ಉಡುಪಿ: ಬಡಗಬೆಟ್ಟು ಸೊಸಾಯ್ಟಿಗೆ ದ್ವೀತಿಯ ರಾಷ್ಟ್ರೀಯ ಎನ್ಸಿಡಿಸಿ ಪ್ರಶಸ್ತಿ

Spread the love

ಉಡುಪಿ:: ಹೊಸ ಹೊಸ ವೈಚಾರಿಕತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವ್ಯವಹಾರಿಕವಾಗಿ ಪ್ರಗತಿ ಪಥದಲ್ಲಿ ಸಾಗಿ, ಅಭೂತಪೂರ್ವ ಯಶಸ್ಸು ಸಾಧಿಸಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟೀವ್ ಸೊಸಾಟಿಯು ತನ್ನ ಸಾಮಾಜಿಕ ಕಾಳಜಿಯುಳ್ಳ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ವಿಭಿನ್ನ ಛಾಪು ಮೂಡಿಸಿ ಸಹಕಾರಿ ರಂಗದ ಮಾದರಿ ಸಹಕಾರ ಸಂಘಗಳಲ್ಲೊಂದಾಗಿದೆ. ಸಂಘದ ಸಾಧನೆಗೆ ಮುಕುಟಪ್ರಾಯವಾಗಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿ ಎಂಬ 8 ಜಿಲ್ಲಾ ಪ್ರಶಸ್ತಿಗಳನ್ನು. ರಾಜ್ಯಮಟ್ಟದ 2 ಪ್ರಶಸ್ತಿಗಳು ಒಲಿದು ಬಂದಿದ್ದು 2008 ನೇ ಇಸವಿಯಲ್ಲಿ ಸಂಘವು ರಾಷ್ಟ್ರದ ಮಹೋನ್ನತ ಪ್ರಶಸ್ತಿಯಾದ ಎನ್ಸಿಡಿಸಿ ಅವಾರ್ಡ್ ಫಾರ್ ಕೋ-ಆಪರೇಟಿವ್ ಎಕ್ಸಲೆನ್ಸ್-2008 ಪ್ರಶಸ್ತಿಯನ್ನು ಪಡೆದ ದೇಶದ ಏಕೈಕ ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿಯಾಗಿ ಗುರುತಿಸಿಕೊಂಡಿತ್ತು.

ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರ ಮಾಡಿ ಲಾಭಗಳಿಸುವ ದೃಷ್ಟಿಯನ್ನು ಇಟ್ಟುಕೊಳ್ಳದೇ ಸದಸ್ಯರಿಗೆ, ಗ್ರಾಹಕರಿಗೆ ನೆರವಾಗುವ ಪರಂಪರೆಯನ್ನು ನಿರಂತರವಾಗಿ ಆಚರಿಸಿಕೊಂಡು ಬಂದು ಸಾರ್ವಜನಿಕ ಉಪಯುಕ್ತತೆಗೆ ಸಂಬಂಧಿಸಿದಂತೆ ಜನಜಾಗೃತಿ ಶಿಬಿರ, ಆರೋಗ್ಯ ಶಿಬಿರಗಳನ್ನು, ಮದ್ಯವರ್ಜನ ಶಿಬಿರಗಳನ್ನು, ರಕ್ತದಾನ ಶಿಬಿರಗಳನ್ನು, ಆಥರ್ಿಕ ನೆರವು ಶೈಕ್ಷಣಿಕ ನೆರವುಗಳನ್ನು ನೀಡುವುದರ ಮೂಲಕ ಬೇರೆ ಸಹಕಾರ ಸಂಘಗಳಿಂದ ಭಿನ್ನವಾಗಿ ಗುರುತಿಸಿಕೊಂಡು ಇದೀಗ ಕೇಂದ್ರ ಸರಕಾರದ ನ್ಯಾಷನಲ್ ಕೋ-ಆಪರೇಟಿವ್ ಡೆವೆಲಪ್ಮೆಂಟ್ ಕಾರ್ಪೋರೇಶನ್ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ “Biennial Award for Co-operative Excellence-2014(NCDC)” ಪ್ರಶಸ್ತಿ ಪಡೆಯುವುದರ ಮೂಲಕ ದ್ವಿತೀಯ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟದ ರಾಜ್ಯದ ಏಕೈಕ ಸಹಕಾರ ಸಂಸ್ಥೆ ಎಂದು ಗುರುತಿಸಿಕೊಂಡಿದೆ.

