Home Mangalorean News Kannada News ‘ಉಪಚುನಾವಣೆ ಮುಗಿದ ಮೇಲೆ ಬಂಡೆ ಛಿದ್ರವಾಗುತ್ತೆ; ಹುಲಿಯಾ ಕಾಡಿಗೆ ಹೋಗುತ್ತೆ’ – ನಳೀನ್ ಕುಮಾರ್ ಕಟೀಲ್

‘ಉಪಚುನಾವಣೆ ಮುಗಿದ ಮೇಲೆ ಬಂಡೆ ಛಿದ್ರವಾಗುತ್ತೆ; ಹುಲಿಯಾ ಕಾಡಿಗೆ ಹೋಗುತ್ತೆ’ – ನಳೀನ್ ಕುಮಾರ್ ಕಟೀಲ್

Spread the love

‘ಉಪಚುನಾವಣೆ ಮುಗಿದ ಮೇಲೆ ಬಂಡೆ ಛಿದ್ರವಾಗುತ್ತೆ; ಹುಲಿಯಾ ಕಾಡಿಗೆ ಹೋಗುತ್ತೆ’ – ನಳೀನ್ ಕುಮಾರ್ ಕಟೀಲ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ಇಬ್ಬರು ಲೀಡರ್, ಶಿರಾದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದು ಒಬ್ಬರು. ಆರ್ ಆರ್ ನಗರದಲ್ಲಿ ತನ್ನ ಅಭ್ಯರ್ಥಿ ಗೆಲ್ಲಬೇಕು ಎಂದು ಮತ್ತೊಬ್ಬರು ಹರಸಾಹರಸ ಪಡುತ್ತಿದ್ದಾರೆ, ಆದರೆ ಈ ಉಪ ಚುನಾವಣೆ ಮುಗಿದ ಮೇಲೆ ಬಂಡೆ ಛಿದ್ರವಾಗತ್ತೆ. ಹುಲಿಯಾ ಕಾಡಿಗೆ ಹೋಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬಗ್ಗೆ ಕಟೀಲ್ ವ್ಯಂಗ್ಯ ಮಾಡಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ್ ಸ್ವಾಮಿ ಬಿಜೆಪಿ ಸೇರಿಕೊಂಡರು. ಕಾರ್ಯಕ್ರಮದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣಾ ಅಖಾಡ‌ ಬಿಸಿಯಾಗಿದ್ದು ಕಾಂಗ್ರೆಸ್, ಜೆಡಿಎಸ್ ನಲ್ಲಿ ತಳಮಳ ಶುರುವಾಗಿದೆ. ಮುಂದಿನ ದಿನಗಳಲ್ಲಿ
ಕಾಂಗ್ರೆಸ್, ಜೆಡಿಎಸ್​ ಪಕ್ಷಗಳ ಘಟಾನುಘಟಿ ನಾಯಕರು ಬಿಜೆಪಿ ಸೇರುತ್ತಾರೆ ಹಲವು ಕಾಂಗ್ರೆಸ್, ಜೆಡಿಎಸ್ ನಾಯಕರು ನಮ್ಮ‌ ಸಂಪರ್ಕದಲ್ಲಿದ್ದಾರೆ ಎಂದು ಕಟೀಲ್ ಹೊಸ ಬಾಂಬ್ ಹಾಕಿದ್ದಾರೆ.

ಮುಂದುವರಿದು ಮಾತನಾಡಿದ ಕಟೀಲ್ ಸಿದ್ದರಾಮಯ್ಯ ಸರ್ಕಾರ ಪೂರ್ಣ ಬಹುಮತ ಇದ್ದಾಗಲೂ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಟಿಪ್ಪು ಜಯಂತಿ ಮೂಲಕ ಸಮಾಜ ಒಡೆಯುವ ಮತ್ತು ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕೆಲಸ ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ದೇವೇಗೌಡರ ಕುಟುಂಬಕ್ಕೆ ಸಾಧ್ಯವಾಗುವಷ್ಟು ತೊಂದರೆ ಕೊಟ್ಟರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.

ಮುಂದುವರೆದ ಅವರು, ಕಾಂಗ್ರೆಸ್​ ಕತೆ ಈ ರೀತಿಯದ್ದಾದರೆ, ಜೆಡಿಎಸ್ ಕತೆ ಮತ್ತೊಂದು ರೀತಿ. ಅಧಿಕಾರ ಇದ್ದಾಗ ಒಂದು, ಇಲ್ಲದಿದ್ದಾ ಇನ್ನೊಂದು. ಅಪ್ಪ, ಮಗ ಒಂದೊಂದು ರೀತಿ ಅಧಿಕಾರ ಬೇಕಾದಾಗ ಪ್ರೇಮ ವಿವಾಹ ಆಗ್ತಾರೆ. ಆಮೇಲೆ ಬೈದಾಡಿಕೊಳ್ತಾರೆ. ಅಪ್ಪ ಒಂದು ಪಕ್ಷದ ಪರ ಮಾತಾಡ್ತಾರೆ. ಮಗ ಒಂದು ಪಕ್ಷದ ಪರ ಮಾತಾಡ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಬಗ್ಗೆ ವ್ಯಂಗ್ಯ ಮಾಡಿದರು.


Spread the love

Exit mobile version