ಉಡುಪಿ : ಯುನಾಯ್ಟೆಡ್ ಬಾಸೆಲ್ ಮಿಶನ್ ಚರ್ಚ್ ಬೋರ್ಡ್ ಮತ್ತು ಟ್ರಸ್ಟ್ ಅಸೋಶಿಯೇಶನ್ ಉಡುಪಿ, ದಕ, ಮತ್ತು ಕೊಡಗು ಜಿಲ್ಲೆಯ ಯುಬಿಎಮ್ ಜುಬಿಲಿ ಚರ್ಚಿನ ಸಭಾಪಾಲಕರಾದ ರೆವೆ. ಪ್ರಮೋದ್ ಗೋಣಿ ಇವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಸುವಾರ್ತಿಕರಾದ ಎಸ್ ಡೇನಿಯಲ್ ಡೇವಿಡ್ ಇವರಿಂದ ರಿವೈವಿಂಗ್ ದ ಫ್ಲೇಮ್ ಎಂಬ ಪ್ರಸ್ತಾಪದ ಮೇಲೆ ರಿಟ್ರೀಟ್ ಕಂ ರಿವೈವಲ್ ಮೀಟಿಂಗ್ಸ್ -2015 ಮೇ 1 ರಿಂದ 3 ರವರೆಗೆ ನಡೆಸಲಾಗುವುದು.
ರಿವೈವಲ್ ಮೀಟಿಂಗ್ಸ್ ಅಥವಾ ಭಕ್ತಿ ಸಂಜೀವನ ಕೂಟಗಳಿಂದ ಮನುಷ್ಯ ತನ್ನನ್ನು ತಾನು ಅರ್ಥಮಾಡಿಕೊಂಡು ದೇವರ ಕೃಪಾವರಗಳನ್ನು ಪಡೆಯಲು ಲಭಿಸಿರುವ ಒಂದು ಪ್ರಮುಖ ಅವಕಾಶವಾಗಿದೆ. ಆಧುನಿಕ ಜಗತ್ತಿಗೆ ಮಾರು ಹೋದ ವ್ಯಕ್ತಿಗಳೂ ಧ್ಯಾನಕೂಟದ ಮೂಲಕ ಆಧ್ಯಾತ್ಮಿಕ ಬಲದೊಂದಿಗೆ ತಮ್ಮ ಜೀವನವನ್ನು ರೂಪಿಸಲು ಸಹಕಾರಿಯಾಗಲಿದೆ. ದೇವರಲ್ಲಿ ಭಕ್ತಿ ಹಾಗೂ ವಿಶ್ವಾಸವನ್ನು ಬಲಪಡಿಸಲು ಚರ್ಚುಗಳೊಂದಿಗೆ ಹಾಗೂ ಸಮಾಜದೊಂದಿಗೆ ಭ್ರಾತ್ವತ್ವದ ಬಾಂಧವ್ಯ ಬೆಳೆಸಲು ಭಕ್ತಿ ಸಂಜೀವನ ಕೂಟ ಅವಕಾಶ ಮಾಡಿಕೊಡಲಿದೆ. ಇದಲ್ಲದೆ ನಮ್ಮ ಕ್ರೈಸ್ತ ಸಭೆಗಳ ಉಜ್ಜೀವನಕ್ಕೆ ಇದೊಂದು ಪ್ರಮುಖ ಪ್ರೇರಣೆಯಾಗಲಿದೆ. ಆತ್ಮೀಯ ಜೀವನ ಕೇವಲ ನಿಂತ ನೀರಾಗದೆ ಇತರರಿಗೆ ಅದನ್ನು ತಿಳಿಯಪಡಿಸುದಕ್ಕೆ ಇದರಿಂದ ಹೊಸ ಜೀವನವನ್ನು ಕಂಡು ಕೊಳ್ಳಲು ಕ್ರೈಸ್ತ ವಿಶ್ವಾಸಿಗಳಿಗೆ ಅವಕಾಶವಾಗಲಿದೆ.
