ಉಡುಪಿ: ಶ್ರೀ ಅನಂತೇಶ್ವರ-ಚಂದ್ರಮೌಳೀಶ್ವರ ದೇವಳದ ಛಾವಣಿ ನವೀಕರಣಕ್ಕೆ ಚಾಲನೆ

Spread the love

ಉಡುಪಿ: ಪುತ್ತಿಗೆ ಮಠದ ಆಡಳಿತದಲ್ಲಿರುವ ರಾಜ್ಯಸರ್ಕಾರದ ಮುಜರಾಯಿ ಇಲಾಖೆಗೆ ಒಳಪಟ್ಟದ ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿರುವ ಶ್ರೀ ಮದನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಳದ ಛಾವಣಿ ನವೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು.

AKB_4415 AKB_4425 AKB_4426 AKB_4428 AKB_4433

ಹಲವು ವರ್ಷಗಳಿಂದ ದೇವಳದ ಛಾವಣಿ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ದೇವಳದಲ್ಲಿ ಪೂಜೆ ಪುನಸ್ಕಾರಗಳಿಗೆ ತೊಂದರೆಯಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ದೇವಳದ ಛಾವಣಿ ನವೀಕರಣಕ್ಕೆ ಚಿಂತನೆ ನಡೆಸಲಾಗಿತ್ತು. ಸರ್ಕಾರದಿಂದಲೂ ಅನುಮತಿ ದೊರಕಿತ್ತು.

ಸೋಮವಾರ ಬೆಳಗ್ಗೆ ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲರ್ಭ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಆಗಮ ಶಾಸ್ತ್ರದ ಪ್ರಕಾರ ಸಾಮೂಹಿಕ ಎರಡೂ ದೇವಳಗಳಲ್ಲಿ ದೇವರಿಗೆ ಪ್ರಾರ್ಥನೆ ನಡೆಸಿ ಕಾಮಗಾರಿಗಗೆ ಚಾಲನೆ ನೀಡಲಾಯಿತು.

ರಾಜ್ಯ ಸರ್ಕಾರದ ನಿರ್ಮಿತ ಕೇಂದ್ರದ ವತಿಯಿಂದ ದೇವಳದ ಛಾವಣಿ ನಿರ್ಮಾಣದ ಸಂಪೂರ್ಣ ಕಾಮಗಾರಿ ನಡೆಯಲಿದೆ.

ಪುತ್ತಿಗೆ ಮಠದ ವತಿಯಿಂದ ಕಾಮಗಾರಿಗೆ ರಾಜ್ಯ ಸರ್ಕಾರಕ್ಕೆ 3 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು, ಮುಖ್ಯಮಂತ್ರಿಗಳು ಸಕಾರಾತ್ಮಾಕವಾಗಿ ಸ್ಪಂದಿಸಿದ್ದಾರೆ. ಅಷ್ಟ ಮಂಗಳ ಪ್ರಶ್ನೆಯಲ್ಲಿ ದೇವಳದ ಗರ್ಭಗುಡಿಯ ಛಾವಣಿಯನ್ನು ಶೀಘ್ರ ನವೀಕರಣ ಮಾಡಬೇಕು ಎಂದು ತೋರಿ ಬಂದಿರುವುದರಿಂದ ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.  ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ಎರಡೂ ದೇವಳಕ್ಕೆ ಚಿನ್ನದ ಕಲಶವನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಅನಂತೇಶ್ವರ ದೇವಳಕ್ಕೆ 3 ಹಾಗೂ ಚಂದ್ರಮೌಳೀಶ್ವರ ದೇವಳಕ್ಕೆ 1 ಚಿನ್ನದ ಕಲಶವನ್ನು ಅಳವಡಿಸಲಾಗುತ್ತದೆ. ಒಂದು ಚಿನ್ನದ ಕಲಶವನ್ನು ಪುತ್ತಿಗೆ ಮಠದ ವತಿಯಿಂದ ನೀಡಲಾಗುತ್ತದೆ. ಉಳಿದ ಕಲಶವನ್ನು ಭಕ್ತರ ದೇಣಿಗೆಯಿಂದ ಮಾಡಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು. ಮುಂದಿನ ಮಕರ ಸಂಕ್ರಮಣ ಅ ಪರಶುರಾಮ ಜಯಂತಿ ವೇಳೆಗೆ ನವೀಕರಣ ಕಾಮಗಾರಿ ಪೂರ್ಣಗೊಳ್ಳಲಿದ್ದು ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.

ಆಗಮ ಶಾಸ್ತ್ರದ ಸಂಕೋಚನ ವಿಧಿಯ ಮೂಲಕ ಉತ್ಸಾವಾದಿಗಳಿಗೆ ತೊಂದರೆಯಾಗದ ರೀತಿಯಲ್ಲಿ ನವೀಕರಣ ಕಾಮಗಾರಿಯನ್ನು ನಡೆಲಾಗುತ್ತದೆ ಎಂದು ರಾಜ್ಯ ಸರ್ಕಾರದ ಧಾರ್ಮಿಕ ಪರಿಷತ್ತಿನ ಶ್ರೀಧರ ತಂತ್ರಿ ತಿಳಿಸಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಊರಿನ ಗಣ್ಯರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಭುವನೇಂದ್ರ ಕಿದಿಯೂರು, ಜಯಕರ ಶೆಟ್ಟಿ ಇಂದ್ರಾಳಿ, ಭಾಸ್ಕರ ರಾವ್ ಕಿದಿಯೂರು, ನಿತ್ಯಾನಂದ ವಳಕಾಡು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.


Spread the love