Home Mangalorean News Kannada News ಉಳ್ಳಾಲ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದ ಮೀನುಗಾರರ ಮನೆಯನ್ನು ರಕ್ಷಣೆ ಮಾಡುವಂತಹ ಅನಿವಾರ್ಯತೆ – ಕೋಟ ಶ್ರೀನಿವಾಸ...

ಉಳ್ಳಾಲ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದ ಮೀನುಗಾರರ ಮನೆಯನ್ನು ರಕ್ಷಣೆ ಮಾಡುವಂತಹ ಅನಿವಾರ್ಯತೆ – ಕೋಟ ಶ್ರೀನಿವಾಸ ಪೂಜಾರಿ

Spread the love

ಉಳ್ಳಾಲ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದ ಮೀನುಗಾರರ ಮನೆಯನ್ನು ರಕ್ಷಣೆ ಮಾಡುವಂತಹ ಅನಿವಾರ್ಯತೆ – ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಉಳ್ಳಾಲ ಭಾಗದ ಉಚ್ಚಿಲ ಸೋಮೇಶ್ವರದಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದ್ದು ಸಾರ್ವಜನಿಕರ ಮತ್ತು ಮೀನುಗಾರರ ದೂರಿನ ಹಿನ್ನೆಲೆಯಲ್ಲಿ ತುರ್ತಾಗಿ ಕಲ್ಲು ಹಾಕಬೇಕೆಂಬ ಒತ್ತಾಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಯೊಂದಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಬೇಟಿ ನೀಡಿ ಪರಿಶೀಲಿಸಿದರು.

ಉಳ್ಳಾಲ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದ್ದು ಸಾರ್ವಜನಿಕರ ಮತ್ತು ಮೀನುಗಾರರ ಮನೆಯನ್ನು ರಕ್ಷಣೆ ಮಾಡುವಂತಹ ಅನಿವಾರ್ಯತೆ ಇರುವುದರಿಂದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾನ್ಯ ಮುಖ್ಯ ಮಂತ್ರಿ ಜೊತೆ ಮಾತನಾಡಿದ್ದೇನೆ. ತುರ್ತಾಗಿ ಕಲ್ಲುಗಳನ್ನು ಜೋಡಿಸಲು ಬೇಕಾದಂತಹ ಅನುಮತಿಯನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ, ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳನ್ನು ಕರೆದು ಯಾವುದೇ ಮೀನುಗಾರರಿಗೆ ತೊಂದರೆಯಾಗದಂತೆ ಕಲ್ಲನ್ನು ಜೋಡಿಸಬೇಕೆಂದು ಸೂಚನೆಯನ್ನು ಕೊಡಲಾಗಿದೆ. ಒಟ್ಟಿನಲ್ಲಿ ಉಳ್ಳಾಲದಿಂದ ಪ್ರಾರಂಭವಾಗಿ ಕಾರವಾರದವರೆಗಿನ 320ಕಿ.ಮೀ ಕಡಲ ತಡಿಯಲ್ಲಿ ಕಡಲಿನ ಪ್ರಕ್ಷುದ್ಧತೆ ಜಾಸ್ತಿ ಇರುವುದರಿಂದ ಅತ್ಯಂತ ಹಾನಿಗೀಡಾದ ಪ್ರದೇಶಕ್ಕೆ ಕಲ್ಲು ತರಿಸಿ ತಡೆಗೋಡೆ ನಿರ್ಮಿಸಬೇಕೆಂದು ಯೋಚನೆ ಮಾಡಿದ್ದೇವೆ, ತುರ್ತಾಗಿ ಕಲ್ಲು ಜೋಡಿಸುವ ಕೆಲಸ ಇವತ್ತಿನಿಂದಲೇ ಪ್ರಾರಂಭವಾಗಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.

ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕಾರ್ಯದರ್ಶಿ ಸತೀಶ್ ಕುಂಪಲ, ಬಿ.ಜೆ.ಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು , ಮಂಗಳೂರು ವಿಧಾನ ಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ರೈಲ್ವೇ ಸಲಹಾ ಸಮಿತಿಯ ಮಾಜಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ತಾಲೂಕು ಪಂಚಾಯತ್ ಸದಸ್ಯರಾದ ರವಿಶಂಕರ್ ಸೋಮೇಶ್ವರ, ನವೀನ್ ಪಾದಲ್ಪಾಡಿ, ಸೋಮೇಶ್ವರ ಪುರಸಭಾ ಅಧ್ಯಕ್ಷ ರಾಜೇಶ್ ಉಚ್ಚಿಲ್, ಸದಸ್ಯರಾದ ಸಚಿನ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಉಪಾಧ್ಯಕ್ಷ ಯಶವಂತ್ ಅಮೀನ್, ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಮೋರೆ, ಪ್ರಮುಖರಾದ ಸಂಜೀವಶೆಟ್ಟಿ ಅಂಬ್ಲಮೊಗರು, ದೇವದಾಸ್ ಕೊಲ್ಯ, ಪ್ರಶಾಂತ್ ಕೊಲ್ಯ, ಪುರುಷೋತ್ತಮ್ ಕಲ್ಲಾಪು, ಆನಂದ್ ಶೆಟ್ಟಿ ಭಟ್ನಗರ, ರಾಜೇಶ್ ಮಡಿವಾಳ, ರಜನೀಶ್ ನಾಯಕ್,ಸೋಮೇಶ್ವರ ಪುರಸಭಾ ಆಯುಕ್ತ ವಾಣಿ ಆಳ್ವ ಉಪಸ್ಥಿತರಿದ್ದರು.


Spread the love

Exit mobile version