ಎಪ್ರಿಲ್ 1-30 : ಪಡುತೋನ್ಸೆ ನಾಗರಿಕರಿಂದ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನ
ಉಡುಪಿ: ಕೆಮ್ಮಣ್ಣು ಸುತ್ತಮುತ್ತಲಿನ ಊರಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಗಾಂಜಾ, ಫೆವಿ ಬಾಂಡ್ ಮುಂತಾದ ಮಾದಕ ದ್ರವ್ಯಗಳ ವ್ಯಸನಕ್ಕೆ ಈಡಾಗುತ್ತೀರುವುದನ್ನು ಗಮನಿಸಿ ಅವರೆಲ್ಲರನ್ನು ಈ ದುಶ್ಚಟಗಳಿಂದ ಜಾಗೃತಿಗೊಳಿಸಿ ಅದರಿಂದ ದೂರೀಕರಿಸುವ ಉದ್ದೇಶದೊಂದಿಗೆ ಪಡುತೋನ್ಸೆ ಗ್ರಾಮದ ನಾಗರಿಕರು ಎಪ್ರಿಲ್ 1 ರಿಂದ 30 ರವರೆಗೆ ಮಾದಕ ದ್ರವ್ಯ ವ್ಯಸನದ ವಿರುದ್ದ ಅಭಿಯಾನ ಹಮ್ಮಿಕೊಂಡಿದ್ದಾರೆ.
ಈ ಅಭಿಯಾನದ ಮೂಲಕ ಮಾದಕ ದ್ರವ್ಯದಿಂದಾಗುವ ಕೆಡುಕುಗಳ ಬಗ್ಗೆ ಹಾಗೂ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಯುವಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಕಾನೂನು ಮಾಹಿತಿ, ಆರೋಗ್ಯ ಮಾಹಿತಿ, ಮನೆಮನೆ ಭೇಟಿ, ಪೋಷಕರೊಂದಿಗೆ ಮಾತುಕತೆ, ಸಂವಾದ ಕಾರ್ಯಕ್ರಮ, ಬೀದಿನಾಟಕ, ಮೊಹಲ್ಲಾ ಸಭೆ, ಭಿತ್ತಿಪತ್ರ ವಿತರಣೆ, ತಜ್ಞ ವೈದ್ಯರಿಂದ ಕೌನ್ಸಿಲಿಂಗ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಈ ಅಭಿಯಾನದ ಅಡಿಯಲ್ಲಿ ತೆಗೆದುಕೊಂಡಿದ್ದಾರೆ.
ತಾ.2/02/2018 ರ ಸೋಮವಾರ ಉರ್ದು ಶಾಲಾ ಮೈದಾನ ಹೂಡೆಯಲ್ಲಿ ಸಮಯ 4.45ಕ್ಕೆ ಸರಿಯಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ, ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿಭಂಡಾರಿ, ಡಾ. ಅಬ್ದುಲ್ ಸಮದ್ ಹೊನ್ನಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.