ಉಡುಪಿ: ವೈದ್ಯಕೀಯ ವೃತ್ತಿ ವ್ಯವಹಾರವಾಗಬಾರದು. ವೈದ್ಯರಾದವರು ರೋಗಿಗಳ ಮೇಲೆ ಅನುಕಂಪವಿಟ್ಟು ರೋಗಳ ಸೇವೆಯನ್ನು ಮಾಡಬೇಕು. ವೈದ್ಯರ ಸಮಾಧಾನವೇ ರೋಗಗುಣವಾಗುವ ಅಸ್ತ್ರವಾಗಬೇಕು ಎಂದು ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಉಡುಪಿಯ ಗಾಂದಿ ಆಸ್ಪತ್ರೆಯ ವಿಂಶತಿ ವರ್ಷಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಯಿಲೆಗಳು ಅನಾದಿಕಾಲದಿಂದಲೂ ಇದ್ದವು. ದೇವತೆಗಳಿಗೂ ಕಾಯಿಲೆಗಳು ಬರುತ್ತಿದ್ದವು. ಅಶ್ವಿನಿದೇವತೆಗಳು ದೇವತೆಗಳ ವೈದ್ಯರಾಗಿದ್ದರು. ಹಿಂದಿನ ಕಾಯಿಲೆಗಳಿಗಿಂತಲೂ ಇಂದಿನ ಕಾಯಿಲೆಗಳು ಚಿತ್ರ ವಿಚಿತ್ರವಾಗಿವೆ. ಕೆಲವೊಂದು ಕಾಯಿಲೆಗಳನ್ನು ಪತ್ತೆ ಹಚ್ಚುವ ಉಪಕರಣಗಳನ್ನು ನಮ್ಮಲ್ಲಿ, ನಮ್ಮ ರಾಜ್ಯದಲ್ಲಿಯೇ ಇಲ್ಲ. ಅಂತಹವುಗಳು ನಮ್ಮ ರಾಜ್ಯಕ್ಕೂ ಬರಬೇಕು. ನಾವು ಭರಿಸುವ ವೈದ್ಯಕೀಯ ವೆಚ್ಚ ವೈದ್ಯಕೀಯ ಕೇವಲ ವೈದ್ಯಯ ವೆಚ್ಚವಲ್ಲದೆ ಉಪಕರಣದ ವೆಚ್ಚವೂ ಸೇರಿದೆ ಎಂದರು.
ಉಡುಪಿ ನಗರ ಸಭೆಯ ಅಧ್ಯಕ್ಷ ಯುವರಾಜ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ. ಹರೀಶ್ಚಂದ್ರ, ಆಸ್ಪತ್ರೆಯನ್ನು ಇನ್ನಷ್ಟು ವಿಸ್ತರಿಸುವ ಉz್ದÉೀಶವನ್ನು ಹೊಂದಿಲ್ಲ. ಇರುವ ಆಸ್ಪತ್ರೆಯಲ್ಲಿಯೇ ಉತ್ತಮ ಸೌಲಭ್ಯಗಳು, ನಗು ಮೊಗದ ಸೇವೆಯನ್ನು ನೀಡುವ ಉz್ದÉೀಶ ಹೊಂದಲಾಗಿದೆ. ಅಲ್ಲದೆ ಪಂಚಲಹರಿ ಫೌಂಡೇಶನ್ ಮೂಲಕವೂ ಹಲವಾರು ಸಾಮಾಜಿಕ, ಜನಪರ ಕಾರ್ಯಗಳನ್ನು ನಡೆಸಲು ಉz್ದÉೀಶಿಸಲಾಗಿದೆ ಎಂದರು.
ನಗರ ಸಭೆ ಸದಸ್ಯ ಹರೀಶ್ ರಾಮ್ ಬನ್ನಂಜೆ, ಉಜ್ವಲ್ ಡೆವಲಪರ್ಸ್ ಮಾಲೀಕ ಪುರುಷೋತ್ತಮ ಶೆಟ್ಟಿ, ಉಡುಪಿಯ ನೈನಾ ಫ್ಯಾನ್ಸಿ ಮಾಲೀಕ ಮೊಹಮ್ಮದ್‍ಮೌಲಾ, ಹೆಬ್ರಿಯ ಎಸ್4 ಡಿವಲಪರ್ಸ್ ಮಾಲೀಕ ಮಡಾಮಕ್ಕಿ ಶಶಿಧರ ಶೆಟ್ಟಿ, ಕುಂದಾಪುರ ಪುರಸಭೆಯ ಸದಸ್ಯೆ ಸಿಸಿಲಿ ಕೋಟ್ಯಾನ್, ಲಕ್ಷ್ಮೀ ಹರೀಶ್ಚಂದ್ರ, ಪಂಚಮಿ ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯ ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿ, ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಉಸ್ತಾದ್ ಹುಮಾಯೂನ್ ಹರ್ಲಾಪುರ ಶಿವಮೊಗ್ಗ ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.