ಉಳಾಯಿಬೆಟ್ಟು ರಸ್ತೆಯ ಕಾಂಕ್ರಿಟೀಕರಣ : ರಸ್ತೆ ಸಂಚಾರ ಬದಲಾವಣೆ

Spread the love

ಉಳಾಯಿಬೆಟ್ಟು ರಸ್ತೆಯ ಕಾಂಕ್ರಿಟೀಕರಣ : ರಸ್ತೆ ಸಂಚಾರ ಬದಲಾವಣೆ

ಮ0ಗಳೂರು: ಮಂಗಳೂರು ತಾಲೂಕು ಪರಾರಿ ಉಳಾಯಿಬೆಟ್ಟು ಮಲ್ಲೂರು ಜಿಲ್ಲಾ ಮುಖ್ಯರಸ್ತೆಯ ಕಾಂಕ್ರೀಕರಣ ಕಾಮಗಾರಿಯನ್ನು ಮಾಡಲು ಉದ್ದೇಶಿಸಿದ್ದು, ಪರಾರಿ ಉಳಾಯಿಬೆಟ್ಟು ರಸ್ತೆಯ ಕಿ.ಮೀ. 0.83 ರಿಂದ ಕಿ.ಮೀ. 1.32 ರವರೆಗೆ ಮತ್ತು ಪರಾರಿ ಉಳಾಯಿಬೆಟ್ಟು ಮಲ್ಲೂರು ರಸ್ತೆಯ 2.65 ಕಿ.ಮೀ ರಿಂದ 4.00 ಕಿ.ಮೀ ಮತ್ತು 4.40 ಕಿ.ಮೀ ರಿಂದ 5.00 ಕಿ.ಮೀ. ವರೆಗೆ ಜಿಲ್ಲಾ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ದಿನಾಂಕ 21-11-2016 ರಿಂದ 3 ತಿಂಗಳ ಅವಧಿಯ ವರೆಗೆ ಈ ರಸ್ತೆಯಲ್ಲಿ ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿ,ಅಧಿಸೂಚನೆ ಹೊರಡಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್,ಲೋಕೋಪಯೋಗಿ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ಮಂಗಳೂರು ಅವರು ಕೋರಿಕೊಂಡಿರುತ್ತಾರೆ.

ಪರಾರಿ-ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯನ್ನು ಕಾಂಕ್ರೀಟೀಕರಣ ಕಾಮಗಾರಿ ಮಾಡಲು ಕಾಮಗಾರಿ ಕಾಂಕ್ರೀಟೀಕರಣ ನಡೆಯುವ ಸಮಯದಿಂದ, ಕಾಂಕ್ರೀಟೀಕರಣ ಮುಕ್ತಾಯದ ತನಕ ಸಾರ್ವಜನಿಕ ಹಿತದೃಷ್ಠಿಯಿಂದ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಬೇಕಾದ ಅವಶ್ಯಕ ಇರುವುದು ದಿನಾಂಕ 15-12-2016 ರಿಂದ ದಿನಾಂಕ 15-02-2017 ರವರೆಗೆ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ, ನಗರ ಪೊಲೀಸ್ ಆಯುಕ್ತರು ಈ ಕೆಳಕಂಡಂತೆ ಆದೇಶಿಸಿರುತ್ತಾರೆ.

