ಎಂಪಿಎಲ್ ಆಟಗಾರರ ಹರಾಜು :ಗರಿಷ್ಟ ಬೆಲೆ ಪಡೆದ ಋಷಭ್, ಭರತ್ ಕೋಟ, ಲಾಲ್‍ಸಚಿನ್, ಅಭಿಲಾಷ್
ಮಂಗಳೂರು: ಅಲ್ಲಿ ಕ್ಷಣ ಕ್ಷಣವೂ ಕುತೂಹಲವು ಹೊಸ ರಂಗನ್ನು ಪಡೆಯುತ್ತಿತ್ತು. ತಮ್ಮ ಕನಸಿನಂತೆ ತಮ್ಮ ಎಂ ಪಿ ಎಲ್ ತಂಡ ರೂಪುಗೊಳ್ಳಲೆಂದು ಬಹುದಿನಗಳಿಂದ ರೂಪಿಸಿದ ಯೋಜನೆಯನ್ನು ಜಾರಿಗೊಳಿಸಲು ಎಲ್ಲ 12 ತಂಡಗಳ ಮಾಲಕರು, ತರಬೇತುದಾರರ ಪ್ರಯತ್ನ ಮುಂದುವರಿದಿತ್ತು. ತಾವು ಗುರಿ ಇರಿಸಿದ್ದ ಆಟಗಾರ ತಮ್ಮ ಬಲೆಯೊಳಗೆ ಬಿದ್ದಾಗ ಸಂತಸ ಗರಿಗೆದರುತ್ತಿದ್ದರೆ, ಗುರಿಯಿಟ್ಟ ಆಟಗಾರ ಮತ್ತೊಂದು ತಂಡ ಪಾಲಾದಾಗ ನಿರಾಶೆಯ ಕಟ್ಟೆ ಒಡೆಯುತ್ತಿತ್ತು.
ಈ ಕ್ಷಣಗಳಿಗೆ ಸಾಕ್ಷಿಯಾದುದು ಮಂಗಳೂರಿನ ಫೋರಂ ಫಿಝಾ ಮಾಲಿನ ಒಳಾಂಗಣ. ಅಲ್ಲಿ ನಡೆದಿತ್ತು ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟದ ಆಟಗಾರರ ಹರಾಜು ಪ್ರಕ್ರಿಯೆ. ಈ ವರ್ಷದ ಮಾಚ್9 ತಿಂಗಳ ದಿನಾಂಕ 20ರಿಂದ ಎಪ್ರಿಲ್ 1ರವರಗೆ 13 ದಿನಗಳ ಕಾಲ ಬ್ರಾಂಡ್ ವಿಷನ್ ಈವೆಂಟ್ಸ್ ಮೇನೇಜ್‍ಮೆಂಟ್, ಮಂಗಳೂರು ಆಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್ ಕ್ರಿಕೆಟ್ ಅಕಾಡಮಿ ಸಂಸ್ಥೆಗಳು ನವಮಂಗಳೂರು ಬಂದರು ಪಣಂಬೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟದ ಆಟಗಾರರನ್ನು ಆರಿಸುವ ಸಲುವಾಗಿನ ಆಟಗಾರರ ಹರಾಜು ಪ್ರಕ್ರಿಯೆ ಅದು. ಅಪರಾಹ್ನ ಮೂರು ಗಂಟೆಗೆ ಆರಂಭವಾದ ಈ ಪ್ರಕ್ರಿಯೆಯು ರಾತ್ರಿ ಒಂಭತ್ತು ಗಂಟೆಯವರೆಗೂ ಮುಂದುವರಿದಿತ್ತು.
