ಎನ್ ಹೆಚ್169 ನಿಯತಕಾಲಿಕ ನವೀಕರಣಕ್ಕಾಗಿ ರೂ. 799.22 ಲಕ್ಷ ಮಂಜೂರು
ಮಂಗಳೂರು: ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್169 (ಹಿಂದಿನ ಎನ್ ಹೆಚ್ 13) ನಿಯತಕಾಲಿಕ ನವೀಕರಣಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ಒಟ್ಟು ರೂ. 799.22 ಲಕ್ಷಗಳಿಗೆ ಅನುಮೋದನೆ ನೀಡಿರುತ್ತಾರೆ ಹಾಗೂ ಸದರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 13 ಸೋಲಾಪುರ-ಮಂಗಳೂರು ವಿಭಾಗದ ಕಿ.ಮೀ.706.00 ರಿಂದ ಕಿ.ಮೀ. 710.830, ಕಿ.ಮೀ. 714.800 ರಿಂದ ಕಿ.ಮೀ. 731.290 ಮತ್ತು ಕಿ.ಮೀ. 736.630 ರಿಂದ ಕಿ.ಮೀ.743.90 ನಿಯತಕಾಲಿಕ ನವೀಕರಣಕ್ಕಾಗಿ (ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 169ರ ಶಿವಮೊಗ್ಗ ಮಂಗಳೂರು ವಿಭಾಗದ ಹೊಸ ಚೈನೇಜ್ ಕಿ.ಮೀ.175.30 ರಿಂದ 180.130 ಕಿ.ಮೀ., ಕಿ.ಮೀ. 187.70 ರಿಂದ 200.59 ಹಾಗೂ ಕಿ.ಮೀ.205.93 ರಿಂದ ಕಿ.ಮೀ. 213.20 ರವರೆಗಿನ) ಒಟ್ಟು ಮೊತ್ತ ರೂ. 799.22 ಲಕ್ಷಗಳಿಗೆ ಮಂಜೂರಾತಿ ನೀಡಲಾಗಿದೆ. ಮಂಜೂರಾತಿ ನೀಡಿದ ಕೇಂದ್ರ ಸರ್ಕಾರಕ್ಕೆ ಹಾಗೂ ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಿಗೆ ಸಂಸದರು ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.