ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಎಲ್ಲ ಕಟ್ಟಡಗಳು, ರಸ್ತೆ ಹಾಗೂ ಪಾಕರ್ಿಂಗ್ ವ್ಯವಸ್ಥೆಯ ಕುರಿತು ಕೂಲಂಕಶ ಪರಿ ಶೀಲನೆ ನಡೆಸಿ ವರದಿ ನೀಡಬೇಕೆಂದು ಉಡುಪಿ ನಗರಸಭೆ ಅಧ್ಯಕ್ಷ ಯುವ ರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಎರಡು ತಿಂಗಳ ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದ ಮಣಿಪಾಲ ವಿವಿಯ ಅಕ್ರಮ ಕಟ್ಟಡ, ರಸ್ತೆ ಬ್ಲಾಕ್ ಹಾಗೂ ಅನಧಿಕೃತ ಪಾಕರ್ಿಂಗ್ ವ್ಯವಸ್ಥೆಯ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡು ವಂತೆ ಸದಸ್ಯ ರಮೇಶ್ ಕಾಂಚನ್ ಸಭೆಯಲ್ಲಿ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಡಿ.ಮಂಜುನಾಥಯ್ಯ, ಈ ಕುರಿತು ಕಾನೂನು ತಜ್ಞರ ಸಲಹೆಯಂತೆ ಹೊಸ ಕಟ್ಟಡ, ಪರವಾನಿಗೆ, ಪಾಕರ್ಿಂಗ್ ಸೇರಿ ದಂತೆ ವಿವಿಧ ವಿಚಾರಗಳ ಕುರಿತ ದಾಖಲೆ ಸಹಿತ ಮಾಹಿತಿಯನ್ನು ವಾರ ದೊಳಗೆ ನೀಡುವಂತೆ ಮಣಿಪಾಲ ವಿವಿಗೆ ಪತ್ರ ಬರೆಯಲಾಗಿದೆ ಎಂದರು.
ಪ್ರಶಾಂತ್ ಭಟ್ ಮಾತನಾಡಿ, ಮಣಿಪಾಲ ವಿವಿಯವರು ಸಾರ್ವಜನಿಕ ರಸ್ತೆಗಳಿಗೆ ಕಬ್ಬಿಣದ ರಾಡ್ ಹಾಕಿ ಬಂದ್ ಮಾಡಿ ರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಆಟದ ಮೈದಾನ ಕ್ಕೆಂದು ಮೀಸಲಿರಿಸಿದ ಜಾಗದಲ್ಲಿ ವಿವಿಯವರು ಈಗ 14 ಮಹಡಿಯ ಕಟ್ಟಡ ನಿಮರ್ಿಸಿದ್ದಾರೆ. ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡಗಳ ನಿಮರ್ಾಣ ನಿರಂತರ ನಡೆಯುತ್ತಿದ್ದು, ನಗರಸಭೆಗೆ ಯಾವುದೇ ಮಾಹಿತಿ ಇಲ್ಲ ಎಂದು ರಮೇಶ್ ಕಾಂಚನ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ವಿವಿಯ ಎಲ್ಲ ಕಟ್ಟಡಗಳ ಪರವಾನಿಗೆ ಹಾಗೂ ದಾಖಲೆ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಬೇಕು. ರಸ್ತೆಗೆ ಅಡ್ಡ ಹಾಕಿರುವ ಕಬ್ಬಿಣದ ರಾಡ್ಗಳನ್ನು ತೆರವುಗೊಳಿಸಬೇಕು. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅವರ ನೀರಿನ ಸಂಪರ್ಕವನ್ನೇ ಕಡಿತ ಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು. ಶಿವಳ್ಳಿ, ಹೆರ್ಗ ಹಾಗೂ 80ಬಡಗು ಬೆಟ್ಟು ಗ್ರಾಮಗಳಲ್ಲಿರುವ ಮಣಿಪಾಲ ವಿವಿಯ ಜಾಗದ ನಕ್ಷೆಯನ್ನು 3ದಿನಗಳ ಒಳಗೆ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.
ಈ ಮಧ್ಯೆ ವಿಪಕ್ಷ ನಾಯಕ ಡಾ.ಎಂ.ಆರ್.ಪೈ, ಮಣಿಪಾಲ ವಿವಿಯ ವಿಚಾರಕ್ಕೆ ಸಂಬಂಧಿಸಿ ಕಳೆದ ಸಭೆಯಲ್ಲಿ ರಮೇಶ್ ಕಾಂಚನ್ ವಿರೋಧ ಪಕ್ಷದ ಸದಸ್ಯರು ವಿವಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿರುವುದಾಗಿ ಆರೋಪಿಸಿ ದ್ದರು. ಈ ಬಗ್ಗೆ ಪೌರಾಯುಕ್ತರು ಪರಿಶೀಲನೆ ಮಾಡಿ ಸತ್ಯ ಹೊರತರಬೇಕು. ಇದು ಸುಳ್ಳು ಎಂಬುದು ಸಾಬೀತಾದರೆ ಸದಸ್ಯರು ಸದನದಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದರು. ಈ ವಿಷಯದಲ್ಲಿ ಸದಸ್ಯರುಗಳ ಮಧ್ಯೆ ವಾಗ್ವಾದ ನಡೆಯಿತು.
