ಉಡುಪಿ: ಝೀ ಟಿವಿ ಹಿಂದಿ ವಾಹಿನಿಯ ಸರಿಗಮ ಲಿಟ್ಲ್ಚಾಂಪ್ ಗಗನ್ ಜಿ. ಗಾಂವ್ಕರ್ ತೀರ್ಪುಗಾರರಾಗಿರುವ ಮೊದಲ ಹಂತದ ಗಾಯನ ಸ್ಪರ್ಧೆ ಏಪ್ರಿಲ್ 26 ರಂದು ಉಡುಪಿಯಲ್ಲಿ ನಡೆಯಲಿದೆ.
ಗಗನ್ ಸಂಗೀತಾಭಿನಂದನಾ ಕಾರ್ಯಕ್ರಮದ ಅಂಗವಾಗಿ ಈ ಸ್ಪರ್ದೆಯನ್ನು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ರೈಟ್ ಕ್ಲಿಕ್ ಮೀಡಿಯಾ ಸಹಯೋಗದಲ್ಲಿ ಆಯೋಜಿಸಲಾಗಿದೆ. 15 ವರ್ಷದೊಳಗಿನ ಮಕ್ಕಳಿಗೆ ಮುಕ್ತ ಅವಕಾಸವಿದೆ.
ಸ್ಪರ್ದಾಳುಗಳು ಒಂದು ಕನ್ನಡ ಗೀತೆಯನ್ನು ಮೊದಲ ಹಂತದಲ್ಲಿ ಕರೋಕೆ ಹಿನ್ನೆಲೆ ಸಂಗೀತದೊಂದಿಗೆ ಹಾಡಬೇಕು. ಮೊದಲ ಹಂತದಿಂದ ಆಯ್ದ 10 ಮಂದಿಯನ್ನು ಅಂತಿಮ ಹಂತಕ್ಕೆ ಗಗನ್ ಆಯ್ಕೆ ಮಾಡುವರು.
ಗಗನ್ ಜಿ. ಗಾಂವ್ಕರ್ ಅವರ ಸಂಗೀತಾಭಿನಂದನೆಯ ದಿನ ವೇದಿಕೆಯಲ್ಲಿ ಹಾಡುವ ಅವಕಾಶವಿದೆ. ಜತೆಗೆ ಎರಡು ಹಂತದಲ್ಲಿ ಸ್ಪರ್ದೆ ನಡೆದು ವಿಜೇತರನ್ನು ಅಭಿನಂದಿಸಲಾಗುವುದು. ಆಸಕ್ತರು ಈವರೆಗಿನ ಸಾಧನೆಯ ಪರಿಚಯ ಪತ್ರ, ಎರಡು ಛಾಯಾಚಿತ್ರ, ವೈಯುಕ್ತಿಕ ವಿವರಗಳೊಂದಿಗೆ ರೈಟ್ ಕ್ಲಿಕ್ ಮೀಡಿಯಾ, ಪ್ರೈಮ್ ಟಿವಿ ಕಚೇರಿ, ಲಾ ಕಾಲೇಜು ಎದುರು, ಕುಂಜಿಬೆಟ್ಟು ಮೂಲಕ ಹೆಸರು ನೋಂದಾಯಿಸಬಹುದು. ಏಪ್ರಿಲ್ 25 ಮಧ್ಯಾಹ್ನದೊಳಗೆ ಹೆಸರು ದಾಖಲಿಸಿದವರಿಗೆ ಸ್ಪರ್ದೆಯಲ್ಲಿ ಭಾಗವಹಿಸುವ ಅವಕಾಶವಿದೆ.