Home Mangalorean News Kannada News ಉಡುಪಿ: ಪೊಲೀಸ್, ಜಿಪಂ ಸಿಬಂದಿಗೆ ಕೊರೋನಾ – ಕಂಟೈನ್ ಮೆಂಟ್ ಮತ್ತು ಬಫರ್ ಝೋನ್ ಗಡಿ...

ಉಡುಪಿ: ಪೊಲೀಸ್, ಜಿಪಂ ಸಿಬಂದಿಗೆ ಕೊರೋನಾ – ಕಂಟೈನ್ ಮೆಂಟ್ ಮತ್ತು ಬಫರ್ ಝೋನ್ ಗಡಿ ಗುರುತಿಸಿ ಜಿಲ್ಲಾಧಿಕಾರಿ ಆದೇಶ

Spread the love

ಪೊಲೀಸ್, ಜಿಪಂ ಸಿಬಂದಿಗೆ ಕೊರೋನಾ – ಕಂಟೈನ್ ಮೆಂಟ್ ಮತ್ತು ಬಫರ್ ಝೋನ್ ಗಡಿ ಗುರುತಿಸಿ ಜಿಲ್ಲಾಧಿಕಾರಿ ಆದೇಶ

ಉಡುಪಿ: ಡಿಎ ಆರ್ ಸಿಬಂದಿ ಹಾಗೂ ಜಿಲ್ಲಾ ಪಂಚಾಯತ್ ಸಿಬಂದಿಯೋರ್ವರಿಗೆ ಸೋಮವಾರ ಕೊರೋನಾ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಅವರ ವಾಸಸ್ಥಳದ ಪ್ರದೇಶಗಳನ್ನು ಕಂಟೈನ್ ಮೆಂಟ್ ಮತ್ತು ಬಫರ್ ಝೋನ್ ಗಳನ್ನಾಗಿ ಗುರುತಿಸಿ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ನೀಡಿದ್ದಾರೆ.

ಬ್ರಹ್ಮಾವರ ತಾಲೂಕಿನ 52ನೇ ಹೇರೂರು ಪ್ರದೇಶದಲ್ಲಿ ಪೂರ್ವದ ಮಾರಿಕಟ್ಟೆ, ಪಶ್ಚಿಮದಲ್ಲಿ ರಾಹೆ 66, ಉತ್ತರದಲ್ಲಿ ಹೆರೂರು ವ್ಯಾಪ್ತಿಯ ಹಾಗೂ ದಕ್ಷಿಣದ ಬಂಡ್ಸಾಲೆ ಬೆಟ್ಟುವನ್ನು ಕಂಟೈನ್ ಮೆಂಟ್ ಝೋನ್ ಪ್ರದೇಶವಾಗಿ ಗುರುತಿಸಲಾಗಿದೆ.

ಈ ಕಂಟೈನ್ ಮೆಂಟ್ ಝೋನ್ ವ್ಯಾಪ್ತಿಯಲ್ಲಿ 76 ಮನೆಗಳಿದ್ದು 672 ಜನಸಂಖ್ಯೆ ಹೊಂದಿದೆ. ಅಲ್ಲದೆ 9 ಅಂಗಡಿ ಮತ್ತು ಕಚೇರಿಗಳು ಒಳಗೊಂಡಿದೆ..

ಈ ವ್ಯಾಪ್ತಿಯ ಪೂರ್ವದ ಆರೂರು ಗ್ರಾಮ, ಪಶ್ಚಿಮದ ಬೈಕಾಡಿ ಗ್ರಾಮ, ಉತ್ತರದ ಚಾಂತಾರು ಗ್ರಾಮ ಮತ್ತು ದಕ್ಷಿಣದ ಉಪ್ಪೂರು ಗ್ರಾಮಗಳನ್ನು ಬಫರ್ ಝೋನ್ ಗಡಿಯನ್ನಾಗಿ ಗುರುತಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ 1508 ಮನೆಗಳಿದ್ದು 4106 ಜನಸಂಖ್ಯೆಯನ್ನು ಹೊಂದಿದ್ದು, 115 ಅಂಗಡಿಗಳು ಹಾಗೂ 8 ಕಚೇರಿಗಳನ್ನು ಒಳಗೊಂಡಿದೆ.

