Home Mangalorean News Kannada News ಉಡುಪಿ : ಪ್ರವಾಸಿಗರ ರಕ್ಷಣೆಗೆ ಆದ್ಯತೆ- ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್

ಉಡುಪಿ : ಪ್ರವಾಸಿಗರ ರಕ್ಷಣೆಗೆ ಆದ್ಯತೆ- ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್

Spread the love

ಉಡುಪಿ: ಜಿಲ್ಲೆಯ ಬೀಚ್ ಗಳಿಗೆ ಆಗಮಿಸುವ ಪ್ರವಾಸಿಗರ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ತಿಳಿಸಿದ್ದಾರೆ.
ಅವರು ಮಂಗಳವಾರ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಮತ್ತು ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ ವತಿಯಿಂದ ನಡೆದ ಮಳುಗುದಾರರಿಗೆ ತರಬೇತಿ ಕಾರ್ಯಕ್ರಮದ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

dc-malpe-beach-march312016-018

ಜಿಲ್ಲೆಯಲ್ಲಿರುವ ಸಮುದ್ರ ತೀರಗಳಿಗೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಸಮುದ್ರದಲ್ಲಿ ಈಜಾಡುವಾಗ ಅಥವಾ ಆಕಸ್ಮಿಕ ಸೆಳೆತಗಳಿಗೆ ಸಿಕ್ಕಿದ ಸಂದರ್ಭದಲ್ಲಿ ಅವರನ್ನು ರಕ್ಷಿಸಲು , ಈಗಾಗಲೇ ಜೀವ ರಕ್ಷಕರು ಮತ್ತು ಹೋಂ ಗಾರ್ಡ್‍ಗಳನ್ನು ನೇಮಿಸಲಾಗಿದ್ದು, ಅಗತ್ಯ ತುರ್ತು ಸಂದರ್ಭದಲ್ಲಿ ರಕ್ಷಣೆ ನೀಡುವ ದೃಷ್ಠಿಯಿಂದ, ಮಲ್ಪೆ ಪರಿಸರದ ಫಿಶರೀಸ್ ಶಾಲೆ, ನಾರಾಯಣ ಗುರು ಶಾಲೆ, ಗಾಂಧೀ ಶಾಲೆ ಮತ್ತು ಉಡುಪಿಯ ಕ್ರೀಡಾ ಹಾಸ್ಟಲ್ ನ ಆಸಕ್ತ 100 ಮಂದಿ ವಿದ್ಯಾಥಿಗಳಿಗೆ ಜೀವ ರಕ್ಷಣೆ ಕುರಿತು ತರಬೇತಿಯನ್ನು ನೀಡಲಾಗಿದೆ.
ಇವರಿಗೆ ರೇಸರ್ ಬೋಡ್ ್, ರೆಸ್ಕ್ಯೂ ಟ್ಯೊಬ್, ಬೋಟ್ ಗಳ ಗಳ ನೆರವಿನಿಂದ ನೀರಿನಲ್ಲಿ ಮುಳುಗುವ ವ್ಯಕ್ತಿಗಳನ್ನು ಗುರುತಿಸಿ, ರಕ್ಷಿಸಿ, ದಡಕ್ಕೆ ಕರೆತಂದು ಅಗತ್ಯ ಪ್ರಥಮ ಚಿಕಿತ್ಸೆ ನೀಡುವ ಕುರಿತಂತೆ ತರಬೇತಿಯನ್ನು ನೀಡಲಾಗಿದೆ, ಈ ತರಬೇತಿಯನ್ನು ಪಡೆಯಲು ಆಸಕ್ತರು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಅವರನ್ನು ಸಂಪರ್ಕಿಸಿ ತರಬೇತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ ಪಾರ್ಥ ವಾರಣಾಸಿ ಮಕ್ಕಳಿಗೆ ತರಬೇತಿ ನೀಡಿದ್ದು, ಸಹಾಯಕರಾಗಿ ನಿರೂಪ್, ರೋಹಿತ್ ಕಾರ್ಯ ನಿರ್ವಹಿಸಿದ್ದಾರೆ.
ತರಭೇತಿ ಪಡೆದ ಮಕ್ಕಳಿಂದ ಪ್ರಾತ್ಯಕ್ಷಿಕೆ ನಡೆಯಿತು.
ಪೌರಾಯುಕ್ತ ಮಂಜುನಾಥಯ್ಯ, ಮಲ್ಪೆ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version