ಎಸ್ ಕ್ಯೂಲೆಂಟ್ ಗಾಲ 2020 – ಅಂತರ್ ಕಾಲೇಜು ಫುಡ್ ಫೆಸ್ಟ್
ವಿದ್ಯಾಗಿರಿ : ಇಂದಿನ ಯುಗದಲ್ಲಿ ನ್ಯೂಟ್ರಿಷನ್ ಯುಕ್ತ ಆಹಾರವನ್ನು ಯಾರು ಸೇವಿಸುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಬೆಂಗಳೂರಿನ ಗ್ಲೋಬಲ್ ಕಾಫಿ ಡೇಯ ಆರ್ ಆ್ಯಂಡ್ ಡಿ ವಿಭಾಗದ ನಿದೇರ್ಶಕ ಡಾ. ಪ್ರದೀಪ್ ಕೆಂಜಿಗೆ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ನ್ಯೂಟ್ರಿಷಿನ್ ವಿಭಾಗವು ಆಯೋಜಿಸಿದ್ದ ಎಸ್ಕ್ಯೂಲೆಂಟ್ ಗಾಲ 2020 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಿನ ಆಹಾರಗಳಲ್ಲಿ ನ್ಯೂಟ್ರಿಷನ್ ಅಂಶಗಳನ್ನು ಹುಡುಕುವುದೇ ಕಷ್ಟ. ಕೆಲವು ಆಹಾರೋತ್ಪನ್ನಗಳಲ್ಲಿ ನ್ಯೂಟ್ರಿಶಿಯನ್ಗಳನ್ನು ಸೇರಿಸಿಕೊಳ್ಳುವುದು ಕೂಡ ಕಷ್ಟ ಎಂದರು.
ಮಾರ್ಕೆಟ್ನಲ್ಲಿ ಉಳಿಯುವ ಮತ್ತು ಬೇಡಿಕೆ ಇರುವಂತಹ ಆಹಾರೋತ್ಪನ್ನಗಳು ತಯಾರಾಗಬೇಕು. ಮಾರ್ಕೆಟ್ನ ಅಧ್ಯಯನ ಕೂಡ ಆಹಾರ ಉತ್ಪನ್ನಗಳು ಬೇಡಿಕೆ ಪಡೆಯುವಲ್ಲಿ ಮುಖ್ಯವಾಗುತ್ತವೆ. ಆಹಾರ ಸಂರಕ್ಷಣೆ ಮಾಡುವುದರಲ್ಲಿ ಅನೇಕ ಬದಲಾವಣೆಯಾಗುತ್ತಿದೆ. ಪ್ಯಾಕೇಜಿಂಗ್, ಡಿಸೈನ್, ಗುಣಮಟ್ಟ, ಪ್ರಮಾಣ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಚಿಕ್ಕಮಗಳೂರಿನ ವೈಲ್ಡ್ಲೈಫ್ ಕನ್ಸ್ರ್ವೇಶನ್ ಆಕ್ಟಿವಿಸ್ಟ್ ಡಿ.ವಿ ಗಿರೀಶ್ ಮಾತನಾಡಿ, ಜಲ ಸಂರಕ್ಷಣೆ, ಆಹಾರದ ಸಮಸ್ಯೆ, ಜನಸಂಖ್ಯಾ ಸ್ಪೋಟ, ಪ್ಲಾಸ್ಟಿಕ್ ಭೂತ ಇಂದಿನ ಸಮಾಜದ ಮುಂದಿರುವ ಜ್ವಲಂತ ಸಮಸ್ಯೆಗಳಾಗಿವೆ. ಆದ್ದರಿಂದ ಯುವಜನತೆ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದು ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಜೀವನ ಶೈಲಿ ಬದಲಾದ ಹಾಗೆ ಆಹಾರ ಪದ್ದತಿಯು ಬದಲಾಗುತ್ತಿದೆ. ಆಹಾರ ಸೇವನೆಯಲ್ಲಿ ಮತ್ತು ಜೀವನ ಶೈಲಿಯಲ್ಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯ. ನ್ಯೂಟ್ರಿಷನ್ ಆಹಾರ ತಯಾರಿಕೆ ಅಥವಾ ಉತ್ಪಾದನೆಯೊಂದಿಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆಯನ್ನು ಕಂಡುಕೊಳ್ಳುಬಹುದು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸ್ನಾತಕೋತ್ತರ ಆಹಾರ ಮತ್ತು ವಿಜಾÐನ ವಿಭಾಗದ ಸಂಯೋಜಕಿ ಡಾ. ಅರ್ಚನಾ ಪ್ರಭಾತ್, ಪದವಿ ವಿಭಾಗದ ಮುಖ್ಯಸ್ಥೆ ಆಶಿತಾ ಎಮ್ ಪಿ, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರುಗಳಾದ ಶರತ್, ಅಮೂಲ್ಯ, ಆಶಿಕಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರವಲಿಕಾ ಸ್ವಾಗತಿಸಿ, ಜಯಶ್ರೀ ವಂದಿಸಿ, ಅಕ್ಷಯ್ ಕಾರ್ಯಕ್ರಮ ನಿರ್ವಹಿಸಿದರು.