ಹೆರೂರು ಭಾಗದಲ್ಲಿ ಒಟ್ಟು ಕಂಟೈನ್ ಮೆಂಟ್ ಗಡಿ ಹಾಗೂ ಬಫರ್ ಝೋನ್ ವ್ಯಾಪ್ತಿಯಲ್ಲಿ ಒಟ್ಟು 1584 ಮನೆಗಳಿದ್ದು 4778 ಜನಸಂಖ್ಯೆ ಹಾಗೂ 132 ಅಂಗಡಿ ಹಾಗೂ ಕಚೇರಿಗಳನ್ನು ಹೊಂದಿದೆ.

ಅದೇ ರೀತಿ ಕಾಪು ತಾಲೂಕಿನ ಮೂಡಬೆಟ್ಟು ಗ್ರಾಮದಲ್ಲಿ ಪೂರ್ವದ ಪ್ರಾಥಮಿಕ ಆರೋಗ್ಯ ಕೇಂದ್ರದ 2 ನೇ ಕ್ರಾಸ್ ರಸ್ತೆ, ಪಶ್ಚಿಮದಲ್ಲಿ ನಾಲ್ಕನೇ ಕ್ರಾಸ್ ರಸ್ತೆ, ಉತ್ತರದ ಜಿಪಂ ರಸ್ತೆ, ದಕ್ಷಿಣದ ಕನ್ಯಾಣ ಲೇಔಟ್ ರಸ್ತೆಯನ್ನು ಕಂಟೈನ್ ಮೆಂಟ್ ಝೋನ್ ಗಡಿಯೆಂದು ಗುರುತಿಸಲಾಗಿದೆ.

ಈ ಕಂಟೈನ್ ಮೆಂಟ್ ಝೋನ್ ವ್ಯಾಪ್ತಿಯಲ್ಲಿ 60 ಮನೆಗಳಿದ್ದು 257 ಜನಸಂಖ್ಯೆ ಹೊಂದಿದೆ. ಈ ಪ್ರದೇಶದಲ್ಲಿ ಯಾವುದೇ ಅಂಗಡಿ ಮತ್ತು ಕಚೇರಿಗಳನ್ನು ಹೊಂದಿರುವುದಿಲ್ಲ

ಈ ವ್ಯಾಪ್ತಿಯ ಪೂರ್ವದ ಕುರ್ಕಾಲು ಗ್ರಾಮ, ಪಶ್ಚಿಮದ ಮಟ್ಟು ಗ್ರಾಮ, ಉತ್ತರದ ಏಣಗುಡ್ಡೆ ಗ್ರಾಮ ಮತ್ತು ದಕ್ಷಿಣ ಪಾಂಗಾಳ ಗ್ರಾಮವನ್ನು ಬಫರ್ ಝೋನ್ ಗಡಿಯನ್ನಾಗಿ ಗುರುತಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ 2151 ಮನೆಗಳಿದ್ದು 4743 ಜನಸಂಖ್ಯೆಯನ್ನು ಹೊಂದಿದ್ದು, 76ಅಂಗಡಿಗಳು ಹಾಗೂ 4 ಕಚೇರಿಗಳನ್ನು ಒಳಗೊಂಡಿದೆ.
ಮೂಡಬೆಟ್ಟು ಗ್ರಾಮದ ಭಾಗದಲ್ಲಿ ಒಟ್ಟು ಕಂಟೈನ್ ಮೆಂಟ್ ಗಡಿ ಹಾಗೂ ಬಫರ್ ಝೋನ್ ವ್ಯಾಪ್ತಿಯಲ್ಲಿ ಒಟ್ಟು 2211 ಮನೆಗಳಿದ್ದು 5018 ಜನಸಂಖ್ಯೆ ಹಾಗೂ 80 ಅಂಗಡಿ ಹಾಗೂ ಕಚೇರಿಗಳನ್ನು ಹೊಂದಿದೆ.


Spread the love

Exit mobile version