ಕಾಮಗಾರಿ-1:-ಪರಾರಿ-ಉಳಾಯಿಬೆಟ್ಟು ರಸ್ತೆಯ 0.83 ಕಿ.ಮೀ. ರಿಂದ 1.32 ಕಿ.ಮೀ. ರವರೆಗೆ ಕಾಂಕ್ರೀಟೀಕರಣ ಪ್ರಥಮವಾಗಿ ಈ ಕಾಮಗಾರಿಯನ್ನು ಮೊದಲು ಕೈಗೆತ್ತಿಕೊಂಡು ಕಾಂಕ್ರೀಟೀಕರಣವನ್ನು ಪೂರ್ಣಗೊಳಿಸುವುದು. ಈ ಕಾಮಗಾರಿಯ ಅವಧಿಯಲ್ಲಿ ಪರಾರಿ-ಉಳಾಯಿಬೆಟ್ಟು ರಸ್ತೆಯಲ್ಲಿ 0.83 ಕಿ.ಮೀ. ರಿಂದ 1.32 ಕಿ.ಮೀ. ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಮಗಾರಿಯ ಅವಧಿಯಲ್ಲಿ ಪರಾರಿ-ಉಳಾಯಿಬೆಟ್ಟು ರಸ್ತೆಯ 0.83 ಕಿ.ಮೀ. ರಿಂದ 1.32 ಕಿ.ಮೀ. ವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವುದರಿಂದ ಉಳಾಯಿಬೆಟ್ಟು, ಕಾಂತನಬೆಟ್ಟು, ದರಿಬಾಗಿಲು, ಆಚಾರಿಬೆಟ್ಟು, ಪೆರ್ಮಂಕಿ, ಸಾಲೆ, ಬದ್ರಿಯಾ ನಗರ, ಮಲ್ಲೂರು ಗ್ರಾಮಗಳಿಗೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ವಾಮಂಜೂರು ಕಡೆಯಿಂದ ಹೋಗುವವರು ಪರಾರಿ ಎಂಬಲ್ಲಿ ಬಲಕ್ಕೆ, ಗುರುಪುರ ಕಡೆಯಿಂದ ಹೋಗುವವರು ಎಡಕ್ಕೆ ತಿರುಗಿ ಕೆತ್ತಿಕಲ್-ತಿರುವೈಲು-ತಾರಿಗುಡ್ಡೆ-ಕೋಣಿಮಾರು ಮೂಲಕ ಉಳಾಯಿಬೆಟ್ಟು ರಸ್ತೆಯನ್ನು ಪೆರ್ಮಂಕಿ ಎಂಬಲ್ಲಿ ಸಂಧಿಸಿ ಮುಂದಕ್ಕೆ ಸಂಚರಿಸುವುದು.ರಾ.ಹೆ 169 ರಿಂದ ವಾಮಂಜೂರು ಚರ್ಚ್‍ನ ಬಲ ಬದಿ ಅಥವಾ ಒರಿಯಂಟಲ್ ಬ್ಯಾಂಕ್‍ನ ಎಡಬದಿಯ ರಸ್ತೆಯ ಮುಖಾಂತರ ಸಂಚರಿಸಿ ಕೆಲ್‍ರಾಯ್ ರಸ್ತೆಗೆ ಸಂಧಿಸಿ ಮುಂದಕ್ಕೆ ಪರಾರಿ-ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯನ್ನು ಪೆರ್ಮಂಕಿ ಎಂಬಲ್ಲಿ ಸಂಧಿಸಿ ಮುಂದಕ್ಕೆ ಸಂಚರಿಸುವುದು.ರಾ.ಹೆ 169 ರಿಂದ ಬೈತುರ್ಲಿ ಜಂಕ್ಷನ್ ನಿಂದ ನೀರುಮಾರ್ಗ-ಉಳಬೈಲು-ಬಿತ್ತು ಪಾದೆ-ಪಡು-ಬೊಂಡಂತಿಲ ಮಾರ್ಗವಾಗಿ ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯನ್ನು ಮುರಾರ್ಜಿದೇಸಾಯಿ ವಸತಿ ಶಾಲೆಯ ಬಳಿ ಸಂಧಿಸಿ ಮುಂದಕ್ಕೆ ಸಂಚರಿಸಬೇಕು.

