ಎನ್.ಆರ್.ಇ.ಜಿ. ಆಧಾರ್ ಲಿಂಕ್ ಪೂರ್ಣಗೊಳಿಸಿ- ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಎನ್.ಆರ್.ಇ.ಜಿ. ಆಧಾರ್ ಲಿಂಕ್ ಪೂರ್ಣಗೊಳಿಸಿ- ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ : ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸುವ ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

lead-bank-meeting

ಅಕ್ಟೋಬರ್ ಮಾಹೆಯಿಂದ ಉದ್ಯೋಗ ಖಾತ್ರಿಯ ಯೋಜನೆಯ ಫಲಾನುಭವಿಗಳ ಮೊತ್ತವನ್ನು ನೇರವಾಗಿ ಬ್ಯಾಂಕ್ ಮೂಲಕ ಪಾವತಿಸಬೇಕಾಗಿರುವುದರಿಂದ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಆಧಾರ್ ಜೋಡಣೆಯಲ್ಲಿ ಅಕ್ಟೋಬರ್ ಮೊದಲನೇ ವಾರದ ವೇಳೆಗೆ 100 ಶೇಕಡಾ ಪೂರ್ಣಗೊಳಿಸುವಂತೆ ಸೂಚಿಸಿದ ಸಿಇಓ ಅವರು, ಫಲಾನುಭವಿಯು ಈಗಾಗಲೇ ಬೇರೆ ಬ್ಯಾಂಕ್‍ನಲ್ಲಿ ಆಧಾರ್ ಜೋಡಣೆ ಮಾಡಿದ್ದು, ಅದನ್ನು ಬೇರೆ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಇಚ್ಛಿಸಿದಲ್ಲಿ ಕೂಡಲೇ ವರ್ಗಾವಣೆ ಮಾಡಿಕೊಡುವಂತೆ ಎಲ್ಲಾ ಬಾಂಕ್ ಗಳಿಗೆ ಸೂಚಿಸದರು.
ಪ್ರತಿಯೊಬ ಫಲಾನುಭವಿ ಮಾತ್ರವಲ್ಲದೇ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವ ಅತನ ಕುಟುಂಬದ ಎಲ್ಲಾ ಸದಸ್ಯರೂ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಸುವಂತೆ ತಿಳಿಸಿದರು.

ಜಿಲ್ಲೆಯ ಹಲವು ಬ್ಯಾಂಕ್ ಗಳಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ 20000 ರೂ ಗಳ ನೆರವು ನೀಡುವ ಯೋಜನೆಯ ಕುರಿತು ಮಾಹಿತಿ ಇಲ್ಲ, ಎಲ್ಲಾ ಬ್ಯಾಂಕ್ ಗಳಿಗೂ ಈ ಕುರಿತ ಮಾಹಿತಿ ನೀಡುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸಿಇಓ ಸೂಚಿಸಿದರು.
ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮತ್ತು ಗೃಹಸಾಲ ನೀಡುವ ಪ್ರಮಾಣ ಅತ್ಯಂತ ಕಡಿಮೆ ಇದೆ ಎಲ್ಲಾ ಬ್ಯಾಂಕ್ ಗಳೂ ವಿದ್ಯಾಭ್ಯಾಸ ಮತ್ತು ಗೃಹ ಸಲವನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸುವಂತೆ ಸೂಚಿಸಿದ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ಬೋರ್ಜಿಯಾ, ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಸಾಲ ಮರುಪಾವತಿ ಉತ್ತಮವಾಗಿದೆ ಎಂದು ತಿಳಿಸಿದರು.

ಜೂನ್ ಅಂತ್ಯದ ವೇಳೆಗೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳು 1838.26 ಕೋಟಿ ಸಾಲ ನೀಡಿ, 26.20% ಗುರಿ ಸಾದಿಸಿವೆ, ಇದರಲ್ಲಿ 608.83 ಕೋಟಿ ಕೃಷಿ, 719.58 ಕೋಟಿ ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆ, 156.31 ಕೋಟಿ ಇತರೆ ಆದ್ಯತಾ ರಂಗಕ್ಕೇ ಸಾಲ ನೀಡಿದ್ದು, ಆದ್ಯತಾ ರಂಗಕ್ಕೆ ನಿಗಧಿಪಡಿಸಿದ್ದ ಗುರಿ 5637.74 ಕೋಟಿಗೆ ಪ್ರತಿಯಾಗಿ 1484.72 ಸಾಲ ನೀಡಿದ್ದು, ಆದ್ಯತೇತರ ರಂಗಕ್ಕೆ 353.54 ಕೋಟಿ ಸಾಲ ವಿತರಣೆ ಮಾಡಿದೆ ಎಂದು ಉಡುಪಿ ವಿಭಾಗೀಯ ಕ್ಷೇತ್ರ ಪ್ರಬಂಧಕ ಎಸ್.ಎಸ್ ಹೆಗ್ಡೆ ತಿಳಿಸಿದರು.

ದುರ್ಬಲ ವರ್ಗದ 1,79,390 ಜನರಿಗೆ 2,562.49 ಕೋಟಿ ಸಾಲ ನೀಡಿ, 27.74 % ಗುರಿ ಸಾದಿಸಿದೆ ಹಾಗೂ 1,20,395 ಮಹಿಳೆಯರಿಗೆ 2261.74 ಕೋಟಿ ಸಾಲ ನೀಡಿ 24.48% ಗುರಿ ಸಾಧಿಸಲಾಗಿದೆ.

ವಿದ್ಯಾಭ್ಯಾಸಕ್ಕಾಗಿ 15,561 ವಿದ್ಯಾರ್ಥಿಗಳಿಗೆ 411.45 ಕೋಟಿ, 22,219 ರೈತರು ಕಿಸಾನ್ ಕ್ರೆಡಿಟ್ ಕಾಡ್ ್ ಯೋಜನೆಯಡಿ 285.20 ಕೋಟಿ ಸಾಲ ಸೌಲಭ್ಯ ಪಡೆದಿದ್ದು, 22,267 ಸ್ವ ಸಹಾಯ ಸಂಘಗಳು 422.03 ಕೋಟಿ ಸಾಲ ಸೌಲಭ್ಯ ಪಡದಿವೆ, ಆಗಸ್ಟ್ ಅಂತ್ಯದವರೆಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ 2,07,120 ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆಯಡಿ 99,975 ಗ್ರಾಹಕರು, ಅಟಲ್ ಪಿಂಚಣಿ ಯೋಜನೆಯಡಿ 8215 ಜನರನ್ನು ನೊಂದಣಿ ಮಾಡಲಗಿದೆ ಎಂದು ಹೆಗ್ಡೆ ತಿಳಿಸಿದರು.

ನಬಾಡ್ ್ನ ಸಹಾಯಕ ಪ್ರಬಂಧಕ ಎಸ್.ರಮೇಶ್ , ರಿಸವ್ ್ ಬ್ಯಾಂಕ್ ನ ಪ್ರಬಂದಕ ಕೆ.ಗಣೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.


Spread the love