ಎಸಿಪಿ ಗೀತಾ ಕುಲಕರ್ಣಿ ಸೇರಿದಂತೆ 9 ಮಂದಿ ಡಿವೈಎಸ್‌ಪಿ (ಸಿವಿಲ್) ವರ್ಗಾವಣೆ

Spread the love

ಎಸಿಪಿ ಗೀತಾ ಕುಲಕರ್ಣಿ ಸೇರಿದಂತೆ 9 ಮಂದಿ ಡಿವೈಎಸ್‌ಪಿ (ಸಿವಿಲ್) ವರ್ಗಾವಣೆ
 
ಮಂಗಳೂರು: ಪೊಲೀಸ್ ಸಿಬ್ಬಂದಿ ಮಂಡಳಿಯ ನಿರ್ಣಯದಂತೆ ಮತ್ತು ಲೋಕಸಭಾ ಚುನಾವಣೆ ಅಂಗವಾಗಿ ಮಂಗಳೂರು ನಗರ ಸಂಚಾರಿ ಉಪವಿಭಾಗದ ಎಸಿಪಿ ಗೀತಾ ಕುಲಕರ್ಣಿ ಸೇರಿದಂತೆ 9 ಮಂದಿ ಡಿವೈಎಸ್‌ಪಿ (ಸಿವಿಲ್) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಲಾಗಿದೆ.

ಮಂಗಳೂರು ನಗರ ಟ್ರಾಫಿಕ್ ಉಪವಿಭಾಗದ ಎಸಿಪಿ ಗೀತಾ ಕುಲಕರ್ಣಿ ಅವರಿಗೆ ಸಿಸಿಬಿ ಮಂಗಳೂರು ನಗರ, ಸಿಐಡಿಯ ನಜ್ಮಾ ಫಾರೂಕಿ ಅವರು ಮಂಗಳೂರು ನಗರ ಟ್ರಾಫಿಕ್ ಉಪವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಸಿಐಡಿಯಿಂದ ಕೋದಂಡರಾಮ ಟಿ ಅವರನ್ನು ಮಂಗಳೂರು ನಗರ ಸಿಸಿಬಿಗೆ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾ ಗಿದ್ದು, ಅವರನ್ನು ಸಿಐಡಿಯಲ್ಲಿಯೇ ಮುಂದುವರಿಸಲಾಗಿದೆ.

ವೈಟ್‌ಫೀಲ್ಡ್ ಉಪವಿಭಾಗದ ರೀನಾ ಸುವರ್ಣ.ಎನ್ ಅವರು ಬೆಂಗಳೂರು ಕೇಂದ್ರ ವಲಯ ಐಜಿಪಿ ಕಚೇರಿ, ಕೇಂದ್ರ ವಲಯ ಐಜಿಪಿ ಕಚೇರಿಯ ಕವಿತಾ ಎಂಸಿ ಅವರು ಬೆಂಗಳೂರು ವೈಟ್‌ಫಿಲ್ಡ್ ಉಪವಿಭಾಗ, ಕರ್ನಾಟಕ ಲೋಕಾಯುಕ್ತ ಎಸ್‌ಐಟಿಯ ಜಯಂತಿ ಪಿ ಅವರು ಸಂಚಾರ ಉತ್ತರ ಉಪವಿಭಾಗ ಬೆಂಗಳೂರು ನಗರ, ಬೆಂಗಳೂರು ಸಂಚಾರ ಉತ್ತರ ಉಪವಿಭಾಗದ ಪೃಥ್ವಿ.ಎಂ.ಜೆ ಅವರು ಸಿಐಡಿಗೆ, ಸಿಐಡಿಯ ಡಿವೈಎಸ್ಪಿ ಗಿರೀಶ್ ಎಸ್.ವಿ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪವಿಭಾಗಕ್ಕೆ, ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಯಾಗಿದ್ದ ಸತೀಶ್ .ಕೆ.ಎಂ ಅವರನ್ನು ಸಿಐಡಿಗೆ ಮತ್ತೆ ವರ್ಗಾಯಿಸಲಾಗಿದೆ.


Spread the love