ಉದ್ಯಾವರ : ಕೋಟೆಬಳಿ ಹೋಗುವ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆ
ಉಡುಪಿ: ಉದ್ಯಾವರ ಮೀನುಗಾರಿಕಾ ರಸ್ತೆಯಿಂದ ಕೋಟೆಬಳಿ ಹೋಗುವ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಯಿತು.
ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿಯವರ 2 ಲಕ್ಷ ರೂಪಾಯಿಗಳ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ.
ಕಾಮಗಾರಿಗೆ ಚಾಲನೆ ನೀಡುವ ವೇಳೆ ಉದ್ಯಾವರ ಪಂಚಾಯತ್ ಉಪಾಧ್ಯಕ್ಷರಾದ ರಿಯಾಜ್ ಪಳ್ಳಿ, ಸದಸ್ಯರಾದ ಕಿರಣ್ ಕುಮಾರ್ ಉದ್ಯಾವರ ಹಾಗೂ ಪ್ರಾಧಿಕಾರಾದ ಮಾಜಿ ಸದಸ್ಯರಾದ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.