ಮಣಿಪಾಲ ವಿಜಯ ನಗರದಲ್ಲಿ ಜನರು ಓಡಾಡುವ ರಸ್ತೆಗೆ ಮಣಿಪಾಲ ವಿವಿಯವರು ಕಂಪೌಂಡ್ ಗೋಡೆ ಕಟ್ಟುತ್ತಿರುವು ದರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಜ್ಯೋತಿ ನಾಯ್ಕ್ ಆಗ್ರಹಿಸಿದರು. ಇದೊಂದು ಅನಾಗರಿಕ ಕ್ರಮವಾಗಿದೆ. ಈ ರಸ್ತೆಯ ಬಗ್ಗೆ ಸವರ್ೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ದಿನಕರ ಶೆಟ್ಟಿ ಹೆರ್ಗ ಒತ್ತಾಯಿಸಿದರು. ಇದಕ್ಕೆ ರಮೇಶ್ ಕಾಂಚನ್ ಧ್ವನಿಗೂಡಿಸಿದರು.
ಈಗಾಗಲೇ ವಿವಿಯವರಿಗೆ ಸೂಚನೆ ನೀಡಿ ಕಂಪೌಂಡ್ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಇದು ಖಾಸಗಿ ರಸ್ತೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಆದುದರಿಂದ ಇದರ ಬಗ್ಗೆ ಸವರ್ೆ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಪೌರಾಯುಕ್ತರು ಸ್ಪಷ್ಟನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ವಿವಿಯವರು ರಸ್ತೆ ಬಂದ್ ಮಾಡುವ ಮೂಲಕ ಜನಸಾಮಾನ್ಯರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಗರಸಭೆ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ. ಸರಕಾರಿ ಜಾಗವನ್ನು ಲೀಸ್ಗೆ ತೆಗೆದುಕೊಂಡು ನಂತರ ಗೇಟ್ ಹಾಕುವ ಕ್ರಮವನ್ನು ವಿವಿಯವರು ಕೈಬಿಡ ಬೇಕು ಎಂದು ತಿಳಿಸಿದರು.
ನಗರಸಭಾ ಸದಸ್ಯರ ಗೌರವಧನವನ್ನು ಹೆಚ್ಚಳ ಮಾಡುವಂತೆ ಜನಾರ್ದನ ಭಂಡಾರ್ಕರ್ ಸಭೆಯಲ್ಲಿ ಮನವಿ ಮಾಡಿ ದರೆ, ಒಂದು ತಿಂಗಳ ಸದಸ್ಯರ ಗೌರವಧನವನ್ನು ನೇಪಾಳ ಭೂಕಂಪ ಪೀಡಿತರ ನಿಧಿಗೆ ನೀಡುವಂತೆ ಯಶ್ಪಾಲ್ ಸುವರ್ಣ ತಿಳಿಸಿದರು.
ಆದಿಉಡುಪಿ ಬುಧವಾರ ಸಂತೆಯಲ್ಲಿ ಎಪಿಎಂಸಿ ಆವರಣದ ಹೊರಗಿನ ರಸ್ತೆಯ ಇಕ್ಕೇಲಗಳಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡುವುದರಿಂದ ಇಡೀ ರಸ್ತೆ ಬ್ಲಾಕ್ ಆಗಿ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಅದೇ ರೀತಿ ಪರ್ಕಳದ ಶುಕ್ರವಾರದ ಸಂತೆಯ ಸಂದರ್ಭದಲ್ಲೂ ಇದೇ ಸಮಸ್ಯೆ ಉಂಟಾಗುತ್ತದೆ ಎಂದು ಸದಸ್ಯರು ಸಭೆಯಲ್ಲಿ ದೂರಿದರು.
