ಉಡುಪಿ: ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಸಿಯೇಶನ್ ಇದರ ರಜತ ಸಂಭ್ರಮದ ಸಮಾರೋಪ ಸಮಾರಂಭ ಶುಕ್ರವಾರ ನಗರದ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮಕ್ಕೂ ಮೊದಲು ಕ್ಲಾಕ್ಟವರ್ ನಿಂದ ಸಭಾಂಗಣದ ವರೆಗೆ ವಾಹನ ಜಾಥಾ ನಡೆಯಿತು. ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಜಾಥಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ. ಜಿ.ಶಂಕರ್ ನೆರವೇರಿಸಿದರು.
ಬಳಿಕ ಮಾತನಾಡಿ ಜಿ ಶಂಕರ್ ಬಡವರ ನೋವಿಗೆ ಸ್ಪಂದಿಸುವ ಕೆಲಸ ಸಂಘಟನೆಯಿಂದ ಸಾಧ್ಯವಿದೆ ಸಂಘಟನೆಗಳು ಗಟ್ಟಿಯಾದಾಗ ಮಾತ್ರ ಬೆಳೆಯುತ್ತಾ ಹೋಗುತ್ತದೆ. ಸಂಘಟನೆಯ ಬೆಳೆಯುವ ಮೂಲಕ ಸರ್ಕಾರದ ಗಮನವನ್ನು ತನ್ನತ್ತ ಸೆಳೆದು, ಸಮಸ್ಯೆ, ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು. ಸಂಘಟನೆಯು ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಡವರ ನೋವುಗಳಿಗೆ ಸ್ಪಂದಿವುದು ಅಗತ್ಯವಾಗಿದೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಎಸ್ಕೆಪಿಎ ಜೊತೆಗೆ ಎಂದಿಗೂ ಇರುತ್ತದೆ. ಸಂಘವು ಅವಿಭಜಿತ ಜಿಲ್ಲಾ ಸಂಘವಾಗಿಯೇ ಮುಂದುವರಿಯಬೇಕು ಎಂದರು.
ಮುಖ್ಯಅತಿಥಿಯಾಗಿದ್ದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಫೋಟೋಗಳು ಮೂಲಕ ನಾವು ನಮ್ಮ ಬಾಲ್ಯ, ಹಿಂದಿನ ಜೀವನವನ್ನು ಮೆಲುಕು ಹಾಕಲು ಸಾಧ್ಯವಾಗುತ್ತದೆ. ಸಂಘಟನೆಯಿದ್ದರೆ ನಮ್ಮ ಸಮಸ್ಯೆಗಳ ನಿವಾರಣೆಗೂ ಸಹಾಯಕವಾಗುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಹನುಮಾನ್ ಸಮೂಹ ಸಂಸ್ಥೆಗಳ ವಿಲಾಸ ನಾಯಕ್ ಮಾತನಾಡಿ ಫೋಟೊಗ್ರಾಫರ್ಸ್ ಗಳಿಗೆ ತಾವು ಮಾಡಿದ ಕೆಲಸಕ್ಕೆ ಸರಿಯಾದ ಸಂಭಾವನೆ ಪಡೆಯುವ ಮೂಲಕ ಸಮಾಧಾನದ ಜೀವನ ನಡೆಸಲು ಸಹಕಾರಿಯಾಗಲಿ ಎಂದು ಶುಭಹಾರೈಸಿದರು
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುರೇಶ್ ಪ್ರಭು, ವಿಶು ಶೆಟ್ಟಿ ಅಂಬಲಪಾಡಿ, ರವೀಂದ್ರ ಪಾಣಾರ, ರವಿ ಕಕ್ಕೆಪದವು, ಕುದಿ ಶ್ರೀನಿವಾಸ ಭಟ್, ಸತೀಶ್ ಬ್ರಹ್ಮಾವರ, ಗಣಪತಿ ಭಟ್, ಈಶ್ವರ ಭಟ್, ದಿವಾಕರ ಕಟೀಲ್, ಮನೋಹರ ಕುಂದರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಸುಂದರ ಪುತ್ರನ್, ಸಂಘದ ಸ್ಥಾಪಕ ಸದಸ್ಯರನ್ನು ಗೌರವಿಸಲಾಯಿತು.
ಸಂಗೀತ ನಿರ್ದೇಶಕ ಗುರುಕಿರಣ್, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಶಶಿಧರ್, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ಗೌರವಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಗೋಪಾಲ ಸುಳ್ಯ, ಶಿವರಾಮ ಕಡಬ, ಕರುಣಾಕರ ಕಾನಂಗಿ, ಕಾರ್ಯದರ್ಶಿಗಳಾದ ಆನಂದ ಬಂಟ್ವಾಳ, ಮಧು ಮಂಗಳೂರು, ಜಿಲ್ಲಾ ಸಂಚಾಲಕ ವಿಠಲ ಚೌಟ ಮಂಗಳೂರು, ಕೋಶಾಧ್ಯಕ್ಷ ಜಗನ್ನಾಥ್ ಶೆಟ್ಟಿ ಮಂಗಳೂರು, ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್ ಕಾರ್ಕಳ, ಉಪಾಧ್ಯಕ್ಷ ಕರುಣಾಕರ ಗೌಡ ಪುತ್ತೂರು, ರಜತ ಸಮಿತಿಯ ಸಂಚಾಲಕರಾದ ದಾಮೋದರ ಆಚಾರ್ಯ, ಅನ್ನು ಮಂಗಳೂರು, ಆಸ್ಟ್ರೋ ಮೋಹನ್, ನವೀನ್ ರೈ ಪಂಜಳ ಪುತ್ತೂರು, ದಿವಾಕರ ಹಿರಿಯಡ್ಕ, ರಂಜನ್ ಕುಮಾರ್ ಕಟಪಾಡಿ ಉಪಸ್ಥಿತರಿದ್ದರು.
ಎಸ್ಕೆಪಿಎ ಅಧ್ಯಕ್ಷ ಕೆ. ವಾಸುದೇವ ರಾವ್ ಸ್ವಾಗತಿಸಿ, ಪ್ರಸಾವಿಸಿದರು. ರಾಘು ಉಡುಪಿ ಕಾರ್ಯಕ್ರಮ ನಿರೂಪಿಸಿದರು.