_MG_5379

2008 ನೇ ಇಸವಿಯಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟೀವ್ ಸೊಸಾಟಿಗೆ ರಾಷ್ಟ್ರಮಟ್ಟದ (ಓಅಆಅ) ಪ್ರಶಸ್ತಿ ಲಭಿಸಿದ್ದು ತದ ನಂತರದ ದಿನಗಳಲ್ಲಿ ವ್ಯವಹಾರಿಕವಾಗಿ ಇನ್ನಷ್ಟು ಪ್ರಗತಿಯನ್ನು ಸಾಧಿಸುತ್ತಾ ಬಂದು 2014 ನೇ ವರ್ಶದಲ್ಲಿಯೂ ಕೇಂದ್ರ ಸರಕಾರದ ರಾಷ್ಟ್ರಮಟ್ಟದ ಪ್ರಶಸ್ತಿ  “Biennial Award for Co-operative Excellence-2014(NCDC)” ಪಡೆಯುತ್ತಿರುವುದು ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಬಾರಿಯಾಗಿದೆ. ಪ್ರಶಸ್ತಿ ಪುರಸ್ಕಾರ ಸಮಾರಂಭವು ಎಪ್ರಿಲ್ 29 ರಂದು ನವದೆಹಲಿಯಲ್ಲಿ ಜರಗಿದ್ದು, ಈ ಪ್ರಶಸ್ತಿಯು 50,000/- ನಗದು ಬಹುಮಾನ, ಫಲಕ, ಪ್ರಶಸ್ತಿ ಪತ್ರ ಹಾಗೂ ಪುರಸ್ಕಾರಗಳನ್ನು ಒಳಗೊಂಡಿದ್ದು, ಕೇಂದ್ರ ಕೃಷಿ ರಾಜ್ಯ ಸಚಿವರಾದ ಮೋಹನ್ಬಾ ಕಲ್ಯಾಣ್ಜಿಬಾ ಕುಂದರಿಯ ರವರು ಈ ಪ್ರಶಸ್ತಿಯನ್ನು ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಎನ್ಸಿಡಿಸಿಯ ವ್ಯವಸ್ಥಾಪಕ ನಿದರ್ೇಶಕರಾದ ಶ್ರೀಮತಿ ವಸುಧಾ ಮಿಶ್ರ, ಹಾಗೂ ಎನ್ಸಿಡಿಸಿಯ ಎಡಿಷನಲ್ ಸೆಕ್ರೆಟರಿಯಾದ ಶ್ರೀ ರಾಜ್ಸಿಂಗ್ ರವರು ಉಪಸ್ಥಿತರಿದ್ದರು.

ಈ ಪ್ರಶಸ್ತಿಯನ್ನು ಕೇಂದ್ರ ಸರಕಾರವು ಪ್ರತೀ 2 ವರ್ಶಗಳಿಗೊಮ್ಮೆ ರಾಜ್ಯದ ಅತ್ತ್ಯುತ್ತಮ ವಾಗಿ ಕಾರ್ಯನಿರ್ವಹಿಸುವ ಒಂದು ಸಹಕಾರ ಸಂಸ್ಥೆಗೆ ನೀಡುವ ಪ್ರಶಸ್ತಿಯಾಗಿದೆ.

ಸಂಘದ ಸಾಧನೆಯ ಹೆಮ್ಮಯನ್ನು ವ್ಯಕ್ತಪಡಿಸಿಲು ಏರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರಾದ ಸಂಜೀವ್ ಕಾಂಚನ್, ಉಪಾಧ್ಯಕ್ಷರಾದ ಎಲ್ ಉಮಾನಾಥ, ನಿರ್ದೇಶಕರಾದ ಸಿ.ಎಫé್.ಹರ್ಬಟ್, ಪುರುಷೋತ್ತಮ ಪಿ ಶೆಟ್ಟಿ, ವಸಂತ. ಕೆ ಕಾಮತ್, ವಿನಯ್ ಕುಮಾರ್ ಟಿ ಎ, ಜಯಾನಂದ ಸಿ ಮೈಂದನ್, ಪದ್ಮನಾಭ ಕೆ ನಾಯಕ್, ಜಯಾ ಶೆಟ್ಟಿ, ಗಾಯತ್ರಿ ಎಸ್ ಭಟ್, ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ರಾಬಿನ್ಸನ್ ಅಮ್ಮಣ್ಣ, ಎಲ್ಲಾ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿವರ್ಗದವರು ಹಾಗೂ ದೈನಿಕ ಠೇವಣಿ ಸಂಗ್ರಾಹಕರು ಉಪಸ್ಥಿತರಿದ್ದರು.


Spread the love