ಮೂರು ದಿನದ ಕಾರ್ಯಕ್ರಮದಲ್ಲಿ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 4.30 ರವರೆಗೆ ಧ್ಯಾನಕೂಟಗಳು ಯುಬಿಎಮ್ ಜುಬಿಲಿ ಚರ್ಚಿನಲ್ಲಿ ನಡೆಯಲಿದ್ದು, ಸಂಜೆ 6 ರಿಂದ ಕ್ರಿಶ್ಚಿಯನ್ ಹೈಸ್ಕೂಲ್ ಗ್ರೌಂಡ್ನಲ್ಲಿ ಭಕ್ತಿ ಸಂಜೀವನ ಕೂಟಗಳು ನಡೆಯಲಿದ್ದು, ಧ್ಯಾನಕೂಟ ಮತ್ತು ಭಕ್ತಿ ಉಜ್ಜೀವನ ಕೂಟಗಳಲ್ಲಿ ವಿಶೇಷ ಸಂದೇಶಕರುಗಳಾಗಿ ಸುವಾರ್ತಿಕರಾದ ಎಸ್ ಡೇನಿಯಲ್ ಡೇವಿಡ್ ಮತ್ತು ರೆವೆ| ಜೆ. ಪ್ರಭಾಕರ್ , ವಾಲ್ಟರ್ ಮಾಬೆನ್ ಮತ್ತು ಡಾ| ಜಯ್ಸನ್ ಜೆ.ವಿ ಇವರುಗಳು ಭಾಗವಹಿಸಲಿದ್ದಾರೆ.
ಭಕ್ತಿ ಸಂಜೀವನ ಕೂಟದಲ್ಲಿ ಆಶೀರ್ವಚನ ನೀಡಲು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ. ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಗಳಾಗಿ, ಸೈಮನ್ ಪ್ರಕಾಶ್ ಅಧ್ಯಕ್ಷರು, ಯು.ಬಿ.ಎಂ.ಡಿ.ಸಿ.ವಿ ಪ್ರೊ. ಡಾ| ರಾಜ್ ರೋಡ್ರಿಗಸ್ ಸ್ಯಾಮ್ಸನ್ ಫ್ರ್ಯಾಂಕ್ ಯು.ಬಿ.ಎಮ್ ಮುಂಬೈ, ಮಂಗಳೂರು ಶಾಸಕರಾದ ಜೆ.ಆರ್.ಲೋಬೊ, ಮುಂಬೈಯ ಅಮೃತ್ ಕುಂದರ್ ಕ್ರಮವಾಗಿ ಭಾಗವಹಿಸಲಿದ್ದಾರೆ.
ಮೂರು ದಿನವೂ ಭಕ್ತಿ ಸಂಜೀವನ ಕೂಟಗಳಿಗೆ ಸುಮಾರು 5,000 ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಯುಬಿಎಮ್ ಜುಬಿಲಿ ಚರ್ಚಿನ ಸಭಾಪಾಲಕರಾದ ವಂ ಪ್ರಮೋದ್ ಗೋಣಿ ಇವರೊಂದಿಗೆ ಆರ್.ಎಸ್. ಮಾಬೆನ್, ಜಯಪ್ರಕಾಶ್ ಸೈಮನ್ಸ್, ಸುಧಾಕರ್ ಗೋಜರ್, ಸದಾನಂದ ಕಾಂಚನ್, ಗ್ಲಾಡ್ಸನ್ ಸಾಲಿನ್ಸ್, ಗೊಡ್ವಿನ್ ಬೆರ್ನಾಡ್, ಕ್ರಿಶ್ಚಿಯನ್ ಕರ್ಕಡ, ಅನಿತಾ ಸೈಮನ್ಸ್, ಜೆ.ಆರ್ ಜತ್ತನ್ನ, ಕೆರೊಲನ್ ಕಾಂಚನ್, ಸೆಲಿನಾ ಕರ್ಕಡ, ಜಿ.ಎಸ್. ಪಲ್ಲಟ, ಮಧುಕರ ಆನಂದ, ಸದಾನಂದ ಕೋಟ್ಯಾನ್, ಸಿ.ಎಸ್. ಫ್ರಾಂಚಿಸ್ ಮತ್ತು ವಿನೋದ್ ಜತ್ತನ್ನ ಇವರುಗಳ ಸಮಿತಿ ಶ್ರಮಿಸುತ್ತಿದೆ.