ಎನ್.ಸಿ.ಐ.ಬಿ ಅಧಿಕಾರಿಗಳೆಂದು ವಂಚಿಸುತ್ತಿದ್ದ ಇನ್ನಿಬ್ಬರ ಬಂಧನ

Spread the love

ಎನ್.ಸಿ.ಐ.ಬಿ ಅಧಿಕಾರಿಗಳೆಂದು ವಂಚಿಸುತ್ತಿದ್ದ ಇನ್ನಿಬ್ಬರ ಬಂಧನ

ಮಂಗಳೂರು: ಮಂಗಳೂರು ನಗರದ ಕದ್ರಿ (ಪಶ್ಚಿಮ) ಪೊಲೀಸ್ ಠಾಣೆ ಸ್ಯಾಮ್ ಪೀಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನೊಂದಿಗೆ ವ್ಯವರಿಸುತ್ತಿದ್ದ ಮತ್ತು NCIB ತನಿಖಾಧಿಕಾರಿಗಳೆಂದು ಪೋಸ್ ಕೊಟ್ಟು ಜನರಿಗೆ ವಂಚಿಸುತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರಿನ ನಾಗರಬಾವಿ ನಿವಾಸಿಗಳಾದ ನಾಗರಾಜ ಎನ್.ಎಸ್. (39), ರಾಘವೇಂದ್ರ (31) ಎಂದು ಗುರುತಿಸಲಾಗಿದೆ

ಆರೋಪಿತರಿಂದ ಎನ್‌ಸಿಐಬಿ ಬಾವುಟ, ಬೋರ್ಡ್, ಎಂಎಲ್‌ಸಿ ಪಾಸ್ ಇರುವ ಕಾರು, ಐಡಿ ಕಾರ್ಡ್‌ಗಳನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿ ದಂತೆ ಪ್ರಮುಖ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಂಎಲ್‌ಸಿ ಸಿ.ಆರ್.ಮನೋಹರ್ ಅವರ ವಿಧಾನಸೌಧ ವಾಹನ ಪಾಸ್‌ನ್ನು ಕೂಡ ಆರೋಪಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ರಾಘವೇಂದ್ರ ಸ್ವಾಮೀಜಿ, ಕಾಶಿಮಠ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ‘ಸಿಐಡಿ’ ತನಿಖಾಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 


Spread the love