Home Mangalorean News Kannada News ಉಪ್ಪಳದಲ್ಲಿ ಜೀಪು -ಲಾರಿ ನಡುವೆ ಭೀಕರ ಅಫಘಾತ : 5 ಸಾವು

ಉಪ್ಪಳದಲ್ಲಿ ಜೀಪು -ಲಾರಿ ನಡುವೆ ಭೀಕರ ಅಫಘಾತ : 5 ಸಾವು

Spread the love

ಉಪ್ಪಳದಲ್ಲಿ ಜೀಪು -ಲಾರಿ ನಡುವೆ ಭೀಕರ ಅಫಘಾತ : 5 ಸಾವು

ಮಂಗಳೂರು: ಉಪ್ಪಳದಲ್ಲಿ ಜೀಪು ಮತ್ತು ಲಾರಿ ನಡುವೆ ನಡೆದ ಭೀಕರ ಅಫಘಾತದಲ್ಲಿ 5 ಮಂದಿ ಸಾವನಪ್ಪಿದ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.


ಮೃತರನ್ನು ಕೆ ಸಿ ರೋಡ್ ಅಜ್ಜಿನಡ್ಕ ನಿವಾಸಿಗಳಾದ ಬೀಫಾತಿಮ್ಮ (65), ಅಸ್ಮಾ(30), ನಸೀಮಾ(38), ಮುಸ್ತಾಕ್(41) ಇಮ್ತಿಯಾಝ್(35) ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಇತರ 8 ಮಂದಿ ಗಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀಪಿನಲ್ಲಿದ್ದವರು ಪಾಲಕ್ಕಾಡಿನಲ್ಲಿ ಗೃಹ ಪ್ರವೇಶ ಕಾರ್ಯಕ್ರಮವೊಂದಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ಅಪಫಾತ ಸಂಭವಿಸಿದೆ. ಇವರಿದ್ದ ಜೀಪಿಗೆ ಕಾಸರಗೋಡು ಕಡೆ ತೆರಳುತ್ತಿದ್ದ ಲಾರಿ ನಯಬಝಾರ್‌ನಲ್ಲಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಲಾರಿ ಟಯರ್ ಸಿಡಿದದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.


Spread the love

Exit mobile version