ಉಡುಪಿ : ಮಾನವ ಸಂಪತ್ತು ದೇಶದ ಸಂಪತ್ತು- ವಿನಯ ಕುಮಾರ್ ಸೊರಕೆ

Spread the love

ಉಡುಪಿ: ಯಾವುದೇ ದೇಶದ ಮಾನವ ಸಂಪನ್ಮೂಲ ಆ ದೇಶದ ಪ್ರಮುಖ ಸಂಪತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಇಂದು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, “ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2014” ಪುಸ್ತಕ ಬಿಡುಗಡೆ ಹಾಗೂ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.vinaykumarsorakehiriyadkamanipal 27-06-2015 11-55-15 vinaykumarsorakehiriyadkamanipal 27-06-2015 12-13-54ಉಡುಪಿ : ಮಾನವ ಸಂಪತ್ತು ದೇಶದ ಸಂಪತ್ತು- ವಿನಯ ಕುಮಾರ್ ಸೊರಕೆ

ದೇಶದ ಮಾನವ ಸಂಪನ್ಮೂಲದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲವಾದಲ್ಲಿ ದೇಶದ ಅಭಿವೃದ್ದಿ ಸಾಧಿಸಲು ಸಾಧ್ಯವಿಲ್ಲ,ಕರಾವಳಿಯಲ್ಲಿ ಮಾನವ ಸಂಪನ್ಮೂಲದ ಸಾಮಥ್ರ್ಯದ ಬಗ್ಗೆ ವರದಿ ತಯಾರಿಸಲು ಈ ಹಿಂದೆ ಪ್ರಯತ್ನ ನಡೆದಿತ್ತು, ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿ ಕುರಿತು 360 ಡಿಗ್ರಿ ಕಾರ್ಯಕ್ರಮದ ಮೂಲಕ ಪ್ರಯತ್ನಿಸಲಾಗಿತ್ತು, ಜಿಲ್ಲೆಯಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ, ಹೋಟೆಲ್, ಬ್ಯಾಕಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದೇವೆ, ಆದರೆ ಜಿಲ್ಲೆಯ ಜನತೆ ಉದ್ಯೋಗವಕಾಶಗಳಿಗಾಗಿ ವಿದೇಶಗಳಿಗೆ ಹಾಗೂ ದೇಶದ ಬೇರೆಡೆ ತೆರಳುತ್ತಿದ್ದಾರೆ, ಜಿಲ್ಲೆಯಲ್ಲಿ ಉದ್ಯೋಗವಕಾಶಗಳನ್ನು ಸೃಷ್ಠಿಸುವಲ್ಲಿ ಹಿಂದುಳಿದಿದ್ದೇವೆ, ಜಿಲ್ಲೆಯಲ್ಲಿ ಪ್ರಾರಂಭವಾದ ದೊಡ್ಡ ಉದ್ದಿಮೆಗಳಿಂದ ದೊಡ್ಡ ಮಟ್ಟದ ಉದ್ಯೋಗಗಳು ಸೃಷ್ಠಿಯಾಗಿಲ್ಲ ಆದರೆ ಅವುಗಳಿಂದ ಜಿಲ್ಲೆಯ ಪರಿಸರಕ್ಕೆ ಹಾನಿಯಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಅನೇಕ ಪ್ರವಾಸಿ ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿ ಪಡಿಸಿದಲ್ಲಿ ಕೃಷಿಗಿಂತ ಹೆಚ್ಚಿನ ಉದ್ಯೋಗ ಸೃಷ್ಠಿ ಸಾಧ್ಯವಿದ್ದು, ಜಿಲ್ಲೆಯ ಜನತೆ ಉದ್ಯೋಗಕ್ಕಾಗಿ ಬೇರೆಡೆ ತೆರಳುವುದುನ್ನು ತಪ್ಪಿಸಬಹುದು ಪ್ರಗತಿಪರ ಚಿಂತನೆಗಳ ಮೂಲಕ, ತಮ್ಮ ಸಾಮಥ್ಯವನ್ನು ಅರಿಯಬೇಕು ಎಂದು ಸಚಿವರು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಕನಗವಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳಲ್ಲಿರುವ ಸಮಸ್ಯೆ ಕುರಿತ 5 ವಿಷಯಗಳನ್ನು ಗುರುತಿಸಿ. ಕಿರು ಅಧ್ಯಯನ ನಡೆಸಲು ಆಯ್ಕೆ ಮಾಡಲಾಗಿದ್ದು, ಈ ಕಿರು ಅಧ್ಯಯನ ವರದಿಗಳನ್ನು ವಿಶ್ಲೇಷಿಸಿ ಮಾನವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸಲಾಗಿದೆ, 2008 ರಲ್ಲಿ ಬಿಡುಗಡೆಯಾದ ಜಿಲ್ಲೆಯ ಮಾನವ ಅಭಿವೃದ್ಧಿ ವರದಿಗೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನ್‍ಡಿಪಿ   ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.

ಜಿ.ಪಂ. ಅಧ್ಯಕ್ಷರಾದ ಸವಿತಾ ಶಿವಾನಂದ ಕೋಟ್ಯಾನ್ ಉಪಸ್ಥಿತರಿದ್ದರು. ಜಿಲ್ಲಾ ಮಾನವ ಅಭಿವೃದ್ಧಿ ತಯಾರಿಕೆಯ ಸಂಯೋಜಕರಾದ ಡಾ. ಎನ್.ಎಸ್. ಶೆಟ್ಟಿ ವರದಿಯ ಬಗ್ಗೆ ಮಾತನಾಡಿದರು.

ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್ ಸ್ವಾಗತಿಸಿ, ನಿರೂಪಿಸಿದರು.


Spread the love