Home Mangalorean News Kannada News ಉಡುಪಿ: ಷರತ್ತುಗಳಿಗೆ ಒಳಪಟ್ಟು ಅಂಗಡಿ ತರೆಯಲು ಅನುಮತಿ- ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ: ಷರತ್ತುಗಳಿಗೆ ಒಳಪಟ್ಟು ಅಂಗಡಿ ತರೆಯಲು ಅನುಮತಿ- ಜಿಲ್ಲಾಧಿಕಾರಿ ಜಿ.ಜಗದೀಶ್

Spread the love

ಉಡುಪಿ: ಷರತ್ತುಗಳಿಗೆ ಒಳಪಟ್ಟು ಅಂಗಡಿ ತರೆಯಲು ಅನುಮತಿ- ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ: ಕೋವಿಡ್-19 (ಕರೊನಾ ವೈರಾಣು ಕಾಯಿಲೆ 2019) ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಸದರಿ ಕಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ಅನೇಕ ಜನಸಂದಣೆ ಇರುವ ಸ್ಥಳಗಳಲ್ಲಿ/ ಹೆಚ್ಚು ಗ್ರಾಹಕರು ಸೇರುವಂತಹ ವಾಣಿಜ್ಯ ಮಳಿಗೆಗಳು, ಎ.ಸಿ ಮಳಿಗೆಗಳು, ಮಾಲ್‌ಗಳನ್ನು ಈಗಾಗಲೇ ಮುಚ್ಚುವಂತೆ ನಿರ್ದೇಶಿಸಲಾಗಿತ್ತು.

ಮುಂದುವರಿದು ಸರ್ಕಾರದ ಆದೇಶದಂತೆ ಕೆಲವೊಂದು ವಿಷಯಗಳಿಗೆ ವಿನಾಯಿತಿ ನೀಡಲಾಗಿರುತ್ತದೆ. ಈಗಾಗಲೇ ಸಿನಿಮಾ ಹಾಲ್‌ಗಳು, ಮಲ್ಟಿಪ್ಲೇಕ್ಸ್ ಶಾಪಿಂಗ್ ಮಾಲ್, ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ‍್ಯಾಂಡ್, ಮಲ್ಟಿ ಬ್ರ‍್ಯಾಂಡ್, Sports Complex, ಮುಂತಾದವುಗಳನ್ನು ಹೊರತ್ತುಪಡಿಸಿ ಉಳಿದ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ, ಮುಂದುವರಿದು ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ‍್ಯಾಂಡ್, ಮಲ್ಟಿ ಬ್ರ‍್ಯಾಂಡ್ ಅಂಗಡಿಗಳಿಗೆ ಸಂಬಂದಿಸಿದಂತೆ ನಿಬಂಧನೆಗಳನ್ನು ವಿಧಿಸಿ ಪ್ರಾರಂಭಿಸಲು ಅನುಮತಿ ನೀಡುವುದು ಸೂಕ್ತವೆಂದು ನಿರ್ಧರಿಸಿ ಈ ಕೆಳಗಿನ ಷರತ್ತಿಗೊಳಪಟ್ಟು ಈ ಅಂಗಡಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ.

ಷರತ್ತುಗಳು :
1) ಚಿನ್ನಾಭರಣ ಮಳಿಗೆಗಳು, ಬಟ್ಟೆ ಅಂಗಡಿಗಳು, ಸಿಂಗಲ್ ಬ್ರ‍್ಯಾಂಡ್, ಮಲ್ಟಿ ಬ್ರ‍್ಯಾಂಡ್ ಸೇರಿದಂತೆ ಇತಂಹ ಮಳಿಗೆಗಳಲ್ಲಿ ಎಲ್ಲಾ ಮಹಡಿಗಳಲ್ಲಿ ಸೇರಿ ಒಟ್ಟು 25 ಜನ ಸಿಬ್ಬಂದಿಗಳು ಹಾಗೂ 25 ಜನ ಗ್ರಾಹಕರು ಹಾಗೂ ಮಲ್ಟಿ ಬ್ರಾಂಡ್ ಎಲೆಕ್ರ‍್ಟಾನಿಕ್ಸ್ ಮಳಿಗೆಗಳಲ್ಲಿ (ಪೈ ಸೇಲ್ಸ್, ಹರ್ಷ ಮುಂತಾದ) ಒಟ್ಟು 10 ಜನ ಸಿಬ್ಬಂದಿಗಳು ಹಾಗೂ 10 ಜನ ಗ್ರಾಹಕರಿಗೆ ಅವಕಾಶವನ್ನು ನೀಡಲಾಗಿದೆ.

