Home Mangalorean News Kannada News ಎಮ್‍ಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಉಡುಪಿಯಲ್ಲಿ ಚಾಲನೆ

ಎಮ್‍ಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಉಡುಪಿಯಲ್ಲಿ ಚಾಲನೆ

Spread the love

ಎಮ್‍ಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಉಡುಪಿಯಲ್ಲಿ ಚಾಲನೆ

ಉಡುಪಿ: ಮಂಗಳೂರು ಕೆಥೊಲಿಕ್ ಕ್ರೆಡೀಟ್ ಕೋ-ಅಪರೇಟಿವ್ ಬ್ಯಾಂಕ್ ಇದರ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆಯ ಉದ್ಘಾಟನೆ ಶನಿವಾರ ಉಡುಪಿ ಶೋಕಮಾತಾ ಚರ್ಚಿನ ಸಭಾಂಗಣದಲ್ಲಿ ಜರುಗಿತು.

ಮೊಬೈಲ್ ಬ್ಯಾಂಕಿಂಗ್ ಸೇವೆ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ವಹಿಸಿದ್ದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಉಡುಪಿ ವಲಯದ ಪ್ರಧಾನ ಧರ್ಮಗುರುಗಳಾದ ವಂ. ವಲೇರಿಯನ್ ಮೆಂಡೊನ್ಸಾ, ಉಡುಪಿ ಚೆಂಬರ್ ಆಫ್ ಕಾಮರ್ಸ್ ಇದರ ಅಧ್ಯಕ್ಷರಾದ ಕೃಷ್ಣರಾವ್ ಕೊಡಂಚ, ನ್ಯಾಯವಾದಿಗಳಾದ ಮಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು. ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಐಸಿವೈಎಮ್ ಅಧ್ಯಕ್ಷರಾದ ಡಿಯೋನ್ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆ ಇದರ ಅಧ್ಯಕ್ಷರಾದ ಜೆನೆಟ್ ಬಾರ್ಬೋಜಾ, ಬ್ಯಾಂಕಿನ ನಿರ್ಧೇಶಕರುಗಳಾದ ಐರಿನ್ ರೆಬೆಲ್ಲೊ, ಡಾ|ಫ್ರೀಡಾ ಫ್ಲಾವಿಯಾ ಡಿ’ಸೋಜಾ, ಜೆ.ಪಿ ರೊಡ್ರಿಗಸ್, ಡೇವಿಡ್ ಡಿಸೋಜಾ, ಹೆರಾಲ್ಡ್ ಮೊಂತೆರೋ, ಮಾರ್ಸೆಲ್ ಡಿಸೋಜಾ, ಬ್ಯಾಂಕಿನ ಮಹಾ ಪ್ರಬಂಧಕರಾದ ಸುನೀಲ್ ಮಿನೇಜಸ್ ಕೂಡ ಉಪಸ್ಥಿತರಿದ್ದರು.

ನಿರ್ದೇಶಕರಾದ ಎಲ್‍ರೊಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿ, ಉಪಾಧ್ಯಕ್ಷ ಜೆರಾಲ್ಡ್ ಜ್ಯೂಡ್ ಡಿ’ಸಿಲ್ವಾ ವಂದಿಸಿದರು. ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

ಮೊಬೈಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಗ್ರಾಹಕರಿಗೆ ಇ-ಸ್ಟ್ಯಾಂಪಿಂಗ್, ವಿದ್ಯಾ ಭವಿಷ್ಯ ಎಸ್ ಬಿ ಖಾತೆ ತೆರೆಯಲು, ಪಾನ್ ಕಾರ್ಡ್, ಹಿರಿಯ ನಾಗರಿಕರ ಗುರುತು ಚೀಟಿ ಸೇವೆಗಳನ್ನು ಪಡೆಯಲು ಅವಕಾಶವಿದೆ.

ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿದ್ಯಾ ಭವಿಷ್ಯ ಎಸ್ ಬಿ ಖಾತೆಯನ್ನು ತೆರೆಯಲು ಅವಕಾಶವಿದ್ದು, 1.5% ಹೆಚ್ಚು ಬಡ್ಡಿಯನ್ನು ಖಾತೆಯಲ್ಲಿ ಪಡೆಯಲು ಅವಕಾಶವಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.


Spread the love

Exit mobile version