ಉರ್ವ ತಾತ್ಕಾಲಿಕ ಮಾರುಕಟ್ಟೆಯ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಲೋಬೊ

Spread the love

ಉರ್ವ ತಾತ್ಕಾಲಿಕ ಮಾರುಕಟ್ಟೆಯ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಲೋಬೊ
ಉರ್ವ ತಾತ್ಕಾಲಿಕ ಮಾರುಕಟ್ಟೆಯ ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಸ್ಪಂದಿಸಿ ಅಲ್ಲಿನ ಮಾರಾಟಗಾರರಿಗೆ ನಮ್ಮ ದೈನಂದಿನ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಶಾಸಕ  ಜೆ. ಆರ್. ಲೋಬೊ ರವರು ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉರ್ವ ಮಾರ್ಕೆಟ್ ನೂತನ ಕಟ್ಟಡಕ್ಕೆ ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದೆ. ಸುಮಾರು ರೂ. 12 ಕೋಟಿ ಅನುದಾನದಲ್ಲಿ ಈ ಮಾರುಕಟ್ಟೆಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು.

ಅಲ್ಲಿನ ಮಾರುಕಟ್ಟೆಯ ಮಾರಾಟಗಾರರಿಗೆ ಅಲ್ಲಿಯೇ ಪಕ್ಕದ ಸರಕಾರಿ ಜಾಗದಲ್ಲಿ ಜಾಗ ಒದಗಿಸಲಾಗಿದೆ. ಮೇಲ್ಚಾವಣಿಯನ್ನು ನಿರ್ಮಿಸಿ, ಮಾರಾಟಗಾರರಿಗೆ ಕುಳಿತುಕೊಂಡು ಮಾರುವುದಕ್ಕೆ ಒಳ್ಳೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತೀ ಅಂಗಡಿಗಳಿಗೆ ವಿದ್ಯುತ್ ಸಂಬಂಧಿತ ವಿಷಯದಲ್ಲಿ ಕೊಂಚ ಸಮಸ್ಯೆಯಿದ್ದು, ಶಾಸಕರು ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತುರ್ತು ಭೇಟಿ ನೀಡಿ ನಮಸ್ಯೆಗೆ ಪರಿಹಾರ ಸೂಚಿಸಿದರು.

ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷರಾದ ಶ್ರೀ ಸುರೇಶ್ ಬಲ್ಲಾಳ್, ಆಯುಕ್ತ ಶ್ರೀಕಾಂತ್ ರಾವ್, ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಸದಸ್ಯರುಗಳಾದ ರಾಧಾಕೃಷ್ಣ, ಲತಾ ಸಾಲ್ಯಾನ್, ಮೆಸ್ಕಾಂ ಅಧಿಕಾರಿಗಳಾದ ಸುಬ್ರಹ್ಮಣ್ಯ, ಚಂದ್ರಶೇಖರ್, ಪಾಲಿಕೆಯ ಅಧಿಕಾರಿಗಳಾದ ಯಶವಂತ ಕಾಮತ್, ಗುರುರಾಜ್ ಮರಳಹಳ್ಳಿ, ಹಾಗೂ ಪ್ರಮುಖರಾದ ಟಿ.ಕೆ. ಸುಧೀರ್, ಶಶಿರಾಜ್ ಅಂಬಟ್ , ಕಮಲಾಕ್ಷ ಸಾಲ್ಯಾನ್, ಸ್ಟಾನಿ ಆಳ್ವಾರಿಸ್, ಚೇತನ್ ಕುಮಾರ್, ಡೆನ್ಜಿಲ್ ಡಿ.ಸೋಜ, ಹರ್ಬರ್ಟ್ ಡಿ.ಸೋಜ, ವರುಣ್ ರಾಜ್ ಅಂಬಟ್, ಉದಯ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.


Spread the love