ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭ – ಡಿಸಿ ಜಗದೀಶ್

Spread the love

ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭ – ಡಿಸಿ ಜಗದೀಶ್

ಉಡುಪಿ: ಜಿಲ್ಲೆಯಿಂದ ಮರಳನ್ನು ಹೊರಗೆ ಸಾಗಿಸಿದರೆ ಅಂಥವರ ಮೇಲೆ ಮೊಕದ್ದಮೆ ದಾಖಲಿಸಿ ಉದ್ದಿಮೆದಾರರ ಪರವಾನಗಿ ರದ್ದು ಮಾಡಲಾ ಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಮರಳು ಸಾಗಿಸುವ ಲಾರಿಗಳು ಜಿಪಿಎಸ್ ನಿಯಮ ಉಲ್ಲಂಘಿಸಿದರೆ ಮೊದಲ ಬಾರಿ ₹50,000, 2ನೇ ಬಾರಿಗೆ ₹ 1,00,000, ಮೂರನೇ ಬಾರಿ ನಿಯಮ ಉಲ್ಲಂಘಿಸಿದರೆ ಲಾರಿಯನ್ನು ವಶಪಡಿಸಿಕೊಂಡು ಪರವಾನಗಿದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದರು.

ಕ್ರಿಮಿನಲ್ ಪ್ರಕರಣಗಳು ಇರುವ 12 ಗುತ್ತಿಗೆದಾರರನ್ನು ಹೊರತುಪಡಿಸಿ 158 ಮಂದಿಗೆ ಮರಳು ದಿಬ್ಬಗಳ ತೆರವಿಗೆ ಅನುಮತಿ ನೀಡಲಾಗಿದೆ. 2 ದಿನಗಳಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭವಾಗಲಿದೆ. ಅವರು, 8 ಮರಳು ದಿಬ್ಬಗಳನ್ನು ಗುರುತಿಸಿ ಜಿಯೋಫೆನ್ಸಿಂಗ್ ನಡೆದಿದೆ. ಮೂರು ತಿಂಗಳ ಅವಧಿಗೆ ಮರಳು ತೆಗೆಯಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ. 3 ತಿಂಗಳ ಬಳಿಕ ಆ್ಯಪ್ ಮೂಲಕ ಮರಳು ವಿತರಣೆ ನಡೆಯುತ್ತದೆ. ಗುತ್ತಿಗೆದಾರರು ಕೂಡ ಆ್ಯಪ್ ಮೂಲಕ ಮರಳು ವಿತರಣೆಗೆ ಪರವಾನಗಿ ಪಡೆಯಬೇಕು ಎಂದರು.

ಮರಳನ್ನು ಖರೀದಿಸುವವರು ಅಗತ್ಯಕ್ಕಿಂತ ಹೆಚ್ಚು ಸಂಗ್ರಹ ಮಾಡುವಂತಿಲ್ಲ. ಹೆಚ್ಚು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುವುದು ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು. ಅಗತ್ಯವಿದ್ದವರಿಗೆ ಕಡಿಮೆದರದಲ್ಲಿ ಮರಳು ಸಿಗಬೇಕು ಎಂಬುದು ಜಿಲ್ಲಾಡಳಿತದ ಉದ್ದೇಶ ಎಂದರು.

ನಾನ್ ಸಿಆರ್ಜೆಡ್ ವ್ಯಾಪ್ತಿಯಲ್ಲಿ ಸಾಕಷ್ಟು ಮರಳು ಲಭ್ಯವಿದ್ದು, ಅಲ್ಲಿಯೂ ಸರ್ವೆ ನಡೆಸಿ ಮರಳು ತೆಗೆಯಲಾಗುವುದು. ನಾನ್ ಸಿಆರ್ಜೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ನಿಯಮಗಳು ಅಡ್ಡಿಯಾಗಿದ್ದು, ಸರಳೀಕರಣಕ್ಕೆ ಸರ್ಕಾರಕ್ಕೆ ಪತ್ರ ಬರೆಯ ಲಾಗುವುದು ಎಂದರು.

ಅಂದಾಜಿನ ಪ್ರಕಾರ ಜಿಲ್ಲೆಗೆ 2.5 ಲಕ್ಷ ಮೆಟ್ರಿಕ್ ಟನ್ ಜಿಲ್ಲೆಗೆ ಅವಶ್ಯಕತೆ ಇದೆ. ಸದ್ಯ ಜಿಲ್ಲೆಯಲ್ಲಿ 8 ಲಕ್ಷ ಮೆಟ್ರಿಕ್ ಟನ್ ಲಭ್ಯ ಇದೆ. ಬಜೆ ಜಲಾಶಯದಲ್ಲಿ ಹಾಗೂ ಚೆಕ್ಡ್ಯಾಂಗಳಲ್ಲಿ ಸಾಕಷ್ಟು ಪ್ರಮಾಣದ ಮರಳು ಲಭ್ಯವಿದ್ದು, ಸಾರ್ವಜನಿಕರಿಂದ ಬೇಡಿಕೆ ಬಂದರೆ ಅಲ್ಲೂ ತೆಗೆಯಲಾಗುವುದು ಎಂದರು.


Spread the love