ಉಪನ್ಯಾಸಕಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಪಣಂಬೂರು ಎಸ್ಐ ಉಮೇಶ್ ಕುಮಾರ್

Spread the love

ಉಪನ್ಯಾಸಕಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಪಣಂಬೂರು ಎಸ್ಐ ಉಮೇಶ್ ಕುಮಾರ್

ಮಂಗಳೂರು: ಅಸಾಹಯಕ ಉಪನ್ಯಾಸಕಿ ಯೋರ್ವರಿಗೆ ಸಹಾಯ ಮಾಡಿ ಪಣಂಬೂರು ಎಸ್ಐ ಉಮೇಶ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ.

ವೃತ್ತಿಯಲ್ಲಿ ಉಪನ್ಯಾಸಕಿ ಯಾಗಿದ್ದ ವಿಜಯಲಕ್ಷ್ಮಿ 59 ವಯಸ್ಸಿನ ವೃದ್ಧ ಮಹಿಳೆ ಉತ್ತರಭಾರತದಲ್ಲಿ ಯಾವುದೋ ಒಂದು ಶಾಲೆಯಲ್ಲಿ ಉಪನ್ಯಾಸಕಿಯಾಗಿ ಇದ್ದವರನ್ನು ಕೋರೋಣ ಕಾಯಿಲೆಯ ಕಾರಣದಿಂದಾಗಿ ಅಲ್ಲಿದ್ದ ನೌಕರರನ್ನು ತಮ್ಮ ತಮ್ಮ ಊರಿಗೆ ಕಳಿಸಿದ ಪರಿಣಾಮ ತಮ್ಮ ಊರಾದ ಚಿಕ್ಕಮಂಗಳೂರಿನಲ್ಲಿ ಯಾರು ಇಲ್ಲದ ಕಾರಣ ದೇವರ ಮೊರೆ ಹೋಗಿ ಧರ್ಮಸ್ಥಳಕ್ಕೆ ಬಂದು ಎರಡು ದಿನ ಇದ್ದರು.

ಅಲ್ಲಿಂದ ಮಂಗಳೂರಿಗೆ ಬಂದು ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ಸ್ಟಾಂಡಿನಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದು ನನಗೆ ಕೆಲಸ ಬೇಕೆಂದು ಕೇಳಿ ದಾಗ ಅವರು ಬೈಕಂಪಾಡಿಗೆ ಹೋಗಲು ತಿಳಿಸಿದಂತೆ ಬಸ್ಸಿನಲ್ಲಿ ಬೈಕಂಪಾಡಿಗೆ ಬಂದು ಬೈಕಂಪಾಡಿಯಲ್ಲಿ ಹಲವಾರು ಕಾರ್ಖಾನೆಗಳಿಗೆ ಕೆಲಸ ಕೇಳಿದಾಗ ಯಾರು ಕೆಲಸ ಕೊಡದಿದ್ದಾಗ ಅಸಹಾಯಕತೆಯಿಂದ ಸ್ಥಳೀಯರನ್ನು ಸಂಪರ್ಕಿಸಿದಾಗ ಸ್ಥಳೀಯರು ಪೋಲೀಸ್ ಕಂಟ್ರೋಲ್ ರೂಮಿಗೆ ತಿಳಿಸಿದರು.

ಕಂಟ್ರೋಲ್ ರೂಂ ನಿಂದ ಬಂದ ಮಾಹಿತಿಯಂತೆ ಉಮೇಶ್ ಕುಮಾರ್ ಅವರು ಮತ್ತು ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಧಾವಿಸಿ ವಿಚಾರಿಸಿದಾಗ ನನಗೆ ಯಾರೂ ಕೆಲಸ ಕೊಡುವುದಿಲ್ಲ ನನ್ನನ್ನು ಧರ್ಮಸ್ಥಳ ಧರ್ಮಸ್ಥಳಕ್ಕೆ ಕಳುಹಿಸಿ ಕೊಡಿ ಎಂದು ಬೇಡಿಕೊಂಡಾಗ ಪಿಎಸ್ಐ ಅವರು ತಮ್ಮ ಇಲಾಖಾ ಜೀಪಿನಲ್ಲಿ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡಿಗೆ ಕರೆದುಕೊಂಡು ಹೋಗಿ ಬಿಟ್ಟಾಗ ನನಗೆ ಬಸ್ಸಿಗೆ ಹಣವಿಲ್ಲ ಅಂತ ಹೇಳಿ ಹೇಳಿದ್ದಾರೆ ಪಿಎಸ್ಐ ಅವರು ಸ್ವತಹ ನಗದು ಕೊಟ್ಟು ಕಳುಹಿಸಿ ಕೊಟ್ಟರು.


Spread the love