Home Mangalorean News Kannada News ಎ.ಜೆ. ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿದ್ಯಾರ್ಥಿಗೆ ದಕ್ಷಿಣ ಭಾರತದ ಮೆಡಿಕೊ-ಲೀಗಲ್ ಅಸೋಸಿಯೇಷನ್ನನ...

ಎ.ಜೆ. ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿದ್ಯಾರ್ಥಿಗೆ ದಕ್ಷಿಣ ಭಾರತದ ಮೆಡಿಕೊ-ಲೀಗಲ್ ಅಸೋಸಿಯೇಷನ್ನನ 15ನೇ ವಾರ್ಷಿಕ ಸಮಾವೇಶದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ

Spread the love

ಎ.ಜೆ. ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿದ್ಯಾರ್ಥಿಗೆ ದಕ್ಷಿಣ ಭಾರತದ ಮೆಡಿಕೊ-ಲೀಗಲ್ ಅಸೋಸಿಯೇಷನ್ನನ 15ನೇ ವಾರ್ಷಿಕ ಸಮಾವೇಶದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ

ರಾಜ್ಯ ವೈದ್ಯಕೀಯ-ಕಾನೂನು ಸಂಸ್ಥೆ, ಸರ್ಕಾರಿ ವೈದ್ಯಕೀಯ ಕಾಲೇಜು, ತಿರುವನಂತಪುರಂ, ದಕ್ಷಿಣ ಭಾರತದ ಮೆಡಿಕೊ-ಲೀಗಲ್ ಅಸೋಸಿಯೇಷನ್ನ 15 ನೆಯ ವಾರ್ಷಿಕ ಸಮ್ಮೇಳನದ ಭಾಗವಾಗಿ ಆಯೋಜಿಸಿದ ದಕ್ಷಿಣ ಭಾರತದ ರಾಜ್ಯಗಳ ಫೋರೆನ್ಸಿಕ್ ಮೆಡಿಸಿನ್ ಮತ್ತು ವಿಷವೈದ್ಯ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳ ವಿಭಾಗದಲ್ಲಿರಸಪ್ರಶ್ನೆ ಆಯೋಜಿಸಿತ್ತು.

ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಫೋರೆನ್ಸಿಕ್ ಮೆಡಿಸಿನ್ ಮತ್ತು ವಿಷವೈದ್ಯ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಡಾ. ಗೌತಮ್ ಎನ್., ಎ.ಜೆ. ವೈದ್ಯಕೀಯ ಮಹಾವಿಧ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಫೋರೆನ್ಸಿಕ್ ಮೆಡಿಸಿನ್ ಮತ್ತು ವಿಷವೈದ್ಯ ಶಾಸ್ತ್ರದ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು.

ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ ಎ.ಜೆ. ಶೆಟ್ಟಿ; ಉಪಾಧ್ಯಕ್ಷರಾದ ಶ್ರೀ. ಪ್ರಶಾಂತ್ ಶೆಟ್ಟಿ; ಡೀನ್ ಡಾ. ಅಶೋಕ್ ಹೆಗ್ಡೆ; ಅಸೋಸಿಯೇಟ್ ಡೀನ್ಸ್ ಡಾ. ಮೋಹನ್ದಾಸ್ ರೈ ಮತ್ತು ಡಾ. ಫ್ರಾನ್ಸಿಸ್ ಎನ್.ಪಿ. ಮಾಂಟೆರೋ; ಮತ್ತು ಎಚ್.ಓ.ಡಿ. ಡಾ. ಜಯಪ್ರಕಾಶ್ ಕೆ. ಇವರು ಡಾ. ಗೌತಮ್ ಎನ್ ಅವರ ಪ್ರಶಂಸನೀಯ ಸಾಧನೆಗಾಗಿ ಅಭಿನಂದಿಸಿದರು.


Spread the love

Exit mobile version