ಉಳ್ಳಾಲ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Spread the love

ಉಳ್ಳಾಲ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾವ್ಯಾಪ್ತಿಯ ತಲಪಾಡಿಯ ಅತಿಥಿ ಬಾರ್ ಬಳಿ ಅಕ್ರಮವಾಗಿ ಮಾದಕವಸ್ತು MDMAನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪಡೀಲ್ ತಲಪಾಡಿ ನಿವಾಸ ಕಿರಣ್ ಡಿಸೋಜಾ (25) ಎಂದು ಗುರುತಿಸಲಾಗಿದೆ.

ಆರೋಪಿಯಿಂದ ನಿಷೇದಿತ ಮಾದಕ ವಸ್ತು ಸುಮಾರು 10 ಗ್ರಾಂ ತೂಕದMDMA (ಅಂದಾಜು ಮೌಲ್ಯ 30,000/-)ಮಾದಕ ವಸ್ತುವನ್ನು, ಸ್ಕೂಟರ್, ಮೊಬೈಲ್ ಹಾಗೂ ಇದರ ಒಟ್ಟು ಮೌಲ್ಯ 65,500/- ಸೊತ್ತುಗಳನ್ನು ಸ್ವಾಧಿನಪಡಿಸಿಕೊಂಡಿರುತ್ತಾರೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣದಾಖಲಾಗಿರುತ್ತದೆ.

ಈ ಕಾರ್ಯಚರಣೆಯನ್ನು ಅನುಪಮ್ ಅಗರವಾಲ್, ಐ.ಪಿ.ಎಸ್. ರವರ ಮಾರ್ಗದರ್ಶನದಂತೆ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ& ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ಉಪವಿಭಾಗದ ಎ.ಸಿ.ಪಿ. ಶ್ರೀಮತಿ ಧನ್ಯಎನ್ ನಾಯಕರವರ ನೇತೃತ್ವದಲ್ಲಿ ಉಳ್ಳಾಲಪೊಲೀಸ್ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ ಹೆಚ್ ಎನ್, ಶೀತಲ್ ಅಲಗೂರು, ಪಿಎಸೈ, ಸಂತೋಷ್ ಕುಮಾರ್ ಡಿ, ಪಿಎಸೈ ಹಾಗೂ “Anti Drug Team” ನ ಸಿಬ್ಬಂದಿಯವರಾದ ಸಾಜು ನಾಯರ್, ಮಹೇಶ್, ಶಿವರಾಜ್, ಅಕ್ಬರ್ ಮತ್ತು ತಿರುಮಲೇಶ್ರವರುಗಳು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments