ಎಸ್ಪಿ ಅಣ್ಣಾಮಲೈ ತಂಡದ ಸಮಯ ಪ್ರಜ್ಞೆ ; ದತ್ತಪೀಠದಲ್ಲಿ ಪೆಟ್ರೋಲ್‌ ಬಾಂಬ್‌ : 13 ಮಂದಿ ವಶಕ್ಕೆ

Spread the love

ಎಸ್ಪಿ ಅಣ್ಣಾಮಲೈ ತಂಡದ ಸಮಯ ಪ್ರಜ್ಞೆ ; ದತ್ತಪೀಠದಲ್ಲಿ ಪೆಟ್ರೋಲ್‌ ಬಾಂಬ್‌ : 13 ಮಂದಿ ವಶಕ್ಕೆ

ಚಿಕ್ಕಮಗಳೂರು: ದತ್ತಪೀಠದಲ್ಲಿ ಹನುಮಜಯಂತಿ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನು ವಶಕ್ಕೆ ಪಡೆದುಕೊಂಡು ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಅಣ್ಣಾಮಲೈ ಹೇಳಿದ್ದಾರೆ. ಸಾರಾಯಿ ಬಾಟಲ್ ನಲ್ಲಿ ಪೆಟ್ರೋಲ್ ಹಾಗೂ ಬಟ್ಟೆ ಸುತ್ತಿ ತಯಾರಿಸಿದ್ದ ಐದು ಪೆಟ್ರೋಲ್ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರು  ದತ್ತಪೀಠದಲ್ಲಿ ಅಹಿತಕರ ಘಟನೆ ನಡೆಯುತ್ತಿದ್ದಂತೆ ಒಂದು ಕೋಮಿನ ಯುವಕರು ಚಿಕ್ಕಮಗಳೂರು ನಗರದಾದ್ಯಂತ ಐದಾರು ಕಡೆ ಕಲ್ಲು ತೂರಾಟ ನಡೆಸಿ, ಹಲ್ಲೆ ಮಾಡಿದ್ರು. ಮುಂದಾಗೋ ಘಟನೆಯನ್ನು ಮನಗಂಡ ಜಿಲ್ಲಾ ಪೊಲೀಸರು ನಗರದ ಮಾರ್ಕೇಟ್ ರಸ್ತೆಯಲ್ಲಿ ಗುಂಪಾಗಿದ್ದವರ ಮೇಲೆ ಲಾಠಿಚಾರ್ಜ್ ನಡೆಸಿದ್ರು.

ಇದೇ ವೇಳೆ ಒಂದು ಯುವಕರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಆಗ, ಪೊಲೀಸರು ಅವರನ್ನು ಸುತ್ತುವರಿದು ಬಂಧಿಸಿದ್ದಾರೆ. ಆದ್ರೆ, ಬಂಧಿತರಿಂದ 5ಪೆಟ್ರೋಲ್ ಬಾಂಬ್ ವಶಪಡಿಸಿಕೊಂಡು ಪೊಲೀಸರೇ ಆತಂಕಕ್ಕೀಡಾಗಿದ್ದಾರೆ. ಸಾಲದಕ್ಕೆ ಅವರೆಲ್ಲಾ 15ರಿಂದ 20 ವರ್ಷ ವಯಸ್ಸಿನ ಒಳಗಿನವರು. ಬಂಧಿತರಿಂದ ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ 9 ಜನರನ್ನ ಬಂಧಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

 ಪೊಲೀಸರು ಬಂದೋಬಸ್ತ್ ಮಾಡಲು ತೆರಳಿದಾಗ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಸಾರಾಯಿ ಬಾಟಲ್‌ನಲ್ಲಿ ಪೆಟ್ರೋಲ್ ಹಾಗೂ ಬಟ್ಟೆ ಸುತ್ತಿ ಈ ಪೆಟ್ರೋಲ್ ಬಾಂಬ್ ತಯಾರಿಸಲಾಗಿದೆ. ಸುಮಾರು ಐದು ಪೆಟ್ರೋಲ್ ಬಾಂಬ್‌‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ತಡರಾತ್ರಿ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ಘಟನೆ ನಡೆದಿದೆ. 15 ರಿಂದ 18 ವಯಸ್ಸಿನ ಸಣ್ಣ ಹುಡುಗರು ಈ ಕೃತ್ಯವೆಸಗಿದ್ದಾರೆ. ಘಟನೆ ಸಂಬಂಧ 13 ಮಂದಿ ವಶಕ್ಕೆ ಪಡೆಯಲಾಗಿದೆ. 9 ಜನ ಯುವಕರು, ಹಾಗೂ ನಾಲ್ಕು ಜನ ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ಈ ರೀತಿಯ ಪೆಟ್ರೋಲ್ ಬಾಂಬ್‌ಗಳನ್ನು ರಷ್ಯಾ ದೇಶದಲ್ಲಿ ಬಳಸಲಾಗುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಈ  ಪೆಟ್ರೋಲ್ ಬಾಂಬ್ ಬಳಸಲಾಗುತ್ತದೆ. ಒಟ್ಟು ದತ್ತಪೀಠ ಘಟನೆ ಸಂಬಂಧ 32 ಜನರನ್ನು ವಶಕ್ಕೆ ಪಡೆದು ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದರು.


Spread the love
1 Comment
Inline Feedbacks
View all comments
6 years ago

Annamalai sir is great. god give him more strength.