ಆದಿಉಡುಪಿಯಲ್ಲಿ ರಸ್ತೆ ಬದಿಯಲ್ಲಿರುವ ವ್ಯಾಪಾರಸ್ಥರಿಂದ ಯಾವುದೇ ಸುಂಕ ವಸೂಲಿ ಮಾಡದೆ ಅವರನ್ನು ಅಲ್ಲಿಂದ ತೆರವು ಮಾಡಬೇಕು. ಟ್ರಾಫಿಕ್ ಪೊಲೀಸರು ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದು ವಾಹನ ಸಂಚಾರಕ್ಕೆ ಅವ ಕಾಶ ಮಾಡಿಕೊಡಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಅಜ್ಜರಕಾಡು ಭುಜಂಗಪಾಕರ್್ನಲ್ಲಿರುವ ಮಕ್ಕಳ ಪಾಕರ್್ಗೆ ಹೊಸ ಆಟದ ಸಾಮಾಗ್ರಿಗಳನ್ನು ಸಿಂಡಿಕೇಟ್ ಬ್ಯಾಂಕ್ ಪ್ರಯೋಜಕತ್ವದಲ್ಲಿ ಅಳವಡಿಸಲಾಗು ವುದು ಎಂದು ಪೌರಾಯುಕ್ತ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ನಗರಸಭೆ ಕಚೇರಿ ಮುಂದಿನ ಮೇಲ್ ಸೇತುವೆಯು ಸಂಪೂರ್ಣ ತುಕ್ಕು ಹಿಡಿದಿದ್ದು, ಇದನ್ನು ತೆರವುಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ನಗರಸಭೆ ವ್ಯಾಪ್ತಿಯ ಕೆಲವು ವಾಡರ್್ಗಳಿಗೆ ಗ್ರಾಮೀಣ ಪ್ರದೇಶದ ಸ್ಟೆಶನ್ ನಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ಅದನ್ನು ನಗರ ಪ್ರದೇಶದ ಸ್ಟೇಶನ್ಗೆ ವಗರ್ಾಯಿಸಬೇಕು. ಇಲ್ಲವಾದರೆ ಗ್ರಾಮೀಣ ಪ್ರದೇಶಕ್ಕೆ ನೀಡುವ ದರವನ್ನು ನಿಗದಿಪಡಿಸಬೇಕು ಎಂದು ದಿನಕರ ಶೆಟ್ಟಿ ಹೆರ್ಗ, ವಿಜಯ ಮಂಚಿ, ರಮೇಶ್ ಕಾಂಚನ್ ಆಗ್ರಹಿಸಿದರು.
ಸಭೆಯಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ನಗರಸಭೆ ಉಪಾ ಧ್ಯಕ್ಷೆ ಅಮೃತಾ ಕೃಷ್ಣಮೂತರ್ಿ ಉಪಸ್ಥಿತರಿದ್ದರು.
ನಗರದಲ್ಲಿ ಬಿಗ್ ಬಝಾರ್, ರಾಜ್ ಟವರ್ ಸೇರಿದಂತೆ ಹಲವು ಕಟ್ಟಡ ಗಳಿಗೆ ಸರಿಯಾದ ಪಾಕರ್ಿಂಗ್ ವ್ಯವಸ್ಥೆ ಇಲ್ಲದೆ ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿದ್ದು, ಇದರಿಂದ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ವಿಜಯ ಮಂಚಿ ಆರೋಪಿಸಿದರು.
ಈ ಬಗ್ಗೆ ಸಭೆಯಲ್ಲಿ ಸುಧೀರ್ಘವಾದ ಚಚರ್ೆ ನಡೆಯಿತು. ಕಟ್ಟಡಗಳ ಪಾಕರ್ಿಂಗ್ ಸ್ಥಳದಲ್ಲಿ ಅಂಗಡಿ ಮಾಡಿಕೊಂಡಿರುವವರಿಗೆ ನೋಟೀಸ್ ಜಾರಿ ಮಾಡಬೇಕು. ಅಲ್ಲದೆ ಕೂಡಲೇ ಅಲ್ಲಿನ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ನಗರದೊಳಗೆ ಬಸ್ಗಳ ವೇಗಕ್ಕೆ ಕಡಿವಾಣ ಹಾಗೂ ಕರ್ಕಶ ವಾಹನ ಬಳಕೆ ನಿಷೇಧಿಸುವ ಕುರಿತ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಈಗಾಗಲೇ ಈ ಸಂಬಂಧ ಆರ್ಟಿಓಗೆ ಪತ್ರ ಬರೆಯಲಾಗಿದ್ದು, ಸಭೆಯ ನಿರ್ಣಯವನ್ನು ಎಸ್ಪಿಯವರಿಗೆ ಕಳುಹಿಸಿಕೊಡಲಾಗುವುದು. ಆದುದರಿಂದ ಈ ಕ್ರಮವನ್ನು ಇಂದಿನಿಂದಲೇ ಜಾರಿಗೊಳಿಸಬೇಕು. ಸಿಟಿ ಬಸ್ ನಿಲ್ದಾಣದಲ್ಲಿ ಸೇರುವ ನೂರಾರು ಮಂದಿ ವಲಸೆ ಕಾಮರ್ಿಕರಿಂದ ಸಂಚಾರಕ್ಕೆ ತೊಂದರೆ ಯಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸಂಚಾರಿ ಪೊಲೀಸ್ ಉಪನಿರೀಕ್ಷಕರಿಗೆ ಪೌರಾಯುಕ್ತರು ತಿಳಿಸಿದರು.
ನಗರದಲ್ಲಿ ಹಾಕಿರುವ ಅನಧಿಕೃತ ಹೋಲ್ಡಿಂಗ್ ಹಾಗೂ ಬ್ಯಾನರ್ಗಳನ್ನು ತೆರವುಗೊಳಿಸುವ ಕಾಯರ್ಾಚರಣೆ ಇಂದಿನಿಂದ ಆರಂಭಿಸಲಾಗುವುದು. ಅಗತ್ಯ ಇರುವ ನಾಲ್ಕು ಕಡೆ ರಬ್ಬರ್ ಹಂಪ್ಸ್, ಝಿಬ್ರಾ ಕ್ರಾಸ್ಗಳನ್ನು ರಚಿಸ ಲಾಗುವುದು ಎಂದರು.