ಆರಂಭದಲ್ಲಿ ರಾಜ್ಯ ಆಟಗಾರರ ಪಟ್ಟಿಯಲ್ಲಿದ್ದ ಐಪಿಎಲ್, ಕೆಪಿಎಲ್- ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಆಟಗಾರರಲ್ಲಿ ಪ್ರತಿಯೊಂದು ತಂಡವು ರೂ.80000.00 ಬಜೆಟಿನಲ್ಲಿ ಇಬ್ಬರು ಆಟಗಾರರನ್ನು ಖರೀದಿಸುವುದು ಕಡ್ಡಾಯವಾಗಿತ್ತು. ಈ ಗುಂಪಿನಲ್ಲಿ ಧಿಕಾಂಕ್ಷು ನೇಗಿ ಅವರೋರ್ವರು ಮಾತ್ರ ಗರಿಷ್ಟ ಬೆಲೆಯಾದ ರೂ.50000.00 ಕ್ಕೆ ಮಾರಾಟವಾದರೆ, ಐಪಿಲ್ ಆಟಗಾರ ಸುಚಿತ್ ರವರು ರೂ.35000.00 ದ ಮೊತ್ತಕ್ಕೆ ಮಂಗಳೂರು ಯುನೈಟೆಡ್ ತಂಡದೊಳಗೆ ಸೇರಿಕೊಂಡರು. ಪವನ್ ಕೆ.ಬಿ. ರೂ.48000.00 ವನ್ನು ಪಡೆದು ಮ್ಯಾಸ್ಟ್ರೋ ಟೈಟಾನಿನ ಪಯಣಿಗರಾದರು.
ಮಹಮ್ಮದ್ ತಾಹ ಕ್ಲಾಸಿಕ್ ಬಂಟ್ವಾಳದ ಬುಟ್ಟಿಗೆ ಬಿದ್ದರೆ, ಅಖಿಲ್ ಬಿ ಯವರನ್ನು ಕಾರ್ಕಳ ಗ್ಲೇಡಿಯೇmರ್ಸ್ ತನ್ನ ಬಲೆಯೊಳಗೆ ಬಂಧಿಯಾಗಿಸಿತ್ತು. ಈ ಪಟ್ಟಿಯಲ್ಲಿದ್ದ ಇತg ಆಟಗಾರರಾದ ಅಬ್ರಾರ್, ಕುನೈನ್,ಅಭಿನವ್, ಡೆವಿಡ್, ಪವನ್ ಕೆ.ಬಿ.,ಕ್ರಾಂತಿಕುಮಾರ್, ದೇವದತ್, ದುಬೇ, ರವಿಕುಮಾರ್,ಸ್ಟಾಲಿನ್,ಕದಂ,ಮೋರೆ, ರಾಜು ಭಟ್ಕಳ್, ಶರತ್, ಪ್ರತ್ವಿರಾಜ್, ವಿಶ್ವನಾಥ್,ವೈಶಾಖ್, ನಿದೀಶ್, ಶಶಿಶೇಖರ್ ಮೊದಲಾದವರು ವಿವಿಧ ತಂಡಗಳ ಮೊದಲ ಪಂಕ್ತಿಯ ಆಸನಗಳನ್ನು ಅಲಂಕರಿಸಿದರು. ಕಳೆದ ಬಾರಿ ಎಂಪಿಎಲ್‍ನಲ್ಲಿ ಶತಕದ ಆಟದೊಂದಿಗೆ ಮಿಂಚಿದ ಸಾಧಿಕ್ ಕೀರ್ಮಾನಿಯವರಿಗೆ ಈ ಬಾರಿ ಯಾವೊಂದು ತಂಡವೂ ಮಣೆ ನೀಡಲಿಲ್ಲ.
ಪ್ರತಿ ತಂಡವು ಒಂದು ಲಕ್ಷ ಮೊತ್ತದಲ್ಲಿ ಎ ವಿಭಾಗದ 4 ಆಟಗಾರರನ್ನು ಖರೀದಿಸಬೇಕಾಗಿದ್ದು, ಗರಿಷ್ಟ ಮೊತ್ತ ರೂ.50000.00 ವನ್ನು ಪಡೆದ ಭರತ್ ಕೋಟ ಎಕೆ ಸ್ಪೋಟ್ರ್ಸ್ ಉಡುಪಿ, ಕಾರ್ತಿಕ್ ಯುನೈಟೆಡ್ ಉಲ್ಲಾಳ, ಲಾಲ್ ಸಚಿನ್ ಟೀಂ ಎಲಿಗೆಂಟ್, ಅಭಿಲಾಷ್ ಕಾರ್ಕಳ ಗ್ಲೇಡಿಯೇಟರ್ಸ್ ತಂಡದ ಪಾಲಾದರು.
