಿಸಿಕೊಂಡು ಇಲ್ಲಿಯವರೆಗೆ 4 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 73,39,510 ಆಗಿದ್ದು ವಿವರ ಈ ಕೆಳಗಿನಂತಿದೆ

ರೂ 30,57,000 ಮೌಲ್ಯದ ನಿಷೇಧಿತ MDMA Ecstasy 540 ಗ್ರಾಂ ತೂಕದ 1019 ಮಾತ್ರೆಗಳು, ರೂ 30 ಲಕ್ಷ ಮೌಲ್ಯದ ,1000 ಎಲ್.ಎಸ್.ಡಿ. ಸ್ಟ್ಯಾಂಪ್ಸ್, ರೂ 3 ಲಕ್ಷ ಮೌಲ್ಯದ 30 ಗ್ರಾಂ ತೂಕದ ಬ್ರೌನ್ ಶುಗರ್ ಮತ್ತು ರೂ 9, 82, 500 ಮೌಲ್ಯದ 131 ಗ್ರಾಂ ತೂಕವುಳ್ಳ Superior Quality hydro weed ಗಾಂಜಾವನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 73,39500 ಆಗಿರುತ್ತದೆ ಎಂದರು.

ಈ ಎಲ್ಲಾ ದಾಳಿಗಳಲ್ಲಿ ಐಎಸ್ಡಿ ಉಡುಪಿ ಘಟಕ ಪೊಲೀಸ್ ನಿರೀಕ್ಷಕ ಮಧು, ಉಡುಪಿ ಸಹಾಯಕ ಡ್ರಗ್ ಕಂಟ್ರೋಲರ್ ನಾಗರಾಜ್, ಹಾಗೂ ಉಡುಪಿ ತಹಶೀಲ್ದಾರ್ ಪ್ರದೀಪ್ ಮತ್ತು ಅವರ ಸಿಬ್ಬಂದಿಯವರು ಕೂಡ ಸಹಕರಿಸುತ್ತಾರೆ.

ಈ ವರ್ಷದಲ್ಲಿ ಗಾಂಜಾ ಸೇವನೆ ಮಾರಾಟ, ಸಾಗಾಟ, ವಿದ್ಯಾರ್ಥಿ ಹಾಗೂ ಸಾರ್ವಜನಿಕರ ವಿರುದ್ಧ ಒಟ್ಟು 200 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಳೆದ 5 ವರ್ಷಗಳಲ್ಲಿ ದಾಖಲಿಸಿದೆ ಅತೀ ಹೆಚ್ಚು ಪ್ರಕರಣ ಗಳಾಗಿರುತ್ತದೆ. ಅಲ್ಲದೇ ಗಾಂಜಾ ಹೊರತುಪಡಿಸಿ Synthetic drugs ಅನ್ನು ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದರು.

ಉಡುಪಿ ಜಿಲ್ಲಾ ಪೊಲೀಸರ ಈ ಕಾರ್ಯವನ್ನು ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಹಾಗೂ ಪಶ್ಚಿಮ ವಲಯದ ಐಜಿಪಿಯವರು ಶ್ಲಾಘನೆ ಮಾಡಿರುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ ಚಂದ್ರ, ಹರಿರಾಂ ಶಂಕರ್, ಸಹಾಯಕ ಪೊಲೀಸ್ ಅಧೀಕ್ಷಕರು, ಕುಂದಾಪುರ ಉಪವಿಭಾಗ , ಭರತ್ ಎಸ್, ರೆಡ್ಡಿ, ಪೊಲೀಸ್ ಅಧೀಕ್ಷಕರು, ಕಾರ್ಕಳ ಉಪವಿಭಾಗ, ಮಂಜುನಾಥ, ಪೊಲೀಸ್ ವೃತ್ತ ನಿರೀಕ್ಷಕರು, ಉಡುಪಿ ವೃತ್ತ. ಮಂಜಪ್ಪ ಡಿ. ಆರ್. ಪೊಲೀಸ್ ನಿರೀಕ್ಷಕರು, ಮಂಜುನಾಥ ಎಂ., ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ, ರಾಜಶೇಖರ್ ವಂದಲಿ, ಪೊಲೀಸ್ ಉಪನಿರೀಕ್ಷಕರು ಮಣಿಪಾಲ ಠಾಣೆ ಮತ್ತು ಐಎಸ್ಡಿ ಉಡುಪಿ ಘಟಕ ಪೊಲೀಸ್ ನಿರೀಕ್ಷಕ ಮಧು ಉಪಸ್ಥಿತರಿದ್ದರು.


Spread the love

Exit mobile version