2) ಮಳಿಗೆ ತೆರೆಯುವ ಮುನ್ನಾ ನಿಯೋಜಿಸಲಾಗುವ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ವೈದ್ಯರಿಂದ ಮಾಡಿಸುವುದು, ಅದೇ ಸಿಬ್ಬಂದಿಗಳನ್ನು ಮುಂದುವರಿಸುವುದು. ಸಿಬ್ಬಂದಿಗಳಲ್ಲಿ ರೋಗ ಲಕ್ಷಣಗಳು ಕಂಡುಬದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸತಕ್ಕದಲ್ಲ.

3) ಮಳಿಗೆಗಳಲ್ಲಿ ಎ.ಸಿ ಯನ್ನು ಕಡ್ಡಾಯವಾಗಿ ಬಳಸುವಂತಿಲ್ಲ.

4) ಮಾಸ್ಕ್, ಗ್ಲೌಸ್ ಮತ್ತು ಸ್ಯಾನಿಟೈಸರ್ ಗಳನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಬಳಸತಕ್ಕದ್ದು ಮತ್ತು ಗ್ರಾಹಕರು ಮಾಸ್ಕ್ ಕಡ್ಡಾಯವಾಗಿ ಬಳಸತಕ್ಕದ್ದು.

5) ಪ್ರತಿ ದಿನ ವ್ಯವಹಾರ ಪ್ರಾರಂಭಿಸುವ ಮೊದಲು ಮತ್ತು ಮುಕ್ತಾಯದ ನಂತರ ಶಾಪ್ ಗಳನ್ನು ಸ್ಯಾನಿಟೈಸ್ ಮಾಡುವುದು.

6) ಮಳಿಗೆಯನ್ನು ಪ್ರವೇಶಿಸುವ ಮುನ್ನಾ ಗ್ರಾಹಕರು ಸ್ಯಾನಿಟೈಸರ್ ಬಳಸಿ ಒಳ ಪ್ರವೇಶಿಸುವುದಕ್ಕೆ ಮಳಿಗೆ ಮಾಲಿಕರು/ ವ್ಯವಸ್ಥಾಪಕರು ಏರ್ಪಾಡು ಮಾಡಿಕೊಳ್ಳುವುದು ಹಾಗೂ ಖಾತ್ರಿ ಪಡಿಸಿಕೊಳ್ಳುವುದು, ಅದೇ ರೀತಿ ಪ್ರತಿಯೊಂದು ಸಿಬ್ಬಂದಿ/ ಗ್ರಾಹಕರಿಗೆ Thermal Screening ಮಾಡಿಸಿಯೇ ಮಳಿಗೆಗಳನ್ನು ಪ್ರವೇಶಿಸಲು ಅವಕಾಶ ನೀಡುವುದು.

7) 60 ವರ್ಷ ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿಯರು ಮಳಿಗೆಗಳಿಗೆ ಬರುವುದನ್ನು ನಿರ್ಬಂಧಿಸಲಾಗಿದೆ.

8) ಸದರಿ ಮಳಿಗೆಗಳಿಗೆ ಆಗಮಿಸುವ ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಇರುವ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಮಳಿಗೆಗಳ ಮಾಲಿಕರು/ವ್ಯವಸ್ಥಾಪಕರು ಖಚಿತ ಪಡಿಸಿಕೊಳ್ಳುವುದು

9) ಸರದಿಯಲ್ಲಿರುವ ಇತರ ಗ್ರಾಹಕರಿಗೆ ಮಳಿಗೆಯ ಹೊರಗಡೆ ಸಾಮಾಜಿಕ ಅಂತರ ಕಾಪಾಡಿ ಕುಳಿತು ಕೊಳ್ಳಲು ವ್ಯವಸ್ಥೆ ಮಾಡುವುದು.


Spread the love

Exit mobile version