ಎಂ.ಆರ್.ಪಿ.ಎಲ್ ಉದ್ಯೋಗ ನೇಮಕಾತಿಯಲ್ಲಿ ತುಳುನಾಡಿನ ಯುವಕರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ತೊಕ್ಕೊಟ್ಟು : ಎಂ.ಆರ್.ಪಿ.ಎಲ್ ಕಂಪೆನಿ ದೇಶವ್ಯಾಪಿಯಾಗಿ ನಡಸುತ್ತಿರುವ 233 ಹುದ್ದೆಗಳ ನೇಮಕಾತಿಯಲ್ಲಿ ಈ ಕಂಪೆನಿಗೆ ನೆಲಜಲವನ್ನು ಕೊಟ್ಟ ತುಳುನಾಡಿನ ಯುವಕರಿಗೆ ಶೇ80 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ತೊಕೊಟ್ಟು ಬಸ್ ನಿಲ್ಧಾಣದಲ್ಲಿ ಡಿವೈಎಫ್‍ಐ ವತಿಯಿಂದ ಯುವಜನರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಡಿವೈಎಫ್‍ಐ ಉಳ್ಳಾಲ ವಲಯದ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ , ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಡಿವೈಎಫ್‍ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ , ಕೋಟಕಾರ್ ಸರ್ಕಲ್ ಬೀಡಿ ಯೂನಿಯನ್ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿ , ಡಿವೈಎಫ್‍ಐ ಮುಖಂಡರಾದ ಜೀವನ್ ರಾಜ್ ಕುತ್ತಾರ್ , ಸಂತೋಷ್ ಶೆಟ್ಟಿ ಪಿಲಾರ್ , ರಝಾಕ್ ಮೊಂಟೆಪದವು , ಅಶ್ಫಾಕ್ ಅಳೇಕಲ, ಗ್ರಾಮ ಪಂಚಾಯತಿ ಸದಸ್ಯರಾದ ಅಶ್ರಫ್ ಹರೇಕಳ , ಕಾರ್ಮಿಕ ಮುಖಂಡರಾದ ಜಯಂತ್ ನಾಯ್ಕ್ , ಬಾಬು ಪಿಲಾರ್ , ಅರುಣ್ ಉಳ್ಳಾಲ್ , ಕಟ್ಟಡ ಕಾರ್ಮಿಕರ ಸಂಘದ ಜನಾರ್ದನ ಕುತ್ತಾರ್ , ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ನಾರಾಯಣ ತಲಪಾಡಿ ಪಾಲ್ಗೊಂಡಿದ್ದರು. ಡಿವೈಎಫ್‍ಐ ಕಾರ್ಯದರ್ಶಿ ಸುನಿಲ್ ತೇವುಲ ಸ್ವಾಗತಿಸಿದರೆ ಸಹ ಕಾರ್ಯದರ್ಶಿ ನಿತಿನ್ ಕುತ್ತಾರ್ ವಂದಿಸಿದರು.
thulunadinavare DKSHI hinde hoguvudu bittu intha kelasa madi idaralli rajakeeya jathi dharma barabaradu