ಉಡುಪಿ: ಲಾಕ್ ಡೌನ್ ಬಳಿಕ ಏರಿದ ಶಂಕರಪುರ ಮಲ್ಲಿಗೆ ಬೆಲೆ , ರೈತರ ಮುಖದಲ್ಲಿ ಮಂದಹಾಸ
ಉಡುಪಿ: ಶಂಕರಪುರ ಮಲ್ಲಿಗೆ ಬೆಳೆಗಾರರಿಗೆ ಮತ್ತಷ್ಟು ಸುವಾಸನೆ ಬೀರುತ್ತಿದೆ. ಕೊರೊನಾ ಕಾರಣದಿಂದ ಆರ್ಥಿಕ ವ್ಯವಹಾರ ಸ್ಥಗಿತಗೊಂಡು ಪಾತಾಳಕ್ಕೆ ಕುಸಿದಿದ್ದ, ಉಡುಪಿಯ ಶಂಕರಪುರ ಮಲ್ಲಿಗೆ ದರ, ಮತ್ತೆ ಚೇತರಿಸಿಕೊಂಡು ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.
ಶಂಕರಪುರದ ಮಲ್ಲಿಗೆಗೆ ಕಳೆದ ಕೆಲವು ವರ್ಷಗಳ ಹಿಂದೆ ಜಿಐ(ಭೌಗೋಳಿಕ ಗುರುತು) ಟ್ಯಾಗ್ ಸಿಕ್ಕಿತ್ತು. ಐದು ತಿಂಗಳ ಬಳಿಕ ಒಂದು ಅಟ್ಟೆಗೆ ಸಾವಿರ ರೂ ಗಡಿ ದಾಟಿದ್ದು, ಮಲ್ಲಿಗೆ ಬೆಳಗಾರನ ಮೊಗದಲ್ಲಿ ನಗು ಮೂಡಿಸಿದೆ.. ಮುಂಬಯಿ ವಿದೇಶಗಳಲ್ಲಿ ಬಾರೀ ಬೇಡಿಕೆ ಇರುವ ಉಡುಪಿಯ ಶಂಕರಪುರ ಮಲ್ಲಿಗೆ ದರ, ಕೊರೊನಾ ಹೊಡೆತಕ್ಕೆ ಸಿಕ್ಕಿ ಪಾಳಕ್ಕೆ ಕುಸಿದಿತ್ತು.
ಮೊದಲ ಲಾಕ್ ಡೌನ್ ಸಮಯದಲ್ಲಿ ಉಡುಪಿ ಸ್ಥಳೀಯ ಮಾರುಕಟ್ಟೆ ಬಿಟ್ಟು ಬೇರೆ ಕಡೆ ಸಾಗಾಣಿಕೆ ಆಗದೇ ಅಟ್ಟೆ 50 ರೂ ಇಳಿದಿತ್ತು.. ಎರಡನೇ ಲಾಕ್ ಡೌನ್ ಸಮಯದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಬಂದ್ ಆಗಿತ್ತು . ನಂತರ ಲಾಕ್ ಡೌನ್ ತೆರವುಗೊಂಡ ಬಳಿಕ ಅಟ್ಟೆಗೆ 100 ರಿಂದ 400 ರೂಗಳ ಆಸುಪಾಸಿನಲ್ಲಿ ಇತ್ತು.
ಸದ್ಯ ಮಳೆಯ ಕಾರಣದಿಂದ ಮಲ್ಲಿಗೆ ಇಳುವರಿ ಕಡಿಮೆ, ಅಲ್ಲದೇ ಶ್ರಾವಣ ಮಾಸದಲ್ಲಿ ಮದುವೆ ಸಮಾರಂಭ ಹೆಚ್ಚಾಗಿ ನಡೆಯುವ ಕಾರಣದಿಂದ ದರ ಏರತೊಡಗಿದೆ. ಸದ್ಯಕ್ಕೆ ಮುಂಬಯಿ ಹಾಗೂ ವಿದೇಶಗಳಿಗೆ ಶಂಕರಪುರ ಮಲ್ಲಿಗೆ ರವಾನೆ ಆಗುತ್ತಿಲ್ಲ ಅದು ಆರಂಭ ಆದ್ರೆ ಮಲ್ಲಿಗೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.