ಎಸ್.ಐ.ಓ ತೋಕ್ಕೊಟ್ಟು ವತಿಯಿಂದ ವಿಧ್ಯಾರ್ಥಿ ಯುವಕರಿಗಾಗಿ ತರಬೇತಿ ಶಿಬಿರ
ಉಳ್ಳಾಲ: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗೈನೇಶನ್ ಆಫ್ ಇಂಡಿಯ ತೊಕ್ಕೂಟ್ಟು ವರ್ತುಲದ ವತಿಯಿಂದ ವಿಧ್ಯಾರ್ಥಿ ಯುವಕರನ್ನು ಮೌಲ್ಯಯುತವಾಗಿ ಸಜ್ಜುಗೊಳಿಸಲು “ಶಹಾದತೆ ಹಕ್” ಸತ್ಯದ ಶಾಕ್ಷಿ ಎಂಬ ಹೆಸರಿನಡಿಯಲ್ಲಿ ಎರಡು ದಿನದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವೆಲ್ಫೇರ್ ಪಾರ್ಟಿ ಉಳ್ಳಾಲ ಘಟಕದ ಅಧ್ಯಕ್ಷರಾದ ಸಿ ಎಚ್ ಸಲಾಮ್ ನಿರ್ವಹಿಸಿ ” ಇಂದಿನ ಸಮಾಜದಲ್ಲಿ ಯುವಕರು ಮತ್ತು ವಿಧ್ಯಾರ್ಥಿಗಳು ಕೆಡುಕಿನಡೆಗೆ ವೇಗವಾಗಿ ಸಾಗುತ್ತಿರು ಸಂಧರ್ಭಗಳಲ್ಲಿ ಒಳಿತಿನ ಬಗ್ಗೆ ಜಾಗ್ರತೆ ಮೂಡಿಸುವ ಇಂತಹ ಶಿಬಿರಗಳು ಅತ್ಯಗತ್ಯ” ಎಂದರು ,
ಮತ್ತೋರ್ವ ಮುಖ್ಯ ಅತಿಥಿ ಜಮಾಅತೆ ಇಸ್ಲಾಮಿ ಉಳ್ಳಾಲ ಅಧ್ಯಕ್ಷರಾದ ಅಬ್ದುಲ್ ಕರೀಂ ಕಾರ್ಯಕ್ರಮದ ಮುಖ್ಯ ಪ್ರಭಾಷನ ನೀಡಿದರು ,ಕೆ.ಮುಹಮ್ಮದ್ ಕುರ್ ಆನ್ ಮತ್ತು ವಿಜ್ಞಾನ ದ ಬಗ್ಗೆ ಮಾಹಿತಿ ನೀಡಿದರು
ಎಸ್.ಐ.ಓ ರಾಜ್ಯ ಕಾರ್ಯದರ್ಶಿ ದಾನಿಶ್ ಪಾಣೆಂಗಳೂರು ಮತ್ತು ಅಕೀಲ್ ಬೆಂಗಳೂರು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಮುನೀರ್ ಪದರಂಗಿ ಅನಾಹುತ ಮತ್ತು ಪ್ರತಮ ಚಿಕಿತ್ಸೆಯ ಬಗ್ಗೆ ಕಾರ್ಯಗಾರ ನಡೆಸಿಕೊಟ್ಟರು ಆಸಿಫ್ ಇಕ್ಬಾಲ್ ಗುರಿ ಮತ್ತು ಸಾಧನೆಯ ಬಗ್ಗೆ ಮನ ಮುಟ್ಟುವ ಶೈಲಿಯಲ್ಲಿ ವಿವರಿಸಿದರು ರಿಯಾಝ್ ಆಲಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು
ಎರಡನೆಯದಿನ ಸಿದ್ದೀಕ್ ಜಕ್ರಿಬೆಟ್ಟು ಶಿಕ್ಷಣದ ಬಗ್ಗೆ ಉದ್ಬೋದಿಸಿದರು , ಲತೀಫ್ ಆಲಿಯ ಪರಲೋಕದ ಬಗ್ಗೆ ವಿವರಿಸಿದರು. ಎಸ್.ಐ.ಓ ಮಾಜಿ ಅಧ್ಯಕ್ಷರಾದ ಮನ್ಸೂರ್ ಮತ್ತು ಮುಶ್ತಕ್ ಪಟ್ಲ ವಿಧ್ಯಾರ್ಥಿಗಳಲ್ಲಿ ಸಂವಾದ ನಡೆಸಿದರು . ಜಿಲ್ಲಾ ಕಾರ್ಯದರ್ಶಿ ನಿಝಾಮ್ ಉಪದೇಶಗಳನ್ನು ನೀಡಿದರು ಕಾರ್ಯಕ್ರಮದ ಬಾಗವಾಗಿ ಆಟೋಟ , ಕ್ವಿಜ್ ಸ್ಪರ್ಧೆ ,ಡಾಕಿಮೆಂಟರಿ ಶಾರ್ಟ ಫಿಲ್ಮಗಳನ್ನು ತೋರಿಸಲಾಯಿತು ಎಸ್.ಐ.ಓ ಉಳ್ಳಾಲ ಘಟಕದ ಅಧ್ಯಕ್ಷರಾದ ಅಶೀರುದ್ದೀನ್ ಅಧ್ಯಕ್ಷೀಯ ಭಾಷಣ ನೀಡಿದರು ವಿಧ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದ ನಂತರ ಎಸ್.ಐ.ಓ ಜಿಲ್ಲಾಧ್ಯಕ್ಷರಾದ ತಲ್ಹಾ ಇಸ್ಮಾಯಿಲ್ ಕೆ.ಪಿ ಕಾರ್ಯಕ್ರಮದ ಸಮಾರೋಪ ಭಾಷಣನೀಡಿದರು