ಎಸ್‍ಎಸ್‍ಎಲ್‍ಸಿ ಫಲಿತಾಂಶ: ಆಳ್ವಾಸ್ ಶಾಲೆಗಳ ಸಾಧನೆ
ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ಶೇ.100 ಹಾಗೂ ಆಂಗ್ಲ ಮಾಧ್ಯಮ ಶಾಲೆ ಶೇ.98.43 ಫಲಿತಾಂಶ ದಾಖಲಿಸಿದೆ. ಆಳ್ವಾಸ್‍ನ ಮೂವರು ವಿದ್ಯಾರ್ಥಿಗಳು 623 ಅಂಕಗಳನ್ನು ಪಡೆದ ರಾಜ್ಯದಲ್ಲಿ ತೃತೀಯ ಸ್ಥಾನ ಹಾಗೂ ದ.ಕ ಜಿಲ್ಲೆಯ ಟಾಪ್ 10ರಲ್ಲಿ ನಾಲ್ವರು ಸ್ಥಾನವನ್ನು ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಶ್ರೀಯಾ ಪೈ, ಸುಜ್ಞಾನ್ ಆರ್ ಶೆಟ್ಟಿ, ವಿದ್ಯಾಶ್ರೀ ಯು. 625ರಲ್ಲಿ 623 ಅಂಕಗಳನ್ನು ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನಿಯಾಗಿದ್ದಾರೆ. ಸ್ಫೂರ್ತಿ ಮುರಳೀಧರ ಹುರಲಿ 622, ರಾಹುಲ್ ಯಾದವ್ 620 ಹಾಗೂ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮಂಜುನಾಥ ಮಲ್ಲಪ್ಪ 620 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 662 ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ 157 ಸೇರಿ ಒಟ್ಟು 819 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕನ್ನಡ ಮಾಧ್ಯಮದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಆಂಗ್ಲ ಮಾಧ್ಯಮ ಶಾಲೆಯ 652 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎರಡೂ ಶಾಲೆಗಳು ಸೇರಿ 88 ಮಂದಿ 600ಕ್ಕಿಂತ ಅಧಿಕ ಅಂಕವನ್ನು ಪಡೆದಿದ್ದಾರೆ. 119 ಮಂದಿ ಶೇ.95ಕ್ಕಿಂತ ಅಧಿಕ, 145 ಮಂದಿ ಶೇ.90ಕ್ಕಿಂತ ಅಧಿಕ, 123 ಮಂದಿ ಶೇ.85ಕ್ಕಿಂತ ಅಧಿಕ, 110 ಮಂದಿ 80ಕ್ಕಿಂತ ಅಧಿಕ, 104 ಮಂದಿ ಶೇ.75 ಅಧಿಕ, 81 ಮಂದಿ ವಿದ್ಯಾರ್ಥಿಗಳು ಶೇ.70ಕ್ಕಿಂತ ಅಧಿಕ, 67 ಮಂದಿ ಶೇ.65ಕ್ಕಿಂತ ಅಧಿಕ, 39 ಮಂದಿ ಶೇ.60ಕ್ಕಿಂತ ಅಧಿಕ, 20 ಮಂದಿ ಶೇ.55ಕ್ಕಿಂತ ಅಧಿಕ, 9 ಮಂದಿ ಶೇ.50ಕ್ಕಿಂತ ಅಧಿಕ, ಮೂವರು ಶೇ.45ಕ್ಕಿಂತ ಅಧಿಕ, ಒರ್ವ ವಿದ್ಯಾರ್ಥಿ ಶೇ.40ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಮೋಹನ ಆಳ್ವ ತಿಳಿಸಿದ್ದಾರೆ.
ಶಾಲೆಯ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಹನಾ ಪಿ.ಹೆಗ್ಡೆ, ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.