ಉಸ್ತಾದ್ ರಫೀಕ್ ಖಾನ್‍ರವರ 50ನೆಯ ಜನ್ಮದಿನಾಚರಣೆ
ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನರವರನ್ನು ಅವರ 50ನೆಯ ಜನ್ಮದಿನಾಚರಣೆ ಸಂಭ್ರಮದಲ್ಲಿ ಅವರ ಶಿಷ್ಯ ವೃಂದದವರು ಸನ್ಮಾನಿಸಿದರು.
ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಸಿಬಿಇಯು ಸಭಾಭವನದಲ್ಲಿ ನಡೆದ ಈ ಸಮಾರಂಭದಲ್ಲಿ ರಫೀಕ್ ಖಾನ್‍ರವರ ಶಿಷ್ಯಂದಿರ ಸಿತಾರ್ ವಾದನವನ್ನೊಳಗೊಂಡ ಫ್ಯೂಶನ್ ಸಂಗೀತವಲ್ಲದೆ ಪ್ರಖ್ಯಾತ ಗಾಯಕರಾದ ಪಂ‡ ಜಯತೀರ್ಥ ಮೇವುಂಡಿಯವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮವೂ ನಡೆಯಿತು.
ಮಾಂಡ್ ಸೊಭಾಣ್‍ನ ಗುರಿಕಾರರಾದ ಶ್ರೀ ಎರಿಕ್ ಓಝೂರಿಯೊ, ಖ್ಯಾತ ವೈದ್ಯರಾದ ಡಾ‡ ಮೋಹನ್ ಪೈ, ಹಿರಿಯ ಕಲಾ ಸಾಧಕಿ ಶ್ರೀಮತಿ ವಸಂತಿ ಆರ್. ನಾಯಕ್, ಮಂಗಳೂರು ಆಕಾಶವಾಣಿಯ ಶ್ರೀಮತಿ ಮಾಲತಿ ಭಟ್ ಹಾಗೂ ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನರೇಂದ್ರ ಎಲ್ ನಾಯಕ್‍ರವರು ಉಸ್ತಾದ್ ರಫೀಕ್ ಖಾನ್‍ರವರೊಂದಿಗೆ ಇರುವ ದೀರ್ಘಕಾಲೀನ ಒಡನಾಟದ ಅನಿಸಿಕೆಯನ್ನು ಹಂಚಿಕೊಂಡರು.
ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಉಷಾಪ್ರಭಾ ನಾಯಕ್‍ರವರು ಮಾರ್ಗದರ್ಶನದಲ್ಲಿ ನಡೆದ ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಉಸ್ತಾದ್ ರಪೀಕ್ ಖಾನ್‍ರವರ ಹಿತೈಷಿಗಳು ಪಾಲ್ಗೊಂಡರು. ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಧೃತಿ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.