ಪ್ರತಿ ತಂಡವು ರೂ.50000.00 ಬಜೆಟಿನಲ್ಲಿ ಬಿ ವಿಭಾಗದ ತಲಾ ನಾಲ್ಕು ಮಂದಿ ಆಟಗಾರರನ್ನು ಖರೀದಿಸಬೇಕಾಗಿದ್ದು, ಗರಿಷ್ಟ ಬೆಲೆ ರೂ.20000.00 ಕ್ಕೆ ಮಾರಾಟವಾದ ಆಟಗಾgರಾದ ಸಾಧಿಕ್ (ಮಂಗಳೂರು ಯುನೈಟೆಡ್ ), ಶ್ರೀಷ (ಟಿ4 ಸೂಪರ್ ಕಿಂಗ್), ರಾಹುಲ್ (ಎ.ಕೆ. ಉಡುಪಿ), ಸತ್ಯ ಸ್ವರೂಪ್ (ಯುನೈಟೆಡ್ ಉಲ್ಲಾಳ), ಇಬ್ರಾಹಿಂ ಆತ್ರಾಡಿ (ಮ್ಯಾಸ್ಟ್ರೋ), ಕಾಶಿನಾಥ್ (ಬಂಟ್ವಾಳ), ನಸ್ರುಲ್ಲಾ (ಅಲಿ ವಾರಿಯರ್ಸ್) ತಂಡಗಳ ತೆಕ್ಕೆಯಲ್ಲಿ ಸ್ಥಾನ ಪಡೆದರು.
ಸಿ ವಿಭಾಗದಲ್ಲಿ ಹರ್ಷ ಭಟ್, ಸಮರ್ಷ್ ಮತ್ತು ಅಪ್ಪಣ್ಣ ಅವರು ಮಾತ್ರ ಗರಿಷ್ಟ ಬೆಲೆ ರೂ.10000.00 ವನ್ನು ಪಡೆದು ವಿವಿಧ ತಂಡಗಳನ್ನು ಸೇರಿದರೆ ಉಳಿದ ಆಟಗಾರರು ಮೂಲಬೆಲೆಗೆ ಮಾರಾಟವಾದರು.
ಆರಂಭದಲ್ಲಿ ಜರಗಿದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಸಂಚಾಲಕ ಶ್ರೀ ಮನೋಹರ್ ಅಮೀನ್ ಸುತ್ತಿಗೆಯನ್ನು ಕುಟ್ಟುವ ಮೂಲಕ ಹರಾಜನ್ನು ಉದ್ಘಾಟಿಸಿದರು. ಈ ಬಾರಿ ಬಹಳಷ್ಟು ಮಂದಿ ಪ್ರಥಮ ದರ್ಜೆಯ ಆಟಗಾರರು ಎಂಪಿಎಲ್ ಕೂಟದಲ್ಲಿ ಭಾಗವಹಿಸುವದರಿಂದ ಇಲ್ಲಿನ ಆಟಗಾರರಿಗೆ ಅವರಿಂದ ಅನುಭವವನ್ನು ಪಡೆದು ಮೇಲ್ಮಟ್ಟದ ಕ್ರಿಕೆಟಿನತ್ತ ಸಾಗಲು ಅನುವಾಗುತ್ತದೆ ಎಂದರು.
ಅತಿಥಿಗಳಾಗಿ ಕುಶಾಲ್ ಕುಮಾರ್, ಅಲಿ ಅಶ್ಪಕ್ ತಾರಾ, ತುಷಾರ್, ದೀಪ್ತಿ, ಚಿರಾಗ್, ಮುಬಿನ್, ಯು.ಟಿ. ಇಫ್ತಿಕಾರ್, ಯಶ್‍ಪಾಲ್ ಸುವರ್ಣ, ಮಾರ್ಷಲ್ ನೊರೋನ್ನ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಕೂಟದ ರೂವಾರಿ ಮಹಮ್ಮದ್ ಸಿರಾಜುದ್ದೀನ್ ಸ್ವಾಗತಿಸಿದರು. ಇಮ್ತಿಯಾಝ್ ಹರಾಜನ್ನು ನಡೆಸಿಕೊಟ್ಟರು. ಕೋಟ ಶಿವನಾರಾಯಣ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು. ಸಫ್ದಾರ್ ಅಲಿ ಶಿರ್ವ, ಬಾಲಕೃಷ್ಣ ಪರ್ಕಳ, ಶಶಿಧರ್ ಕೋಡಿಕಲ್‍ರವರು ತೀರ್ಪುಗಾರರಾಗಿದ್ದರು.