ಉಡುಪಿ ಸರ್ವಿಸ್ ಬಸ್ಸು ನಿಲ್ದಾಣ, ಕ್ಲಾಕ್ ಟವರ್ ಹಾಗೂ ಜಟಕಾ ನಿಲ್ದಾಣದ ಬಳಿ ಪ್ರತಿಭಟನೆ ನಿಷೇಧ
ಉಡುಪಿ:ಸಾರ್ವಜನಿಕ ಹಿತದೃಷ್ಟಿ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಉಡುಪಿ ಸರ್ವಿಸ್ ಬಸ್ಸು ನಿಲ್ದಾಣ, ಕ್ಲಾಕ್ ಟವರ್ ಹಾಗೂ ಜಟಕಾ ನಿಲ್ದಾಣದ ಬಳಿ , ಸಾರ್ವಜನಿಕರು, ಸಂಘ-ಸಂಸ್ಥೆಗಳು, ಯಾವುದೇ ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದನ್ನು ಶಾಶ್ವತವಾಗಿ ನಿಷೇಧಿಸಿ ಅಪರ ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.
ಉಡುಪಿ ಬಸ್ಸು ನಿಲ್ದಾಣದಿಂದ ಕಿನ್ನಿಮುಲ್ಕಿಯವರೆಗೆ ಮದ್ಯ ಇರುವ ಕವಿ ಮುದ್ದಣ್ಣ ರಸ್ತೆ(ಕೆ.ಎಂ ಮಾರ್ಗ) ಉಡುಪಿ ನಗರದ ಹೃದಯ ಭಾಗದ ಮುಖ್ಯ ರಸ್ತೆಯಾಗಿದ್ದು, ದ್ವಿಪಥವಿದ್ದರೂ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಕಿರಿದಾದ ರಸ್ತೆಯಿಂದ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಕಷ್ಟವಾಗಿದ್ದು, ಇದೇ ರಸ್ತೆಯಲ್ಲಿ ಉಡುಪಿಯ ಕ್ಲಾಕ್ ಟವರ್, ಜಟಕಾ ನಿಲ್ದಾಣ ಇದ್ದು, ಅಕ್ಕಪಕ್ಕದಲ್ಲಿ ಸರ್ವೀಸ್ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಹಾಗೂ ಸಿಟಿಬಸ್ ನಿಲ್ದಾಣ ಸುತ್ತಮುತ್ತ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದ್ದು, ಶಾಲಾ-ಕಾಲೇಜುಗಳು, ಸರಕಾರಿ ಕಚೇರಿ ,ಆಸ್ಪತ್ರೆಗಳಿದ್ದು, ಬಸ್ಸು ನಿಲ್ದಾಣಗಳಿಂದ ಕೆ.ಎಂ ಮಾರ್ಗವಾಗಿ ಪ್ರತಿ ದಿನ ಸರಕಾರಿ ಹಾಗೂ ಖಾಸಗಿ ಬಸ್ಸುಗಳು ಸಾವಿರಕ್ಕೂ ಹೆಚ್ಚು ಟ್ರಿಪ್ ಮಾಡುತ್ತಿದ್ದು, ಸಾದಾ ವಾಹನಗಳು, ಪ್ರಯಾಣಿಕರು, ಶಾಲಾ/ಕಾಲೇಜು ವಿದ್ಯಾರ್ಥಿಗಳು, ನೌಕರರು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರ ಓಡಾಟದಿಂದ ಈ ರಸ್ತೆಯು ಸದಾ ದಟ್ಟಣೆಯಿಂದ ಕೂಡಿದ್ದರೂ ಸಹಾ ಕ್ಲಾಕ್ ಟವರ್ ಹಾಗೂ ಜಿಲ್ಲಾ ಜಟ್ಕಾ ನಿಲ್ದಾಣದ ಬಳಿ ಪ್ರತಿ ದಿನ, ವಿವಿಧ ರಾಜಕೀಯ ಪಕ್ಷಗಳು ವಿವಿಧ ಸಂಘಟನೆಗಳು, ವಿವಿಧ ಜಾತಿಯವರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಪ್ರತಿಭಟನೆಯಲ್ಲಿ ಭಾಗವಹಿಸುವ ಜನರು ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರು ಹಾಗೂ ಸಾರ್ವಜನಿಕರು ಇದನ್ನು ನೋಡುವ ಸಲುವಾಗಿ ರಸ್ತೆಗೆ ಅಡ್ಡಲಾಗಿ ನಿಂತು ರಸ್ತೆ ತಡೆಯಾಗಿ, ಬಸ್ಸು ಸಂಚಾರ ಹಾಗೂ ಇತರ ದ್ವಿಚಕ್ರ ಹಾಗೂ ಲಘು ವಾಹನ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ನಿತ್ಯ ಪ್ರಯಾಣಿಸುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಸರಕಾರಿ/ಖಾಸಗಿ ನೌಕರರಿಗೆ ಪ್ರಯಾಣಿಕರಿಗೆ , ಆಸ್ಪತ್ರೆಗೆ ಬರುವ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ತುರ್ತು ಸಮಯದಲ್ಲಿ ತಲುಪಲು ಕಷ್ಟವಾಗುತ್ತಿರುವುದರಿಂದ ಸಾರ್ವಜನಿಕ ಹಿತದೃಷ್ಟಿ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಉಡುಪಿ ಸರ್ವಿಸ್ ಬಸ್ಸು ನಿಲ್ದಾಣ, ಕ್ಲಾಕ್ ಟವರ್ ಹಾಗೂ ಜಟಕಾ ನಿಲ್ದಾಣದ ಬಳಿ , ಸಾರ್ವಜನಿಕರು, ಸಂಘ-ಸಂಸ್ಥೆಗಳು, ಯಾವುದೇ ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದನ್ನು ಶಾಶ್ವತವಾಗಿ ನಿಷೇಧಿಸಿ ಅಪರ ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.