ಎಂಡೋಸಲ್ಪಾನ್ ಸಂತ್ರಸ್ತರಿಗೆ ಹೆಚ್ಚಿನ ಚಿಕಿತ್ಸೆಗೆ ಗುರುತಿನ ಚೀಟಿ

Spread the love

ಎಂಡೋಸಲ್ಪಾನ್ ಸಂತ್ರಸ್ತರಿಗೆ ಹೆಚ್ಚಿನ ಚಿಕಿತ್ಸೆಗೆ ಗುರುತಿನ ಚೀಟಿ

ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಶುಲ್ಕ ರಹಿತ ಚಿಕಿತ್ಸೆಯನ್ನು ನೀಡುವ ಕುರಿತು ಈಗಾಗಲೇ 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ (MOU) ಮಾಡಿಕೊಂಡಿದ್ದು, ಈ ಆಸ್ಪತ್ರೆಗಳಲ್ಲಿ ಎಂಡೋಸಲ್ಪಾನ್ ಸಂತ್ರಸ್ತರಿಗೆ ಹೆಚ್ಚಿನ ಚಿಕಿತ್ಸೆಗೆ ನೇರವಾಗಿ ಗುರುತಿನ ಚೀಟಿಯ ಮುಖಾಂತರ ಒಳರೋಗಿ/ಹೊರರೋಗಿಯಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಒಡಂಬಡಿಕೆಗೊಳಪಟ್ಟ ಆಸ್ಪತ್ರೆಗಳ ಹೆಸರು :ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಆಸ್ಪತ್ರೆ, ಕಂಕನಾಡಿ, ಮಂಗಳೂರು, ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು, ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಎಂಡ್ ರಿಸರ್ಚ್‍ಸೆಂಟರ್, ಮುಕ್ಕ, ಮಂಗಳೂರು, ಒಮೇಗಾ ಆಸ್ಪತ್ರೆ, ಮಂಗಳೂರು, ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ, ಎಸ್.ಡಿ.ಎಂ. ಆಸ್ಪತ್ರೆ, ಉಜಿರೆ, ಪುತ್ತೂರು ಸಿಟಿ ಹಾಸ್ಪಿಟಲ್, ತುಂಗಾ ಇನ್ಸಿಟ್ಯೂಟ್ ಆಫ್ ಸೈಕ್ಯಾಟ್ರಿ ಎಂಡ್ ಕೌನ್ಸಿಲಿಂಗ್,ಮಂಗಳೂರು.


Spread the love