ಎನ್.ಎಸ್.ಯು.ಐ ರಾಷ್ಟ್ರೀಯ ಸಮಿತಿಯ ಮಾಹಿತಿ ಹಕ್ಕು ವಿಭಾಗ ಸಂಯೋಜಕರಾಗಿ ಆಶಿತ್ ಪಿರೇರಾ ನೇಮಕ

Spread the love

ಎನ್.ಎಸ್.ಯು.ಐ ರಾಷ್ಟ್ರೀಯ ಸಮಿತಿಯ ಮಾಹಿತಿ ಹಕ್ಕು ವಿಭಾಗ ಸಂಯೋಜಕರಾಗಿ ಆಶಿತ್ ಪಿರೇರಾ ನೇಮಕ

ಮಂಗಳೂರು: ಎನ್.ಎಸ್.ಯು.ಐ.ರಾಷ್ಟ್ರೀಯ ಸಮಿತಿಯ ಮಾಹಿತಿ ಹಕ್ಕು ವಿಭಾಗದ ಸಂಯೋಜಕರನ್ನಾಗಿ ಆಶಿತ್ ಜಿ.ಪಿರೇರಾ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

ಎ.ಐ.ಸಿ.ಸಿ.ಅಧ್ಯಕ್ಷರಾದ ರಾಹುಲ್ ಗಾಂಧಿಯವರ ಸೂಚನೆಯ ಮೇರೆಗೆ ಎನ್.ಎಸ್.ಯು.ಐ.ಮಾಹಿತಿ ಹಕ್ಕು ವಿಭಾಗವನ್ನು ರಚಿಸಲಾಗಿದ್ದು ಇಡೀ ದೇಶದಿಂದ ಒಟ್ಚು 32 ಮಂದಿಯನ್ನು ಈ ಸಮಿತಿಗೆ ನೇಮಕಗೊಳಿಸಲಾಗಿದ್ದು ಕರ್ನಾಟಕದಿಂದ ಆಶಿತ್ ಜಿ.ಪಿರೇರಾ ಅವರನ್ನು ಮಾತ್ರ ನೇಮಕಗೊಳಿಸಲಾಗಿದೆ.

ಆಶಿತ್ ಪಿರೇರಾ ಅವರು ದ.ಕ.ಜಿಲ್ಲೆಯ ಎನ್.ಎಸ್.ಯು.ಐ. ಅಧ್ಯಕ್ಷರಾಗಿ, ರಾಷ್ಟ್ರೀಯ ಎನ್.ಎಸ್.ಯು.ಐ. ಸಮಿತಿಯ ಸದಸ್ಯರಾಗಿ, ಗೋವಾ ರಾಜ್ಯ ಎನ್.ಎಸ್.ಯು.ಐ. ಉಸ್ತುವಾರಿಯಾಗಿ ಕಾರ್ಯವನ್ನು ನಿರ್ವಹಿಸಿರುತ್ತಾರೆ.


Spread the love