Home Mangalorean News Kannada News ಉದ್ಯೋಗದ ಬದಲು ನಿರುದ್ಯೋಗ ಸ್ರಷ್ಠಿ;ಯುವಜನರ ಬದುಕನ್ನು ನಾಶಗೊಳಿಸಿದ ಮೋದಿ ಸರಕಾರ  -ಸಂತೋಷ್ ಬಜಾಲ್ 

ಉದ್ಯೋಗದ ಬದಲು ನಿರುದ್ಯೋಗ ಸ್ರಷ್ಠಿ;ಯುವಜನರ ಬದುಕನ್ನು ನಾಶಗೊಳಿಸಿದ ಮೋದಿ ಸರಕಾರ  -ಸಂತೋಷ್ ಬಜಾಲ್ 

Spread the love

ಉದ್ಯೋಗದ ಬದಲು ನಿರುದ್ಯೋಗ ಸ್ರಷ್ಠಿ;ಯುವಜನರ ಬದುಕನ್ನು ನಾಶಗೊಳಿಸಿದ ಮೋದಿ ಸರಕಾರ  -ಸಂತೋಷ್ ಬಜಾಲ್ 

ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸ್ರಷ್ಠಿಸುವುದಾಗಿ ಯುವಜನರಿಗೆ ಭರವಸೆ ನೀಡಿ,ಅಧಿಕಾರಕ್ಕೇರಿದ ಬಳಿಕ ಮೇಕ್ ಇನ್ ಇಂಡಿಯಾ ಘೋಷಣೆ ಮೊಳಗಿಸಿ,ಜಗತ್ತಿನ 60 ಕ್ಕೂ ಮಿಕ್ಕಿದ ದೇಶಗಳಿಗೆ ಪ್ರದಕ್ಷಿಣೆ ಹಾಕಿ ಶೋಕಿ ಜೀವನವನ್ನು ನಡೆಸಿದ ನರೇಂದ್ರ ಮೋದಿಯವರು, ಕಳೆದ 5 ವರ್ಷಗಳಲ್ಲಿ10 ಕೋಟಿ ಉದ್ಯೋಗ ಸ್ರಷ್ಠಿಸಬೇಕಾಗಿತ್ತು.ಆದರೆ ಕೇವಲ 10 ಲಕ್ಷದಷ್ಟು ಮಾತ್ರ ಉದ್ಯೋಗ ಸ್ರಷ್ಠಿಸಿ ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಿದೆ.ಭವಿಷ್ಯದ ಜೀವನದ ಬಗ್ಗೆ ಕಂಗಾಲಾಗಿರುವ ದೇಶದ ಯುವಜನತೆ ಒಕ್ಕೊರಲಿನಿಂದ ಮೋದಿ ಸರಕಾರವನ್ನು ಕೇಳುತ್ತಿದೆ,ನನ್ನ ಉದ್ಯೋಗ ಎಲ್ಲಿದೆ…? ಎಂದು.ಆದರೆ ಮೋದಿ ಸರಕಾರವು ಮಾತ್ರ ಯುವಜನರಲ್ಲಿ ಕೋಮು ಉನ್ಮಾದವನ್ನು,ಹುಸಿ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸಿ,ಯುವಜನರ ಬದುಕನ್ನೇ ನಾಶ ಮಾಡಲು ಹೊರಟಿದೆ ಎಂದು CPIM ದ.ಕ.ಜಿಲ್ಲಾ ಸಮಿತಿ ಸದಸ್ಯರೂ,ಜಿಲ್ಲಾ ಯುವಜನ ನಾಯಕರಾದ ಸಂತೋಷ್ ಕುಮಾರ್ ಬಜಾಲ್ ರವರು ಆತಂಕ ವ್ಯಕ್ತಪಡಿಸಿದರು.

ಅವರು ಬಜಾಲ್ ಪಕ್ಕಲಡ್ಕದಲ್ಲಿ ಜರುಗಿದ CPIM ಪಕ್ಷದ ಕಾರ್ಯಕರ್ತರ,ಹಿತೈಷಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ,ಈ ಮಾತುಗಳನ್ನು ಹೇಳಿದರು.

ಕಳೆದ 5 ವರ್ಷಗಳ ಅವಧಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಸಂಧರ್ಭದಲ್ಲಿ ಕೋಟಿಗಟ್ಟಲೆ ಯುವಜನರು ಅರ್ಜಿ ಹಾಕಿರುವುದು ದೇಶದ ನಿರುದ್ಯೋಗ ಸಮಸ್ಯೆಯ ಕರಾಳತೆ ಕಣ್ಣಿಗೆ ರಾಚುವಂತಿದ್ದರೂ,ಕೇಂದ್ರ ಸಚಿವರಾದ ಅರುಣ್ ಜೇಟ್ಲೀಯವರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಂಬುದು ಇಲ್ಲವೇ ಇಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರು ಪಕೋಡಾ ಮಾರಿ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಯುವಜನತೆಯನ್ನು ಅವಮಾನ ಮಾಡಿದ್ದಾರೆ. ಇಂತಹ ಯುವಜನ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯಬೇಕೆಂದು* ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು CPIM ಹಿರಿಯ ಸದಸ್ಯರಾದ ಅಶೋಕ್ ಸಾಲ್ಯಾನ್ ರವರು ವಹಿಸಿದ್ದರು.ವೇದಿಕೆಯಲ್ಲಿ CPIM ಮುಖಂಡರಾದ ಸುರೇಶ್ ಬಜಾಲ್,ದೀಪಕ್ ಬಜಾಲ್,ನಾಗರಾಜ್ ಬಜಾಲ್,ವರಪ್ರಸಾದ್ ಬಜಾಲ್ ರವರು ಉಪಸ್ಥಿತರಿದ್ದರು‌.


Spread the love

Exit mobile version