Home Mangalorean News Kannada News ಉಸ್ತುವಾರಿ ಸಚಿವೆ ಜಯಮಾಲಾರಿಂದ 7.5 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

ಉಸ್ತುವಾರಿ ಸಚಿವೆ ಜಯಮಾಲಾರಿಂದ 7.5 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

Spread the love

ಉಸ್ತುವಾರಿ ಸಚಿವೆ ಜಯಮಾಲಾರಿಂದ 7.5 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ 3 ನೇ ಹಂತದಲ್ಲಿ ಬಿಡುಡೆಯಾದ ಅನುದಾನದಲ್ಲಿ 7.5 ಕೋಟಿ ವೆಚ್ದದಲ್ಲಿ ಪೂರ್ಣಗೊಂಡ 13 ವಿವಿಧ ಕಾಮಗಾರಿಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಗುರುವಾರ ಉದ್ಘಾಟಿಸಿದರು.

ಕುಕ್ಕುಂಜೆ ವಾರ್ಡಿನ ಸಂತೋಷ್ ನಗರ ಗರಡಿ ರಸ್ತೆ ಕಾಂಕ್ರೀಟಿಕರಣ ಮತ್ತು ಚರಂಡಿ ನಿರ್ಮಾಣ ರೂ.70 ಲಕ್ಷದ ಕಾಮಗಾರಿ, ಗೋಪಾಲಪುರ ವಾರ್ಡಿನ 4 ನೇ ಅಡ್ಡರಸ್ತೆಯಿಂದ 1 ನೇ ಅಡ್ಡರಸ್ತೆಗೆ ಸಂಪರ್ಕ ರಸ್ತೆ ನಿರ್ಮಾಣ ರೂ.50 ಲಕ್ಷದ ಕಾಮಗಾರಿ, . ನಿಟ್ಟೂರು ವಾರ್ಡಿನ ಹನುಮಂತನಗರ 1, 2 ನೇ ಮುಖ್ಯ ರಸ್ತೆ ಹಾಗೂ ಅಡ್ಡರಸ್ತೆ, ರಾಮಕೃಷ್ಣ ನಗರದ 2 ನೇ ಅಡ್ಡ ರಸ್ತೆ ಚರಂಡಿ ನಿರ್ಮಿಸಿ, ಕಾಂಕ್ರಿಟೀಕರಣ ರೂ.50 ಲಕ್ಷದ ಕಾಮಗಾರಿ, . ಕೊಡಂಕೂರು ಆಭರಣ ಮೋಟಾರ್ಸ್ನಿಂದ ಮೂಡುಬೆಟ್ಟು ಮಧ್ವ ನಗರದ ವರೆಗೆ ರಸ್ತೆ ಅಗಲೀಕರಣಗೊಳಿಸಿ ಮರು ಡಾಂಬರೀಕರಣ ಮಾಡುವುದು ರೂ.50 ಲಕ್ಷದ ಕಾಮಗಾರಿ, ಕೊಡವೂರು ವಾರ್ಡಿನ ಲಕ್ಷ್ಮೀ ನಗರ ಗರ್ಡೆ ಎಸ್.ಟಿ ಕಾಲನಿ 6 ನೇ ಮುಖ್ಯ ರಸ್ತೆ ಹಾಗೂ ಅಡ್ಡರಸ್ತೆಯಲ್ಲಿ ಚರಂಡಿ ನಿರ್ಮಿಸಿ ಕಾಂಕ್ರಿಟೀಕರಣ ರೂ.50 ಲಕ್ಷದ ಕಾಮಗಾರಿ, ಕೊಡವೂರು ಕೊಪ್ಪಲ ತೋಟದಿಂದ ಕೊಡವೂರು ಮುಖ್ಯ ರಸ್ತೆಯವರೆಗೆ ( ತೋಂದು ಬೆಟ್ಟು ರಸ್ತೆ, 4 ಮೀ ಅಗಲ, 700 ಮೀ.ಉದ್ದಕ್ಕೆ) ಆಯ್ದ ಭಾಗ ಚರಂಡಿ ನಿರ್ಮಿಸಿ ಕಾಂಕ್ರಿಟೀಕರಣಗೊಳಿಸುವುದು ರೂ.75 ಲಕ್ಷದ ಕಾಮಗಾರಿ, . ವಡ ಭಾಂಡೇಶ್ವರ ವಾರ್ಡಿನ ಮಂಜುನಾಥೇಶ್ವರ ಭಜನಾ ಮಂದಿರದಿಂದ ತೊಟ್ಟಂ ಪೋಟ್ಟಳಿವೆ ತನಕ ರಸ್ತೆ ಕಾಂಕ್ರಿಟೀಕರಣ ರೂ.50 ಲಕ್ಷದ ಕಾಮಗಾರಿ, . ಕಲ್ಮಾಡಿ ವಾರ್ಡಿನ ಕಲ್ಮಾಡಿ ಮುಖ್ಯರಸ್ತೆಯಿಂದ ಬಿಲ್ಲುಗುಡ್ಡೆ ನಾಗಬನ ರಸ್ತೆ ಅಭಿವೃದ್ಧಿ ರೂ.50 ಲಕ್ಷದ ಕಾಮಗಾರಿ, ಅಜ್ಜರಕಾಡು ಕಾಡಬೆಟ್ಟು ಎಸ್.