ಕಾಮಗಾರಿ – 2: ಉಳಾಯಿಬೆಟ್ಟು-ಮಲ್ಲೂರು ರಸ್ತೆಯ. 2.65 ಕಿ.ಮೀ ರಿಂದ 4.00 ಕಿ.ಮೀ. ಮತ್ತು 4.00 ಕಿ.ಮೀ. ಹಾಗೂ 4.40 ಕಿ.ಮೀ. ರಿಂದ 5.00 ಕಿ.ಮೀ. ರವರೆಗೆ ಕಾಂಕ್ರೀಟೀಕರಣ ನಡೆಯುವ ಅವಧಿಯಲ್ಲಿ ಉಳಾಯಿಬೆಟ್ಟು-ಮಲ್ಲೂರು ರಸ್ತೆಯಲ್ಲಿ 2.65 ಕಿ.ಮೀ. ರಿಂದ 5.00 ಕಿ.ಮೀ.ರವರೆಗೆ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದನೇ ಕಾಮಗಾರಿ ಪೂರ್ಣಗೊಂಡ ಬಳಿಕ ಸದ್ರಿ ರಸ್ತೆಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ತೆರವುಗೊಳಿಸಿದ ನಂತರ 2 ನೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದು. ಕಾಮಗಾರಿಯ ಅವಧಿಯಲ್ಲಿ ರಾ.ಹೆ. 169 ರಿಂದ ಬೈತುರ್ಲಿ ಜಂಕ್ಷನ್ ನಿಂದ ನೀರುಮಾರ್ಗ ಮೂಲಕವಾಗಿ ಬಿತ್ತುಪಾದೆ, ಬೊಂಡಂತಿಲ ಮಾರ್ಗವಾಗಿ ಸಂಚರಿಸಿ ಮುರಾರ್ಜಿದೇಸಾಯಿ ವಸತಿ ಶಾಲೆಯ ಬಳಿ ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯನ್ನು ಸಂಧಿಸಿ ಮಲ್ಲೂರಿಗೆ ಸಂಚರಿಸುವುದು. ರಾ.ಹೆ. 169 ರಿಂದ ವಾಮಂಜೂರು ಚರ್ಚ್‍ನ ಬಲ ಬದಿ ಅಥವಾ ಒರಿಯಂಟಲ್ ಬ್ಯಾಂಕ್‍ನ ಎಡಬದಿಯ ರಸ್ತೆಯ ಮುಖಾಂತರ ಸಂಚರಿಸಿ ಕೆಲ್‍ರಾಯಿ ರಸ್ತೆಗೆ ಸಂಧಿಸಿ ನೀರುಮಾರ್ಗ-ಉಳಬೈಲು-ಬಿತ್ತುಪಾದೆ-ಪಡು-ಬೊಂಡಂತಿಲ ಮೂಲಕ ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯನ್ನು ಮುರಾರ್ಜಿದೇಸಾಯಿ ವಸತಿ ಶಾಲೆಯ ಬಳಿ ಸಂಧಿಸಿ ಮಲ್ಲೂರಿಗೆ ಸಂಚರಿಸುವುದು. ಉಳಾಯಿಬೆಟ್ಟು ಮೂಲಕ ಮಲ್ಲೂರಿಗೆ ಹೋಗುವವರು ರಾ.ಹೆ. 169 ನ್ನು ಪರಾರಿ ಎಂಬಲ್ಲಿ ಸಂಧಿಸಿ ಎಡಕ್ಕೆ ಕೆತ್ತಿಕಲ್-ತಿರುವೈಲು-ತಾರಿಗುಡ್ಡೆ-ಕೆಲ್‍ರಾಯ್-ನೀರುಮಾರ್ಗ-ಬಿತ್ತುಪಾದೆ-ಬೊಂಡಂತಿಲ ಮೂಲಕ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಸಂಧಿಸಿ ಮಲ್ಲೂರಿಗೆ ಸಂಚರಿಸುವುದು. ಈ ತಾತ್ಕಾಲಿಕ ಅಧಿಸೂಚನೆಯು ದಿನಾಂಕ 15-12-2016 ರಿಂದ ದಿನಾಂಕ 15-02-2017 ರವರೆಗೆ ಊರ್ಜಿತದಲ್ಲಿರುತ್ತದೆ. ಮೇಲಿನ ಈ ನಿರ್ಬಂಧನೆಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ನಗರ ಪೊಲೀಸು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love