ಉಡುಪಿ: ಶಾಲಾ ಮಗುವಿಗೆ ತನ್ನ ಸೀಟು ಬಿಟ್ಟು ಕೊಟ್ಟ ಎಸ್ಪಿ ಅಣ್ಣಾ ಮಲೈ!

Spread the love

ಉಡುಪಿ : ಭಧ್ರತೆ ಹಾಗೂ ಶಿಸ್ತಿಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೆಸರುವಾಸಿ ಆದರೆ ಅದೇ ಶಾಲಾ ಕಾಲೇಜಿನ ಮಕ್ಕಳಿಗೆ ಎಸ್ಪಿ ರಿಯಲ್ ಹೀರೊ. ಸದಾ ಮಕ್ಕಳ ಭಧ್ರತೆ ಶಿಕ್ಷಣ ಇವುಗಳಿಗೆ ಒತ್ತು ನೀಡುವ ಅವರು ಮಕ್ಕಳಿಗೆ ಪ್ರೀತಿಯ ಅಣ್ಣಾಮಲೈ.

ಬಕ್ರೀದ್ ಹಬ್ಬದ ಶುಭಾಶಯ ತಿಳಿಸಲು ಬಂದ ಮಕ್ಕಳಿಗೆ ಪೋಲಿಸ್ ಅಂದರೆ ಏನು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಪುಟಾಣಿ ಮಗುವನ್ನು ತನ್ನ ಕುರ್ಚಿಯಲ್ಲಿ ಕುಳ್ಳಿರಿಸಿ ಗೌರವ ಸೂಚಿಸಿದ ಘಟನೆ ಮಂಗಳವಾರ ನಡೆಯಿತು.

3161713

ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಇಂಟರ್‌ ನ್ಯಾಶನಲ್‌ ಹಾಲೆಸ್ಟಿಕ್‌ ಮೊಂಟೆಸ್ಸರಿ “ಬ್ರೈನಿಸ್ಟಾರ್‌’ ಇಲ್ಲಿನ ಒಟ್ಟು 31 ಪುಟಾಣಿಗಳು ಮಂಗಳವಾರ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಗೆ ಬಕ್ರೀದ್‌ ಹಬ್ಬದ ಶುಭಾಶಯ ಕೋರಲು ಬಂದಿದ್ದು, ಎಸ್ಪಿ ಅಣ್ಣಾಮಲೈ, ಡಿವೈಎಸ್ಪಿ ಚಂದ್ರಶೇಖರ್‌ ಸೇರಿದಂತೆ ಎಸ್ಪಿ ಕಚೇರಿಯ ಸಿಬ್ಬಂದಿಗೆ ಈದ್‌ ಶುಭಾಶಯ ಸಲ್ಲಿಸಿದ ಮಕ್ಕಳು, ಸಿಹಿ ತಿಂಡಿಗಳನ್ನು ನೀಡಿದರು. ಈ ವೇಳೆ ಎಸ್ಪಿ ಅಣ್ಣಾಮಲೈ ಪೊಲೀಸ್‌ ಅಂದರೆ ಏನು ಪ್ರಶ್ನೆಯನ್ನು ಮಕ್ಕಳಿಗೆ ಕೇಳಿದರು. ಆಗ ಬೈನಿಸ್ಟಾರ್‌ನ ಮೂರೂವರೆ ವರ್ಷದ ಮಗು ಝಿಹಾನ್‌ ಅಸದಿ ಉದ್ಯಾವರ ಸೆಕ್ಯುರಿಟಿ ಎಂಬ ಉತ್ತರ ನೀಡಿದನು. ಪುಟಾಣಿಯ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಗೌರವ ಸೂಚಕವಾಗಿ ಅವರ ಸೀಟಿನಲ್ಲಿ ಆತನನ್ನು ಕುಳ್ಳಿರಿಸಿದರು. ಎಸ್ಪಿ ಅಣ್ಣಾಮಲೈ ಎಲ್ಲ ಪುಟಾಣಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಚಾಕೋಲೆಟ್‌ಗಳನ್ನು ಹಂಚಿದರು.

ಈ ಸಂದರ್ಭದಲ್ಲಿ ಎಂಇಟಿ ಸ್ಕೂಲ್‌ನ ಆಡಳಿತಾಧಿಕಾರಿ ಖಲೀಲ್‌ ಅಹ್ಮದ್‌, ಈದ್‌ ಮಹತ್ವವನ್ನು ವಿವರಿಸಿದರು. ಬ್ರೈನಿಸ್ಟಾರ್‌ನ ಶಾಖಾ ಮುಖ್ಯಸ್ಥೆ ಝೀನತ್‌ ಖಲೀಲ್‌, ಶಿಕ್ಷಕಿ ಆಯೀಷಾ ಸಫಾನ ಉಪಸ್ಥಿತರಿದ್ದರು.


Spread the love