ಸಿ ಕಾಲನಿಯಲ್ಲಿ ರಸ್ತೆ ಬದಿ ಚರಂಡಿ ನಿರ್ಮಿಸಿ ಕಾಂಕ್ರಿಟೀಕರಣ ರೂ.60.21 ಲಕ್ಷದ ಕಾಮಗಾರಿ, . ಇಂದಿರಾ ನಗರ ವಾರ್ಡಿನ ಮಸೀದಿಯ ಎದುರಿನ ರಸ್ತೆ ಕಾಂಕ್ರಿಟೀಕರಣ. ಕಸ್ತೂರ್ ಬಾ ನಗರ ವಾರ್ಡಿನ ಎಂ.ಜಿ.ಎಂ. – ಡಯಾನಾ ರಸ್ತೆ ಅಗಲೀಕರಣಗೊಳಿಸಿ ಮರು ಡಾಂಬರೀಕರಣ ರೂ.50 ಲಕ್ಷದ ಕಾಮಗಾರಿ, ಇಂದ್ರಾಳಿ ವಾರ್ಡಿನ ಮಂಜುಶ್ರೀ ನಗರ ಕೊರಗ ಕಾಲನಿಯಲ್ಲಿ ಮಳೆನೀರು ಚರಂಡಿ ನಿರ್ಮಿಸಿ ರಸ್ತೆ ಕಾಂಕ್ರಿಟೀಕರಣಗೊಳಿಸುವುದು ರೂ.50 ಲಕ್ಷದ ಕಾಮಗಾರಿ, . ಸರಳೇಬಟ್ಟು ವಾರ್ಡಿನ ನೆಹರೂ ನಗರ ಹೋಗುವ ಮುಖ್ಯ ರಸ್ತೆಯ ಬಲಬದಿ ಮಳೆ ನೀರು ಹರಿಯುವ ತೋಡಿಗೆ ತಡೆಗೋಡೆ ರಚನೆ (ಎಸ್,ಟಿ. ಕಾಲೋನಿ) ರೂ.70 ಲಕ್ಷದ ಕಾಮಗಾರಿ ಗಳನ್ನು ಸಚಿವರು ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು , ಉಡುಪಿ ಜಿಲ್ಲೆ ಸಾಂಸ್ಕøತಿಕ ಮತ್ತು ಸಾರಸ್ವತ ಲೋಕಕ್ಕೆ ಪ್ರಸಿದ್ದವಾಗಿದೆ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ರಸ್ತೆ ಸೌಕರ್ಯಗಳಿಗೆ, ಇಲ್ಲಿನ ಜನತೆ ಪ್ರಜ್ಞಾವಂತರಾಗಿದ್ದು ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಜನಪ್ರತಿನಿಧಿಗಳನ್ನು ನಿರಂತರ ಪ್ರಶ್ನಿಸುವ ಕಾರಣ , ಜನಪ್ರತಿನಿಗಳು ಸರಕಾರದಿಂದ ಅನುದಾನವನ್ನು ತಂದು ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ, ಸಾರ್ವಜನಿಕರ ಈ ಗುಣ ನಾಡಿನ ಎಲ್ಲಡೆ ಕಂಡು ಬಂದಲ್ಲಿ ಅಭಿವೃಧ್ದಿಯಲ್ಲಿ ಎಲ್ಲೆಡೆ ನಿರೀಕ್ಷಿತ ಬದಲಾವಣೆ ಸಾಧ್ಯವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ಪೌರಾಯುಕ್ತ ಆನಂದ ಕಲ್ಲೋಳಿಕರ್ , ನಗರಸಭೆಯ ಇಂಜಿನಿಯರ್ ಗಣೇಶ್, ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version